ಮೈಸೂರು ಕೋವಿಡ್ ಮುಕ್ತ-ವಾರ್ಡ್‌ಗಳು ಮತ್ತು ಪಂಚಾಯತ್‌ಗಳಲ್ಲಿ ಸ್ಪರ್ಧೆ….

350
Share

*ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ*

ವೈದ್ಯರ ದಿನಾಚರಣೆಯಂದು ಮೈಸೂರು ಕೋವಿಡ್ ಮುಕ್ತ

ವಾರ್ಡ್‌ಗಳು ಮತ್ತು ಪಂಚಾಯತ್‌ಗಳಲ್ಲಿ ಸ್ಪರ್ಧೆ ಏರ್ಪಡಿಸಲು ನಿರ್ಧರಿಸಲಾಗಿದೆ

ಪಂಚಾಯತ್‌ಗಳು ಮತ್ತು ವಾರ್ಡ್‌ಗಳ ಪ್ರಗತಿ ಬಗ್ಗೆ ಪ್ರತಿ ದಿನ ಪತ್ರಿಕಾ ಪ್ರಕಟಣೆ ಬಿಡುಗಡೆ.

*ಮಹಿಳೆಯರು*

ಮನೆ ಮನೆ ಸಮೀಕ್ಷೆ ನಡೆಸುವಾಗ ವಿಶೇಷವಾಗಿ ಮಹಿಳೆಯರ ಮೇಲೆ ಹೆಚ್ಚು ನಿಗಾ ವಹಿಸಬೇಕಾಗಿದೆ. ಅವರು ರೋಗವನ್ನು ಕಡೆಗಣಿಸುವುದಲ್ಲದೆ, ರೋಗದ ಲಕ್ಷಣಗಳು ಕಾಣಿಸಿಕೊಂಡರೂ ಮಾಹಿತಿ ನೀಡುವುದಿಲ್ಲ. ಹೀಗಾಗಿ ಅವರ ಮೇಲೆ ನಿಗಾ ವಹಿಸುವುದಲ್ಲದೆ, ಅವರನ್ನು ಸಿಸಿಸಿ ಕೇಂದ್ರಗಳಿಗೆ ಬರುವಂತೆ ಮನವೋಲಿಸಬೇಕಾಗಿದೆ.
ಮೈಸೂರು ನಗರ ಪಾಲಿಕೆಯು ಕೋವಿಡ್ ಕೇರ್ ಸೆಂಟರ್ ಗಳನ್ನು ವಿಧಾನಸಭಾ ಕ್ಷೇತ್ರವಾರು, ವಾಡ್೯ವಾರು ಗುರುತಿಸಿದ್ದು, ಸ್ವಯಂ ಸೇವಕರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸುವ ಮೂಲಕ ಕೋವಿಡ್ ಮಿತ್ರ ಯಶಸ್ವಿಯಾಗಲು ಕಾರಣರಾಗಿದ್ದಾರೆ.

*ಬ್ಲಾಕ್ ಫಂಗಸ್*
ಬೇಗ ಪತ್ತೆ ಹಚ್ಚಿ, ಚಿಕಿತ್ಸೆ ನೀಡಲು ವಿಶೇಷ ಒತ್ತು ನೀಡಬೇಕಾಗಿದೆ‌. ಬೇಗ ಬ್ಲಾಕ್ ಫಂಗಸ್ ರೋಗವನ್ನು ಪತ್ತೆ ಹಚ್ಚಿ ತಪಾಸಣೆ ಮಾಡಿ, ಟೆಲಿ ಆರೈಕೆ ಮಾಡುವ ಸಂಬಂಧ ವೈದ್ಯರೊಂದಿಗೆ ಚೆರ್ಚೆ ಮಾಡಲಾಗಿದೆ.

ಮೇಲೆ ಒತ್ತು ನೀಡಲಾದ 3 ವಿಷಯಗಳನ್ನು ಅನುಷ್ಠಾನಗೊಳಿಸಲು ಸ್ವಯಂಸೇವಕರು ಮತ್ತು ನಾಗರಿಕ ಸಮಾಜ ಕೈಜೋಡಿಸುವುದು.

ಕೋವಿಡ್ ವಾರ್ ರೂಂ, ಕೋವಿಡ್ ಮಿತ್ರ,ಟೆಲಿ ಆರೈಕೆ ಮುಂತಾದವುಗಳನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಸ್ವಯಂ ಸೇವಕರು, ಸಿಟಿಜನ್ ಫೋರಂ ಆಫ್ ಮೈಸೂರು, ಎನ್.ಸಿ.ಸಿ, ರೋಟರಿ ಸೇರಿದಂತೆ ಹಲವಾರು ಸಂಘ ಸಂಸ್ಥೆಯವರು ಕೈಜೋಡಿಸಿದ್ದಾರೆ.

ಈ ನಾಗರಿಕ ಸಮಾಜದ ಅತ್ಯುತ್ತಮ ಪ್ರಯತ್ನಕ್ಕೆ ಜಿಲ್ಲಾಡಳಿತ ಕೃತಜ್ಞತೆ ಸಲ್ಲಿಸುತ್ತದೆ. ಈ ಮೇಲಿನ ಮೂರು ವಿಷಯದಲ್ಲಿ ಇನ್ನು ಮುಂದೆಯೂ ಇದೇ ರೀತಿಯ ಬೆಂಬಲವನ್ನು ಜಿಲ್ಲಾಡಳಿತ ಬಯಸುತ್ತದೆ.

ಜಿಲ್ಲಾಧಿಕಾರಿಗಳು,
ಮೈಸೂರು


Share