ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 25

802
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 25

  ಶ್ರೀನಿವಾಸನು ಆನೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದನ್ನು ಕೇಳಿದೆವು ನಿನ್ನೆ. ನಂತರ......

ಶ್ರೀನಿವಾಸ ಹೂವಿನ ಉದ್ಯಾನವನ ನೋಡಿದಾಗ ಆನೆಯ ಮೇಲಿನ ಕೋಪ ಕಡಿಮೆಯಾಯಿತು. ಅಷ್ಟರಲ್ಲಿ ಸೌಂದರ್ಯ ರಾಶಿ ಪದ್ಮಾವತಿಯನ್ನು ನೋಡಿದ ತಕ್ಷಣ ತನ್ನನ್ನು ತಾನೇ ಮರೆತುಬಿಟ್ಟನು. ಪದ್ಮಾವತಿ ಶ್ರೀನಿವಾಸನನ್ನು ನೋಡಿ ಅವನು ಯಾರೆಂದು ಕೇಳಲು ವೆಂಕಟೇಶ್ವರನು ತಾನು ದೇವಕಿ ವಸುದೇವರ ಪುತ್ರನೆಂದು, ಬಲರಾಮನ ತಮ್ಮನೆಂದೂ ಸುಭದ್ರೆ ತನ್ನ ತಂಗಿ ಎಂದೂ, ಶ್ರಾವಣ ಕೃಷ್ಣ ಅಷ್ಟಮಿಯಂದು ತಾನು ಹುಟ್ಟಿದ್ದು ಎಂದು ತನ್ನ ಪರಿಚಯವನ್ನು ಮಾಡಿಕೊಂಡನು.
ಪದ್ಮಾವತಿ ತಾನು ಆಕಾಶರಾಜನ ಪುತ್ರಿ ಎಂದು ತನ್ನ ಗೋತ್ರ ನಕ್ಷತ್ರ ದೊಡನೆ ತನ್ನ ಪರಿಚಯ ಮಾಡಿಕೊಂಡಳು. ಶ್ರೀನಿವಾಸ ತನ್ನ ಹೃದಯ ತುಂಬಾ ಪದ್ಮಾವತಿಯನ್ನೇ ತುಂಬಿಕೊಂಡಿದ್ದನು. ಪದ್ಮಾವತಿಯನ್ನು ತನ್ನನ್ನು ವಿವಾಹವಾಗೆಂದು ನೇರವಾಗಿ ಕೇಳುತ್ತಾನೆ. ಪದ್ಮಾವತಿ ತಾನು ರಾಜಕುಮಾರಿ ಎಂದು ಎಚ್ಚರಿಸುತ್ತಾಳೆ. ಆದರೆ ಶ್ರೀನಿವಾಸ ತನಗೆ ಯಾವ ಭಯವು ಇಲ್ಲವೆಂದು ಪದ್ಮಾವತಿಯ ಕೈ ಹಿಡಿಯಲು ಹೋದಾಗ ಪದ್ಮಾವತಿಯ ಸಖಿಯರು ಕಲ್ಲಿನಿಂದ ಹೊಡೆಯಲು ತೊಡಗುತ್ತಾರೆ. ಪದ್ಮಾವತಿ ಅಲ್ಲಿಂದ ಹೊರಟು ಬಿಡುತ್ತಾಳೆ. ವೆಂಕಟೇಶ್ವರ ಕಲ್ಲೇಟಿನಿಂದ ಗಾಯಗೊಂಡು, ಬೇಸರಗೊಂಡು ಮನೆಗೆ ತೆರಳುತ್ತಾನೆ.
ವೆಂಕಟೇಶ್ವರನ ಗಾಯವನ್ನು ನೋಡಿದ ವಕುಳಾದೇವಿ ಗಾಬರಿಯಾಗಿ ಏನಾಯಿತೆಂದು ವಿಚಾರಿಸುತ್ತಾಳೆ. ಮಮತೆಯಿಂದ ಮೃಷ್ಟಾನ್ನ ತಂದು ಕೊಟ್ಟರೂ ವೆಂಕಟೇಶ್ವರ ನೀರಸವಾಗೆ ಕುಳಿತಿರುವುದನ್ನು ನೋಡಿ ವಕುಳಾದೇವಿ ಅವನನ್ನು ನೇರವಾಗಿ ಕೇಳುತ್ತಾಳೆ ಯಾವುದಾದರೂ ಕನ್ಯೆಯನ್ನು ನೋಡಿದೆಯಾ ಎಂದು. ವೆಂಕಟೇಶ್ವರನಿಗೆ ಅಚ್ಚರಿಯಾಗುತ್ತದೆ.
ನಡೆದ ಘಟನೆಯನ್ನು ವಕುಳಾದೇವಿಗೆ ಹೇಗೆ ವಿವರಿಸುತ್ತಾನೆ ಎಂಬುದನ್ನು ಶ್ರೀ ಸ್ವಾಮೀಜಿ ಯವರು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ. ಎಂದಿನಂತೆ ಅತಿ ಸುಂದರ ಭಜನೆ
” ಇಂದಿರೇಶ ಗೋವಿಂದ
ಇಂದುಮುಖ ಗೋವಿಂದ “
ಹಾಡಿದ್ದಾರೆ. ಮತ್ತೆ ತಡವೇಕೆ, ಈ ಸಂಚಿಕೆಯನ್ನು ನೋಡಿ ಪರಿಚಯಸ್ಥರೊಂದಿಗೆ ಹಂಚಿಕೊಳ್ಳಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share