ಮೈಸೂರು ಪತ್ರಿಕೆ: ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ – 16

1086
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 16
ನಿನ್ನೆ ಶ್ರೀ ಹರಿಯ ಕೆಲವು ಅವತಾರಗಳನ್ನು ಕೇಳಿಕೊಂಡೆವು, ಇಂದು ಪರಶು ರಾಮ, ಶ್ರೀ ರಾಮರ ಅವತಾರವನ್ನು ಮತ್ತೊಮ್ಮೆ ಕೇಳುತ್ತ ಮುಂದುವರೆಯೋಣ.
ಇನ್ನು ಕೃಷ್ಣಾವತಾರದಲ್ಲಿ ಕಾರಾಗೃಹದಲ್ಲಿ ಜನಿಸಿದ, ಭಕ್ತರಿಗಾಗಿ ಯುದ್ಧ ಮಾಡಿದ. ಸಾಕಷ್ಟು ಭಾದೆಗಳನ್ನನುಭವಿಸಿದ.
ಪರಮಾತ್ಮ ತಂದೆಯ ಮನಸ್ಸು ಬಗಳ ದೊಡ್ಡದು. ಮಕ್ಕಳ ವಿಷಯದಲ್ಲಿ ಬಹಳ ಉದಾರವಾಗಿರುತ್ತದೆ.
ಲಕ್ಷ್ಮೀ ಕೋಪ ಗೊಂಡು ಸ್ವಾಮಿಯ ಜೊತೆ ಹಗಳ ಮಾಡುತ್ತಾಳೆ. ಲಕ್ಷ್ಮೀಯು ಒಂದು ಪ್ರಶ್ನೆ ಕೇಳುತ್ತಾಳೆ. ಭೃಗುವು ಒದ್ದ ಜಾಗ ಯಾರದ್ದು ಎಂದು? ಆ ಜಾಗ ನನ್ನದು. ಅಂದರೆ ನಿನ್ನ ಭಕ್ತ ನನ್ನನ್ನು ಅವಮಾನಿಸಿದ್ದಾನೆ. ನೀವು ಪ್ರಪಂಚಕ್ಕೆ ತಂದೆಯೆ ಇರಬಹುದು, ನನಗೆ ಗಂಡ. ಇದನ್ನು ನೋಡಿ ಹೇಗೆ ಸುಮ್ಮನಿರಲಿ, ನಾನು ಈ ಅವಮಾನವನ್ನು ೊಭರಿಸಲು ಸಾಧ್ಯವೇ ಇಲ್ಲಎಂದು ಶ್ರೀ ಲಕ್ಷ್ಮಿ ಭೂಲೋಕಕ್ಕೆ ಹೊರಟೇಬಿಟ್ಟಳು. ಶ್ರೀ ಹರಿಯ ಯಾವುದೇ ಸಮಾಧಾನಕ್ಕೆ ಮಿಸುಕಾಡಲಿಲ್ಲ. ಶ್ರೀ ಹರಿಯು ಭೂಲೋಕ್ಕೆ ತೆರಳುವುದನ್ನು ಅರಿತಿದ್ದ ಲಕ್ಷ್ಮೀ ದೇವಿಯು ಶ್ರೀ ಹರಿಗೆ ಮುಂಚೆ ತಾನೇ ಮುಂದೆ ಹೋದಳು ಭೂಲೋಕಕ್ಕೆ. ಕರವೀರ ಪುರದಲ್ಲಿ ತಪಸ್ಸಿಗಾಗಿ ಕುಳಿತಳು. ಸ್ಥಾಣು ರೂಪವಾಗಿ ಕದಲದಿದ್ದ ಸ್ವಾಮಿಯನ್ನು ಕದಲಿಸಿದಳು ಲಕ್ಷ್ಮೀ.

ತಂದೆಯ ಮನಸ್ಸು ದೊಡ್ಡದು ಎಂದು ಹೇಳಿಕೊಂಡಿದ್ದೆವು. ಆದರೆ ತಾಯಿಯ ಮನಸ್ಸು ಅದಕ್ಕಿಂತ ಮಿಗಿಲಾದುದು ಎಂಬುದನ್ನು ಈ ಸಂಚಿಕೆಯಲ್ಲಿ ಶ್ರೀ ಸ್ವಾಮೀಜಿ ಯವರು ವರ್ಣಿಸಿದ್ದಾರೆ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share