ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅ೦ಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 37

916
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 37
ನಿನ್ನೆ ಲಕ್ಷ್ಮಿಯು ಸಹಸ್ರ ದಳ ಪದ್ಮ ಸೇರಿದ್ದನ್ನು ಕೇಳಿದ್ದೆವು.
ಇಂದು ಎಲ್ಲರೂ ನೋಡಲೇಬೇಕಾದ ಸಂಚಿಕೆ. ಕಾರಣ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ ತಿರುಮಲ ದೇವಸ್ಥಾನ ಏಕೆ ಮತ್ತು ಹೇಗೆ ಆರಂಭವಾಯಿತು ಎನ್ನುವ ಚರಿತ್ರೆಯನ್ನು ಬಹಳ ಸುಂದರ ವಾಗಿ ವರ್ಣಿಸಿದ್ದಾರೆ.
ಭೃಗುವು ಕ್ಷಮೆಯಾಚಿಸುತ್ತಾನೆ ಲಕ್ಷ್ಮೀ ದೇವಿಗೆ. ತನ್ನ ಹೃದಯದಲ್ಲಿ ನೆಲೆಸಿರುವ ಲಕ್ಷ್ಮಿ ಯನ್ನು ಹೊರಕರೆದು ಶ್ರೀನಿವಾಸನು ತಿರುಮಲಕ್ಕೆ ಕರೆದೆಯ್ಯುತ್ತಾನೆ. ಪದ್ಮಾವತಿ ಇಬ್ಬರಿಗೂ ಆರತಿ ಎತ್ತಿ ಸಂತೋಷದಿಂದ ಬರಮಾಡಿಕೊಳ್ಳುತ್ತಾಳೆ.
ಶ್ರೀನಿವಾಸನು ಹೇಳುತ್ತಾನೆ ತಾನು ಕುಬೇರನ ಸಾಲ ತೀರಿಸಬೇಕು ಹಾಗಾಗಿ ಕಲಿಯುಗದ ಅಂತ್ಯದವರೆಗೂ ಭೂಲೋಕದಲ್ಲಿ ನೆಲೆಸುವುದಾಗಿ ಹೇಳುತ್ತಾನೆ.
ಲಕ್ಷ್ಮಿಯು ತಾನಿರಬೇಕಾದರೆ ಸಾಲದ ಬಗ್ಗೆ ಏಕೆ ಚಿಂತೆ ಎಂಬುದನ್ನು ಸರಿಯಾಗಿ ವಿವರಿಸಿ ಎಂದು ಕೇಳುತ್ತಾಳೆ.
ಅದಕ್ಕೆ ಶ್ರೀನಿವಾಸನು ಈ ರೀತಿ ಉತ್ತರಿಸುತ್ತಾನೆ. ಖಂಡಿತವಾಗಿಯು ಸಾಲ ತೀರಿಸುವುದಲ್ಲ ವಿಷಯ, ಈ ಲೋಕದ ಜನರಿಗೆ ಧರ್ಮ ಅಧರ್ಮದ ಬಗ್ಗೆ ತಿಳಿಸಬೇಕು. ಕಲಿಯುಗದಲ್ಲಿ ಮಾನವನಿಗೆ ಹಣವೇ ಸರ್ವಸ್ವ, ಅದು ಪಾಪದ ಗಣವಾದರೂ ಸರಿ. ಆದರೆ ಯಾವಾಗ ಪಾಪದ ಫಲ ಕಾಡಲು ಆರಂಭವಾಗುತ್ತದೋ ಆಗ ಗೋವಿಂದ ಸ್ಮರಣೆ ಮಾಡುತ್ತ ನನ್ನ ಬಳಿ ಬರುತ್ತಾರೆ. ತಮ್ಮ ಕಷ್ಟ ಪರಿಹಾರವಾದ ಮೇಲೆ ಹಣವನ್ನು ನನ್ನ ಹುಂಡಿಗೆ ಹಾಕುತ್ತಾರೆ. ನನ್ನ ಬಳಿ ಬಂದು ಹಣ ಯಾಚಿಸಿದವರಿಗೆ ಅದನ್ನು ನೀಡುತ್ತೇನೆ. ಪುಣ್ಯದಿಂದ ಬಂದ ಹಣದ ಒಂದು ಭಾಗವನ್ನು ಸಾಲದ ಬಡ್ಡಿ ಯಾಗಿ ಕುಬೇರನಿಗೆ ನೀಡುತ್ತೇನೆ ಎನ್ನುತ್ತಾನೆ. ಇದಕ್ಕೆ ಲಕ್ಷ್ಮಿಯ ಸಹಾಯವನ್ನು ಕೇಳುತ್ತಾನೆ.
ಲಕ್ಷ್ಮಿ ತಾನು ಏನು ಮಾಡಬೇಕೆಂದು ಕೇಳಿದಾಗ ಯಾರು ಗೋವಿಂದನನ್ನು ಭಕ್ತಿಯಿಂದ ಸ್ಮರಿಸುತ್ತಾರೋ ಅವರಿಗೆ ಐಶ್ವರ್ಯ ನೀಡಬೇಕೆನ್ನುತ್ತಾನೆ. ಲಕ್ಷ್ಮಿಯು ಶ್ರೀನಿವಾಸನು ತನ್ನ ಭಕ್ತರಿಗೋಸ್ಕರ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನೋಡಿ ಮೂಕವಿಸ್ಮಿತಳಾಗಿ ಒಪ್ಪುತ್ತಾಳೆ.
‘ ಶ್ರೀನಿವಾಸ ಪಾಪ ನಾಶ ರಕ್ಷಿಸೋ
ನಿನಗೆ ಶಕಣು ಮೋಕ್ಷ ಮಾರ್ಗ ತೋರಿಸೋ ‘
ಎಂಬ ಅದ್ಭುತವಾದ ಕೀರ್ತನೆಯನ್ನು ಸ್ವಾಮೀಜಿ ಯವರು ರಚಿಸಿ ಹಾಡಿದ್ದಾರೆ.
ನಂತರ ಶ್ರೀನಿವಾಸನು ತನಗೋಸ್ಕರ ಒಂದು ಆಲಯವನ್ನು ನಿರ್ಮಿಸಬೇಕೆಂದು ಕೇಳಲು ತೋಂಡಮಾನ ಬಹಳ ಸಂತಸದಿಂದ ಒಪ್ಪುತ್ತಾನೆ. ಸ್ವಾಮಿಯು ಮಂದಿರ ಹೇಗಿರಬೇಕೆಂದು ಈ ರೀತಿ ಹೇಳುತ್ತಾನೆ. ಆಲಯವು ಪುಷ್ಕರಿಣಿಯ ಎಡ ಭಾಗದಲ್ಲಿ ಪೂರ್ವಾಭಿಮುಖವಾಗಿರಬೇಕು, ಎರಡು ಗೋಪುರ, ಮೂರು ಪ್ರಾಕಾರ, ಸಪ್ತದ್ವಾರ, ಗೋಶಾಲೆ, ಧಾನ್ಯಶಾಲೆ, ಯಾಗಶಾಲೆ, ಮಾಲಶಾಲೆ, ವಸ್ತ್ರ ಶಾಲೆ, ಆಸ್ಥಾನ ಮಂಟಪ, ಪಾಕಶಾಲೆ ಭೂಷಣಶಾಲೆ ಎಲ್ಲವೂ ಇರಬೇಕೆಂದು ಸ್ವಾಮೀಯೇ ಖುದ್ದಾಗಿ ಹೇಳುತ್ತಾನೆ.
ಇಂತಹ ಮುಖ್ಯ ಸಂಚಿಕೆಯನ್ನು ತಪ್ಪಿಸಲು ಸಾಧ್ಯವೇ? ಇಲ್ಲವಂದಮೇಲೆ ತಡವೇಕೆ ನೋಡಿ ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share