ಮೈಸೂರು ಪತ್ರಿಕೆ: ಆಧ್ಯಾತ್ಮಿಕ ಅಂಗಳ ಶ್ರೀ ಶ್ರೀಪಾದವಲ್ಲಭ ಚರಿತ್ರೆ. ಪುಟ – 56

651
Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ

ಅಧ್ಯಾಯ – 7

ವಿ.ಸೂ. : ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ಪುಟ – 56

ನರಸಾವಧಾನಿಗಳಿಗೂ ಅವರ ಪೂಜಾ ಮಂದಿರದಲ್ಲಿ ದರ್ಶನ ಕೊಟ್ಟ ಶ್ರೀಪಾದವಲ್ಲಭರಿಗೂ ನಡೆದ ಸಂಭಾಷಣೆ,
ನರಸಾವಧಾನಿಗಳಿಗೆ ಶ್ರೀಪಾದರ ಉಪದೇಶಗಳು

ಪ್ರಶ್ನೆ : ನೀನು ಯಾರು ? ದೇವತೆಯೇ ? ಯಕ್ಷನೇ ? ಮಾಂತ್ರಿಕನೇ ?
ಉತ್ತರ : ನಾನು ನಾನೇ ! ಪಂಚಭೂತಾತ್ಮಕವಾಗಿರುವ ಈ ಸೃಷ್ಟಿಯಲ್ಲಿ ಪ್ರತಿ ಅಣು ಅಣುವಿನಲ್ಲೂ ಅಂತರ್ಲಿನವಾಗಿರುವ ಆದ್ಯ ಶಕ್ತಿಯು ನಾನೇ ! ಪಶುಪಕ್ಷಾದಿಗಳನ್ನು ಮೊದಲುಗೊಂಡು ಸಮಸ್ತ ಪ್ರಾಣಿ ಕೋಟೆಯಲ್ಲಿಯೂ ಮಾತೃ ಸ್ವರೂಪನಾಗಿಯೂ ಪಿತೃ ಸ್ವರೂಪನಾಗಿಯೂ ಇರುವವನು ಕೂಡಾ ನಾನೇ ! ಸಮಸ್ತ ಸೃಷ್ಟಿಗೆ ಗುರು ಸ್ವರೂಪನು ಕೂಡಾ ನಾನೇ !
ಪ್ರಶ್ನೆ : ಅಂದರೆ ನೀನು ದತ್ತಪ್ರಭುಗಳ ಅವತಾರವೇ ?
ಉತ್ತರ : ನಿಸ್ಸಂಶಯವಾಗಿಯೂ ನಾನು ದತ್ತನೇ ! ನೀವು ಶರೀರಧಾರಿಗಳಾಗಿರುವುದರಿಂದ ನೀವು ಗುರುತಿಸುವುದಕ್ಕೋಸ್ಕರ ನಾನು ಸಶರೀರನಾಗಿ ಬಂದಿದ್ದೇನೆ. ವಾಸ್ತವವಾಗಿ ನಾನು ನಿರಾಕಾರನು, ನಿರ್ಗುಣನು,
ಪ್ರಶ್ನೆ : ಆಂದರೆ ನಿನಗೆ ಆಕಾರವೂ ಇಲ್ಲ, ಗುಣಗಳೂ ಇಲ್ಲ, ಅಷ್ಟೇ ಅಲ್ಲವೇ
ಉತ್ತರ : ಆಕಾರವಿಲ್ಲದಿರುವುದು ಕೂಡ ಒಂದು ಆಕಾರವೇ ! ಗುಣಗಳು ಇಲ್ಲದಿರುವುದು ಕೂಡ ಒಂದು ಗುಣವೇ ! ಸಾಕಾರ ನಿರಾಕಾರಗಳಿಗೆ ಸಗುಣ ನಿರ್ಗುಣಗಳಿಗೆ ಆಧಾರವಾಗಿರುವ ನಾನು ಅವಕ್ಕೂ ಕೂಡ ಅತೀತನು. ಪ್ರಶ್ನೆ : ಎಲ್ಲಾ ನೀನೇ ಆಗಿರುವಾಗ ಜೀವಿಗಳಿಗೆ ಕಷ್ಟ ಸುಖಗಳು ಯಾಕೆ ?
ಉತ್ತರ : ನಿನ್ನಲ್ಲಿ ನೀನು ನಾನು ಕೂಡ ಇದ್ದೇವೆ. ಆದರೆ ನಿನ್ನಲ್ಲಿರುವ ನೀನು ಜೀವಿ. ನಿನ್ನಲ್ಲಿರುವ ನಾನು ಮಾತ್ರ ಪರಮಾತ್ಮನು. ನಿನಗೆ ಕರ್ತೃತ್ವ ಭಾವನೆ ಇರುವವರೆಗೆ ನೀನು ನಾನಾಗಲಾರೆ. ಅಲ್ಲಿಯವರೆಗೆ ಸುಖ ದುಃಖಗಳು, ಪಾಪ ಪುಣ್ಯಗಳು ಎನ್ನುವ ದ್ವಂದ್ವಗಳಿಂದ ನೀನು ಹೊರಬರಲಾರೆ. ನಿನ್ನಲ್ಲಿರುವ ‘ ನಾನು ‘ ಉಚ್ಛದೆಸೆಯನ್ನು ತಲುಪಿದರೆ ಮಾತ್ರವೇ ನೀನು ನನಗೆ ಹತ್ತಿರವಾಗುವೆ. ನನಗೆ ಹುರವಾಗುತ್ತಾ ಹೋದ ಹಾಗೆ ನಿನ್ನ ಜವಾಬ್ದಾರಿಯು ಕಡಿಮೆಯಾಗುತ್ತಾ ಹೋಗುತ್ತದೆ. ನನ್ನ ಜವಾಬ್ದಾರಿಯಲ್ಲಿ ನೀನು ಇದ್ದರೆ ನಿನಗೆ ಶ್ರೇಯಸ್ಸುಂಟಾಗುವುದು.
ಪ್ರಶ್ನೆ : ಜೀವಾತ್ಮ ಪರಮಾತ್ಮ ಬೇರೆ ಬೇರೆಯೆಂದು ಕೆಲವರು ಹೇಳುತ್ತಾರೆ. ಜೀವಾತ್ಮನು ಪರಮಾತ್ಮನಿಗೆ ಅತ್ಯಂತ ಸಮೀಪದವನು ಎಂದು ಇನ್ನು ಕೆಲವರು ಹೇಳುತ್ತಾರೆ. ಜೀವಿಯೇ ಪರಮಾತ್ಮನೆಂದು ಇನ್ನೂ ಕೆಲವರು ಹೇಳುತ್ತಾರೆ. ಇದರಲ್ಲಿ ನಿಜವಾವುದು ?
ಉತ್ತರ : ನೀನು ಬೇರೆಯಾಗಿಯೂ ನಾನು ಬೇರೆಯಾಗಿಯೂ ಇದ್ದ ಮಾತ್ರಕ್ಕೆ ನಷ್ಟವೇನೂ ಇಲ್ಲ ನಿನ್ನಲ್ಲಿರುವ ಅಹಂಕಾರವು ನಾಶವಾಗಿ ನಾವಿಬ್ಬರೂ ಧ್ವೈತ ಸ್ಥಿತಿಯಲ್ಲಿದ್ದರೆ ಶ್ರೇಯಸ್ಸು ಲಭ್ಯವಾಗುತ್ತದೆ. ಸಮಸ್ತವೂ ನನ್ನ ಅನುಗ್ರಹದಿಂದಲೇ ನಡೆಯುತ್ತಿದೆಯೆಂದೂ, ನೀನು ಕೇವಲ ನಿಮಿತ್ತ ಮಾತ್ರ ಎಂಬ ತತ್ತ್ವ ತಿಳಿದುಕೊಂಡರೆ ನೀನು ಆನಂದ ಸ್ಥಿತಿಯಲ್ಲಿ ಇರಬಲ್ಲೆ. ಮೋಹಕ್ಷಯವೇ ಮೋಕ್ಷವಾಗಿರುವುದರಿಂದ ನೀನು ದೈತ ಸ್ಥಿತಿಯಲ್ಲಿಯೂ ಮೋಕ್ಷವನ್ನು ಅನುಭವಿಸಬಲ್ಲೆ ನೀನು ನನಗೆ ಅತ್ಯಂತ ಸಮೀಪದಲ್ಲಿದ್ದರೆ ನಾನು ನಿನ್ನ ಮೂಲಕ ಅಭಿವ್ಯಕ್ತವಾಗಬಲ್ಲ ನನ್ನ ಸರ್ವಶಕ್ತಿಗಳೂ ನಿನ್ನ ಮೂಲಕ ಅಭಿವ್ಯಕ್ತವಾಗುತ್ತಿದ್ದರೆ, ನಿನ್ನ ಅಹಂಕಾರವು ನಶಿಸಿ ಹೋಗಿ ಕರ್ತೃತ್ವ ಭಾವವು ಸಂಪೂರ್ಣವಾಗಿ ಹೋಗಿದ್ದಾಗ ‘ ನೀನು ‘ ಅನ್ನುವುದು ಉಳಿಯದೆ ‘ ನಾನು ‘ ಅನ್ನುವುದು ಮಾತ್ರ ಉಳಿಯುವುದರಿಂದ ಮನಸ್ಸು ಎಷ್ಟು ಮಾತ್ರವೂ ಕೆಲಸ ಮಾಡದ ಆ ಸ್ಥಿತಿಯಲ್ಲಿ ನೀನು ಬ್ರಹ್ಮಾನಂದದಲ್ಲಿ ಇರುತ್ತೀಯೆ. ಆದುದರಿಂದ ಅದ್ವೈತಸ್ಥಿತಿಯಲ್ಲಿದ್ದರೂ ನೀನು ಮೋಕ್ಷವನ್ನು ಹೊಂದಬಲ್ಲೆ. ನೀನು ದ್ವೈತದಲ್ಲಿದ್ದರೂ , ವಿಶಿಷ್ಟಾದ್ವೈತದಲ್ಲಿದ್ದರೂ , ಅದ್ವೈತದಲ್ಲಿದ್ದರೂ ಅನುಭವಿಸುವ ಬ್ರಹ್ಮಾನಂದ ಸ್ಥಿತಿ ಮಾತ್ರ ಒಂದೇ.
ಪ್ರಶ್ನೆ : ಅವಧೂತ ಸ್ಥಿತಿಯಲ್ಲಿರುವ ಕೆಲವರು ತಾವೇ ಬ್ರಹ್ಮ ಎಂದು ಹೇಳುತ್ತಿರುತ್ತಾರಲ್ಲವೆ ? ಹಾಗಾದರೆ ನೀನು ಕೂಡ ಅವದೂತನೇ ?
ಉತ್ತರ : ಅಲ್ಲ , ನಾನು ಅವಧೂತನು ಅಲ್ಲ. ‘ ನಾನು ಬ್ರಹ್ಮ, ಬ್ರಹ್ಮವೇ ಎಲ್ಲವೂ ‘ ಎನ್ನುವುದು ಅವಧೂತ ಅನುಭವ. “ ನಾನು ಬ್ರಹ್ಮ , ನಾನೇ ಸರ್ವಸ್ವವೂ ” ಅನ್ನುವ ಸ್ಥಿತಿ ನನ್ನದು.
ಪ್ರಶ್ನೆ : ಆದರೂ ಈ ಸ್ವಲ್ಪ ವ್ಯತ್ಯಾಸದಲ್ಲಿರುವ ರಹಸ್ಯವು ನನಗೆ ಅರ್ಥವಾಗಲಿಲ್ಲ.
ಉತ್ತರ : ಸಮಸ್ತ ಪ್ರಾಪಂಚಿಕ ಬಂಧನಗಳಿಂದ ಬಿಡುಗಡೆ ಹೊಂದಿದ ಅವಧೂತನು, ನನ್ನಲ್ಲಿ ಲೀನವಾಗಿ ಬ್ರಹ್ಮಾನಂದ ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಆತನಲ್ಲಿ ವ್ಯಕ್ತಿತ್ವ ಎನ್ನುವುದು ಇಲ್ಲ. ವ್ಯಕ್ತಿತ್ವವು ಇಲ್ಲದಾಗ ಸಂಕಲ್ಪವು ಇಲ್ಲ. ಈ ಸೃಷ್ಟಿಯ ಮಹಾಸಂಕಲ್ಪದಲ್ಲಿ ಮಹಾಶಕ್ತಿಯಲ್ಲಿ ನಾನು ಇದ್ದೀನಿ. ಜೀವಿಗಳು ಎನ್ನುವ ಮಾಯಾಶಕ್ತಿ ರೂಪದಲ್ಲಿಯೂ ನಾನಿದ್ದೀನಿ. ನನ್ನಲ್ಲಿ ಲೀನವಾಗಿರುವ ಅವಧೂತನಾದ ನೀನು ಮತ್ತೆ ಜನ್ಮವತ್ತಿ ಬರಬೇಕೆಂದು ಆಜ್ಞಾಪಿಸಿದರೆ ಜನ್ಮವೆತ್ತಬೇಕಾದದ್ದೇ. ಸಂಕಲ್ಪದಿಂದ ಕೂಡಿದ ಸತ್ಯ ಜ್ಞಾನಾನಂದ ರೂಪವು ನನ್ನದು. ಸಂಕಲ್ಪ ನಶಿಸಿದ ಸತ್ಯಜ್ಞಾನಾನಂದ ರೂಪ ಅವರದು.
( ಮುಂದುವರೆಯುವುದು )
ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 57

ಅಣ್ಣ ತಮ್ಮಂದಿರಿಲ್ಲ, ಅಕ್ಕತಂಗಿಯರಿಲ್ಲ,
ಬಂಧು ಬಳಗವು ಇಲ್ಲ, ಬಂದೆಲ್ಲರೂ ಬರಿಯ
ಭ್ರಮೆಯಷ್ಟೆ, ಬೊಬ್ಬುಳಿಕೆ.
ಆಶೆ ಏತಕೊ ? ಬೇಡ

  • ಸಚ್ಚಿದಾನಂದ
  • ಶ್ರೀ ಸ್ವಾಮೀಜಿ.

(ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share