ಮೈಸೂರು- ಡಿ.17ರ೦ದು ಅಣ್ಣಾವ್ರ ಹಾಡು ಕಾರ್ಯಕ್ರಮ

194
Share

ಮೈಸೂರು -ನಗರದ ಡಾ. ರಾಜಕುಮಾರ್ ಮ್ಯೂಸಿಕಲ್ ಗ್ರೂಪ್ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಿಸೆಂಬರ್ 17ರಂದು ನಗರದ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಸಂಜೆ 5:00 ಯಿಂದ 9:00ಯವರೆಗೆ ಅಣ್ಣಾವರ ಹಾಡುಗಳು ಶೀರ್ಷಿಕೆ ಇಡಿ ರಾಜಕುಮಾರ್ ಹಾಡಿರುವ ಚಲನಚಿತ್ರ ಗೀತೆಗಳ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮ್ಯೂಸಿಕಲ್ ಗ್ರೂಪಿನ ಸುಧೀಂದ್ರ ಅವರು ತಿಳಿಸಿದರು ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ನಿರ್ಮಾಪಕರಾದ ಶ್ರೀನಿವಾಸ್ ಮತ್ತು ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕರಾದ ಹಾಗೂ ಅಧ್ಯಕ್ಷರಾದ ರಾಮೇಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ವಿವರ ನೀಡಿದರು ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸುಧೀಂದ್ರ ಬಾಲು ಪ್ರಕಾಶ್ ಶ್ರೀಕಂಠ ರಾವ್ ಸುಜೇಂದ್ರ ಸೂರಿ ಮುಂತಾದವರು ಉಪಸ್ಥಿತರಿದ್ದರು

Share