ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-2

1107
Share

ಶ್ರೀ ವೆಂಕಟೇಶ ಕಲ್ಯಾಣ – ಭಾಗ 2
ನಿನ್ನೆಯ ಸಂಚಿಕೆಯಲ್ಲಿ ಗೋವಿಂದನ ವಿವಿಧ ನಾಮಗಳ ಬಗ್ಗೆ ಅರಿತುಕೊಂಡೆವು. ಇಂದು ಶ್ರೀ ಸ್ವಾಮೀಜಿ ಯವರು ಏನು ಹೇಳುತ್ತಾರೆ ನೋಡೋಣವೇ?
ನಮ್ಮ ಜನ್ಮ ಸಾರ್ಥಕವಗಲು ಭಗವಂತನ ಚರಿತ್ರೆಗಳನ್ನು ಓದಬೇಕು. ಅದು ನಮ್ಮ ಮುಂದಿನ ಪಯಣದ ತಯಾರಿ.
ಈಗ ಶ್ರೀನಿವಾನ ಮೂಲ ಕಥೆಗೆ ಬರುವ ಮೊದಲು ಕ್ಷೇತ್ರಪಾಲಕನ ಬಗ್ಗೆ ಮೊದಲು ಅರಿತುಕೊಳ್ಳಬೇಕು. ತಿರುಪತಿಯಲ್ಲು, ದತ್ತ ಪೀಠದಲ್ಲು ಶಿವನೇ ಕ್ಷೇತ್ರಪಾಲಕ. ಶಿವನಿದ್ದೆಡೆ ವಿಷ್ಣು, ವಿಷ್ಣುವಿದ್ದೆಡೆ ಶಿವ. ಶಿವ ಕೇಶವರಲ್ಲಿ ಭೇದವಿಲ್ಲ.
ಒಬ್ಬನೇ ಪರಮಾತ್ಮ ಒಂದೊಂದು ಜೀವಿಯಲ್ಲಿ ಒಂದೊಂದು ತರಹ ಕಾಣಿಸುತ್ತಿದ್ದಾನೆ. ಭಗವಂತನ ನಾಮ ಸಂಕೀರ್ತನೆಯಿಂದ ಮುಕ್ತಿ ದೊರಕುತ್ತದೆ.
ಗೋವಿಂದನು ನಾಲ್ಕು ಯುಗಗಳಲ್ಲಿ ಪ್ರಮುಖ ಅವತಾರಗಳನ್ನೆತ್ತಿದ್ದಾನೆ. ಕೃತಯುಗದಲ್ಲಿ ನರಸಿಂಹನಾಗಿಯು, ತ್ರೇತಾಯುಗದಲ್ಲಿ ಶ್ರೀ ರಾಮನಾಗಿಯೂ, ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ನಾಗಿಯೂ, ಕಲಿಯುಗದಲ್ಲಿ ಶ್ರೀ ವೆಂಕಟೇಶ್ವರ ನಾಗಿ ಅವತಾರವನ್ನೆತ್ತಿರುವನು. ಮೊದಲ ಮೂರು ಅವತಾರವನ್ನು ಸೂಕ್ಷ್ಮವಾಗಿ ವಿವರಿಸಿರುವರು.
ನಂತರ ಕಲಿಯುಗದ ಕಲಿ ಪ್ರಭಾವವನ್ನು ನೋಡುತ್ತಾ ಗೋವಿಂದನು ತಾನೇ ಸ್ವಯಂಆಗಿ ವೈಕುಂಠದಿಂದ ಭೂಮಿಗಿಳಿದಿರುವನು ವೆಂಕಟೇಶ್ವರನಾಗಿ. ಸ್ವಾಮಿಯು ಈ ಅವತಾರಕ್ಕಿಂತ ಮುಂಚಿನ ವರಾಹ ಅವತಾರದಲ್ಲಿ ತಾನೇ ಸೃಷ್ಟಿಸಿರುವ ಭೂಮಿಯ ಸೌಂದರ್ಯವನ್ನು ಸ್ವಾಮಿಯು ಸಂತಸಗೊಂಡಿದ್ದು, ವರಾಹಸ್ವಾಮಿಯು ಭೂಲೋಕದಲ್ಲಿ ಹೇಗೆ ನೆಲೆಸಿದನೆಂದೂ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ.
ಉಂಡವನೇ ಬಲ್ಲ ಬೆಲ್ಲದಾ ರುಚಿಯನು ಎಂಬ ನಾಣ್ನುಡಿಯಂತೆ ಶ್ರೀ ಸ್ವಾಮೀಜಿ ಯವರ ಶ್ರೀ ವೆಂಕಟೇಶ್ವರ ಕಲ್ಯಾಣ ನೋಡಿದವರಿಗಷ್ಚೇ ಗೊತ್ತಾಗುತ್ತದೆ ಅದರ ಸೊಗಸು.
( ಸಶೇಷ )

  • ಭಾಲರಾ
    ಬೆಂಗಳೂರು.
    ಜೈಗುರುದತ್ತ

Share