ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ-12

1142
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 12
ಭೃಗು ಮಹರ್ಷಿ ವೈಕುಂಠ ಪ್ರವೇಶಿಸಿದ್ದನ್ನು ನಿನ್ನೆ ಕೇಳಿದೆವು. ಅಲ್ಲಿ ಏನಾಯಿತೆಂದು ಇಂದು ತಿಳಿದುಕೊಳ್ಳೋಣ.
ನಮ್ಮ ಮಾಯೆಯಿಂದ ಹೊರಬರಲು ಶ್ರೀ ಹರಿಯನ್ನು ಆಶ್ರಯಿಸಬೇಕು ಆದರೆ ಶ್ರೀ ಹರಿಯೆ ಅಂತಹ ಮಾಯೆಯಲ್ಲಿ ಇದ್ದರೆ ಏನು ಮಾಡಬೇಕೆಂಬ ಯೋಚನೆಯಾಯಿತು ಭೃಗುವಿಗೆ. ಭೃಗು ವಿನ ಪ್ರಾರ್ಥನೆಗೆ ಶ್ರೀ ಹರಿ ಅಲುಗಾಡಲೇ ಇಲ್ಲ. ಸ್ವಾಮಿಯ ಮಂದಹಾಸದಲ್ಲಿ ಯಾವುದೇ ಬದಲಾವಣೆಯು ಇರಲಿಲ್ಲ. ಭೃಗುವಿನ ಕೋಪ ಉತ್ತುಂಗಕ್ಕೇರಿತು. ತನ್ನನ್ನು ತಾನು ಸಂಭಾಳಿಸಲಾಗದೆ ಶ್ರೀ ಹರಿಯ ವಕ್ಷಸ್ಥಳಕ್ಕೆ ಒದ್ದೆ ಬಿಟ್ಟರು ಭೃಗು ಮಹರ್ಷಿ. ಇದರಿಂದ ಎಚ್ಚರಗೊಂಡ ಶ್ರೀ ಹರಿಯು ಎದ್ದು ಹೋಗಿ ಭೃಗುವಿನ ಪಾದವನ್ನು ಸ್ವಯಂ ಆಗಿ ತೊಳೆಯುತ್ತಾನೆ. ಇದರಿಂದ ಭೃಗುವು ಗಲಿಬಿಗೊಳ್ಳುತ್ತಾನೆ. ಶ್ರೀ ಹರಿಯು ಭೃಗುವನ್ನು ಕೇಳುತ್ತಾನೆ, ಇತರನ ಲೋಕಗಳನ್ನು ದಾಟಿ ಬಂದಿರುವಿರಿ ಈ ಪಾದಗಳಿಗೆ ನೋವಾಗಿರಬೇಕು ಈಗ ಸ್ವಲ್ಪ ನೋವು ಕಡಿಮೆಯಾಯಿತಾ ಎನ್ನುತ್ತಾನೆ. ಭೃಗು ಮಹರ್ಷಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸುತ್ತಾರೆ ಶ್ರೀ ಹರಿಯಲ್ಲಿ. ತನ್ನ ತಪ್ಪಿನ ಪರಿಹಾರಾರ್ಥವಾಗಿ ಶ್ರೀ ಹರಿಯ ಮಾಹಿಮೆಯನ್ನು ಹರಡುತ್ತೇನೆ ಎಂದು ಹೇಳಿ ವೈಕುಂಠದಿಂದ ಹೊರಟುಬಿಡುತ್ತಾರೆ ಭೃಗು ಮಹರ್ಷಿ.
ಇಂತಹ ಮೈನವಿರೇಳಿಸುವಂತಹ ಕಥಾ ಭಾಗವನ್ನು ಸಾಕ್ಷಾತ್ ಸದ್ಗುರುಗಳ ಬಾಯಿಂದಲೇ ಕೇಳೋಣ. ಮತ್ತು ಇಂದಿನ ಸಂಚಿಕೆಯ ವಿಶೇಷ
” ಸನಕ ಸನಂದರ ಶಾಪವ ಪೊಂದಿದ
ಜಯವಿಜಯರನ್ನ ಪೊರೆದೆ ಗೋವಿಂದ “
ಎಂಬ ಭಜನೆಯನ್ನು ತಪ್ಪದೇ ವೀಕ್ಷಿಸಿ ಮತ್ತು ಬಂಧು ಬಂಧವರೊಡನೆ ಶೇರ್ ಮಾಡಿ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share