ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ, ಗುರು ಗೀತಾ ಭಾಗ-20

1017
Share

ಶ್ರೀ ಗುರು ಗೀತ – ಭಾಗ 20
ಯಾರಾದರೂ ಗುರು ನಿಂದೆ ಮಾಡುತ್ತಿದ್ದರೆ ಅವರಿಂದ ದೂರ ಇರಬೇಕು. ಅದನ್ನು ಕೇಳಿ ಸುಮ್ಮನಿರುವುದು ಮಹಾಪಾಪ.ಗುರುವಿನ ಸಮಕ್ಷಮದಲ್ಲಿ ಗುರುವಿಗೆ ಇಷ್ಟ ವಿಲ್ಲದಿರುವ ಹಾಸ್ಯ ಮಾಡಬಾರದು, ಗುರುವಿಗೆ ಸಲಹೆ ನೀಡಬಾರದು.
ಈಗಾಗಲೇ ತಿಳಿದಿರುವ ಗುರುತತ್ವಗಳ ಆಧಾರದ ಮೇಲೆ ಮುಂದಿನ ಗುರುತತ್ವವನ್ನು ಅರಿಯಲು ಪ್ರಯತ್ನಿಸಬೇಕು.
ಗುರುವನ್ನು ಅನುಮಾನಿಸಬಾರದು. ಗುರುವಿನ ಭಾವನೆ ಮೀರಿ ಮಾತನಾಡಬಾರದು. ಒಬ್ಬರು ಗುರುವಿನ ಸಮ್ಮುಖದಲ್ಲಿ ಮತ್ತೊಬ್ಬರು ಗುರುವನ್ನು ಹೊಗಳಬಾರದು. ಗುರುವಿಗೆ ಬೆನ್ನು ತೋರಿಸಿ ನಡೆಯಬಾರದು.
ಇನ್ನು ಗುರು ಉಪಾಸನೆಯಿಂದ ಸಿಗುವ ಫಲಗಳ ಬಗ್ಗೆ ತಿಳಿಯೋಣ.
ಹಾವು ಮುಂತಾದ ವಿಷ ಜಂತುಗಳಿಂದಲೂ, ಋಷಿ ಮುನಿಗಳ ಶಾಪದಿಂದಲೂ, ಕಾಲಮೄತ್ಯು ಭಯದಿಂದಲೂ ಗುರು ಶಿಷ್ಯನನ್ನು ರಕ್ಷಿಸುವರು.
ನಿತ್ಯವೂ ನಿರಾಕಾರವೂ ಆದ ಪರಂಬ್ರಹ್ಮನನ್ನು ಹೊಂದಿರುವರು ಗುರುಗಳು. ಗುರುವು ತಾನು ಅನುಭವಿಸಿರುವ ಜ್ಞಾನವನ್ನು ಶಿಷ್ಯನೂ ಅನುಭವಿಸಬೇಕೆಂದು ಬಯಸುತ್ತಾರೆ.
ಇದಲ್ಲದೆ ಗುರುವು ಬಗೆಬಗೆಯ ಸುಖ ಸಂಪತ್ತುಗಳನ್ನು, ಉಪದೇಶವನ್ನು ಕರುಣಿಸುತ್ತಾರೆ. ಪರೀಕ್ಷೆಗಳನ್ನು ಒಡ್ಡುತ್ತಾರೆ. ಕೊನೆಗೆ ತಮ್ಮ ಆನಂದವನ್ನೆ ನೀಡುತ್ತಾರೆ.
ನಮ್ಮ ಕೋರಿಕೆಗಳು ಹೇಗಿರಬೇಕು?
ನಮಗೆ ಯಾವುದು ಅವಶ್ಯವೋ ಅದನ್ನು ಕೊಡಿ ಮತ್ತು ನಮ್ಮ ನೋವು ನಲಿವುಗಳನ್ನು ಭರಿಸುವಂತಹ ಶಕ್ತಿ ಕೊಡಿ ಎಂದು ಕೋರಬೇಕು.
ನಮ್ಮ ಶರೀರವು ಎಣ್ಣೆ ಹಣತೆ ಇದ್ದಂತೆ, ಸಾಧನೆ ಎಂಬ ಬತ್ತಿಯಿಂದ ಶ್ರದ್ಧೆ ಎಂಬ ಎಣ್ಣೆ ಯನ್ನು ತಯಾರುಮಾಡಿಕೊಂಡರೆ ಗುರುವು ಜ್ಛಾನವೆಂಬ ಜ್ಯೋತಿಯನ್ನು ಬೆಳಗಿಸುವರು.
ಗುರುವು ತತ್ವಮಸಿ. ನೀನೆ ಬ್ರಹ್ಮ ಎಂದು ಭೋದಿಸುತ್ತಾರೆ. ಅದರ ಅರಿವಾದಾಗ ಆತ್ವಜ್ಞಾನದ ಅರಿವಾಗುತ್ತದೆ. ಇಂಥ ರಹಸ್ಯಗಳನ್ನು ಸ್ವಾಮೀಜಿಯವರು ಇಂದಿನ ಸಂಚಿಕೆಯಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಜೈಗುರುದತ್ತ


Share