ಮೈಸೂರಿನಲ್ಲಿ ಕೊರೋನಾಗೆ ಇಂದು 3 ಜನ ಬಲಿ ಸಂಜೆಗೆ ಧೃಡ

1265
Share

ಮೈಸೂರು
ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತ ಬಂದಿದೆ.
ಇಂದು ಸಂಜೆ ವೇಳೆಗೆ ಮೂರು ಮಂದಿ ಸಾವಿಗೆ ಮೃತಪಟ್ಟಿರುವ ಬಗ್ಗೆ ಖಚಿತವಾಗಿ ಪ್ರಕಟಣೆ ಹೊರ ಬರಲಿದೆ. ಮೈಸೂರಿನಲ್ಲಿ 45 ಕ್ಕೂ ಹೆಚ್ಚು ಮಂದಿಗೆ ಸೋಂಕು ಹೊರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು 50ಕ್ಕೂ ಹೆಚ್ಚು ಸೋಂಕಿತರು ದೃಢಪಟ್ಟರೆ ಆಶ್ಚರ್ಯ ಇಲ್ಲ. ನಗರದ ವಿವಿಧ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪೊಲೀಸರು ಪ್ರಾಥಮಿಕ ಸೋಂಕಿನಿಂದ ಮನೆಯಲ್ಲಿ ಇದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ನಗರದಲ್ಲಿ ಎರಡರಿಂದ ಮೂರು ಪೊಲೀಸ್ ಠಾಣೆಗಳು ಸೀಲ್ಡೌನ್ ಮಾಡುವ ಹಂತಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ವಿಜಯನಗರದ ಪೊಲೀಸ್ ಠಾಣೆ ಸೀಲ್ ಡೌನ್ ಆಗುವುದು ಬಹುತೇಕ ಖಚಿತವಾಗಿದೆ.ಮೈಸೂರು ನಗರ ವಾರ್ಡ್ ಇಪ್ಪತ್ತು ನಾಲ್ಕುಮಂಡಿ ಮೊಹಲ್ಲಾ ಅಕ್ಬರ್ ರಸ್ತೆ ಸೇರಿದಂತೆ ಇರುವ ಸೊಪ್ಪಿನ ಕೇರಿ ಎರಡನೇ ಕ್ರಾಸಿನಲ್ಲಿ ನಿನ್ನೆಯ ದಿನ ಸೀಲ್ ಡೌನ್ ಮಾಡಲಾಗಿದೆ.ನರ್ಸ್ ಒಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದ್ದು ತಕ್ಷಣವೇ ಸದರಿ ರಸ್ತೆಯ ಕೇವಲ ಮೂರು ನಾಲ್ಕು ಮನೆ ಸೇರಿದಂತೆ ಸೀಲ್ ಡೌನ್ ಮಾಡಲಾಗಿದೆ ಇಡೀ ರಸ್ತೆಯನ್ನು ಮಾಡಿಲ್ಲ .ಪೂರ್ತಿ ರಸ್ತೆ ಸೀಲ್ ಡೌನ್ ಮಾಡಿದ್ದೇ ಆದರೆ ಸಾರ್ವಜನಿಕರಿಗೆ ಬಹಳ ಕಷ್ಟವಾಗಬಹುದೆಂದು ,ಕರೋನಾ ವೈರಾಣು ಲಕ್ಷಣ ಕಂಡು ಬಂದ ವ್ಯಕ್ತಿ ಅಥವಾ ಮನೆಯ ಆಸುಪಾಸಿನ ಕೆಲ ಗಜಗಳ ವರೆಗೆ ಸೀಲ್ ಡೌನ್ ಮಾಡಿ ಅಕ್ಕ ಪಕ್ಕದ ಮನೆಯವರನ್ನು ಟೆಸ್ಟಿಗೆ ಒಳಪಡಿಸುವ ಹೊಸ ರೀತಿಯ ಕಾರ್ಯವನ್ನು ಜಿಲ್ಲಾ ಆಡಳಿತವು ಕೈಗೊಂಡಿದೆ . ಜನನಿಬೀಡ ಪ್ರದೇಶವಾದ ಮಂಡಿ ಮೊಹಲ್ಲಾದಲ್ಲಿ ಆಗಿಂದಾಗ್ಗೆ ಸೀಲ್ ಡೌನ್ ಆಗುತ್ತಿರುವುದು ಜನರಲ್ಲಿ ಬಹಳ ಆತಂಕ ಮೂಡಿಸಿದೆ.ಪೂರ್ಣ ಮಂಡಿ ಮೊಹಲ್ಲಾ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ಮೂರು ದಿನಗಳಿಗೊಮ್ಮೆ ನಗರಪಾಲಿಕೆಯು ಸ್ಯಾನಿಟೇಷನ್‌ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ .


Share