ಮೈಸೂರು-ಡಿಸೆಂಬರ್ 30, 31 ರಂದು ವಿದ್ಯುತ್ ವ್ಯತ್ಯಯ

316
Share

ಡಿಸೆಂಬರ್ 30, 31 ರಂದು ವಿದ್ಯುತ್ ವ್ಯತ್ಯಯ
ಮೈಸೂರು, :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 66/11 ಕೆ.ವಿ. ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ 11 ಕೆ.ವಿ. ಪ್ಯಾಲೇಸ್ ಫೀಡರ್ ಹಾಗೂ 66/11 ಕೆ.ವಿ. ಎಫ್‍ಟಿಎಸ್ ವಿದ್ಯುತ್ ವಿತರಣಾ ಕೇಂದ್ರ ದಿಂಗ ಹೊರಹೊಮ್ಮುವ 66/11 ಕೆ.ವಿ. “ಬಿ” ಸಕ್ರ್ಯೂಟ್  ಫೀಡರ್‍ಗಳಲ್ಲಿ ಡಿಸೆಂಬರ್ 30 ಹಾಗೂ 31 ರಂದು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಗಾಂಧಿ ಸ್ಕ್ವೈರ್, ರವೆ ಬೀದಿ, ಅಶೋಕ ರಸ್ತೆ, ದೊಡ್ಡಗಡಿಯಾರ ಸುತ್ತ-ಮುತ್ತ, ಸಂಗಂ ಟಾಕೀಸ್, ಚಂದ್ರಗುಪ್ತ ರಸ್ತೆ, ಹಳ್ಳದಕೇರಿ, ಸಬರ್ಬನ್ ಬಸ್ ನಿಲ್ದಾಣದ ಹಿಂಭಾಗ, ಜೈನ್ ಟೆಂಪಲ್, ಒಲಂಪಿಯಾ ಟಾಕೀಸ್ ಸುತ್ತ-ಮುತ್ತ, ಅರಸು ಕಾಂಪ್ಲೆಕ್ಸ್, ಮಕ್ಕಾಜಿ ಚೌಕ, ಪ್ರಭಾ ಟಾಕೀಸ್ ಸುತ್ತ-ಮುತ್ತ, ಸಯ್ಯಾಜಿರಾವ್ ರಸ್ತೆ ಹಿಂಭಾಗ ಹಾಗೂ ಅಪೆರಾ ಟಾಕೀಸ್, ಆಂಜನೇಯ ಸ್ವಾಮಿ ದೇವಸ್ಥಾನ, ಹರ್ಷ ರಸ್ತೆ, ಇರ್ವಿನ್ ರಸ್ತೆ, ಮಸೀದಿ ಹಿಂಭಾಗ, ರಾಜ್‍ಕುಮಾರ್ ಉದ್ಯಾನವನ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ.ಮೊಹಲ್ಲಾದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share