ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 21

773
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 21
ನಿನ್ನೆ ರಾಜನ ಪರಿಚಾರಕರು ಹಸುವಿನೊಂದಿಗೆ ಹುತ್ತದ ಬಳಿ ಹೋಗಿ ಸತ್ತು ಬಿದ್ದಿದ್ದ ಗೋಪಾಲಕನನ್ನು ನೋಡಿದರು.
ನಂತರ ರಾಜನಿಗೆ ವಿಷಯ ಮುಟ್ಟಿಸಿ ರಾಜನು ಬಂದು ನೋಡಿದಾಗ ಕೋಪಗೊಂಡು ಯಾರಲ್ಲಿ ಒಳಗೆ ಎಂದು ಕರ್ಕಶವಾಗಿ ಕೂಗುತ್ತಾನೆ. ಕೂಗನ್ನೆ ಎದುರು ನೋಡುತ್ತಿದ್ದ ಶ್ರೀ ಹರಿ ಅಷ್ಟೇ ಜೋರಾಗಿ ಗರ್ಜಿಸುತ್ತಾ ಹೊರಗೆ ಬರುತ್ತಾನೆ. ಅವನ ಘರ್ಜನೆಗೆ ಬೆಟ್ಟ ಗುಡ್ಡಗಳೆಲ್ಲ ಅಧುರಿ ಹೋಗುತ್ತದೆ.
ಶ್ರೀ ನಿವಾಸ ಹೇಳುತ್ತಾನೆ ರಾಜನಾದವನು ಎಲ್ಲಾ ಕೆಲಸವನ್ನು ವಿಚಾರಿಸಿ ಮಾಡಬೇಕು. ತಪ್ಪು ಮಾಡಿದವನಿಗು ಒಂದು ಅವಕಾಶ ಕೊಡಬೇಕು, ಹಾಗೆ ಪ್ರಜೆಯನ್ನು ಕಾಪಾಡುವುದು ನಿನ್ನ ಧರ್ಮ ವಾದರೆ ಭಕ್ತರನ್ನು ಕಾಪಾಡುವುದು ನನ್ನ ಕರ್ತವ್ಯ. ಹಾಗಾಗಿ ನೀನು ಪಿಶಾಚಿಯಾಗು ಎಂದು ಶಪಿಸುತ್ತಾನೆ. ತಕ್ಕಣ ರಾಜನು ತನ್ನ ಪಾಪ ವಿಮೋಜನೆ ಹೇಗೆ ಎಂದು ಕೇಳಲು ನಿನ್ನ ವಂಶಜ ಕುಡಿ ಅಂದರೆ ನಿನ್ನ ಮಗನ ಮಗ ಆಕಾಶ ರಾಜನು ತನ್ನ ಮಗಳು ಪದ್ಮಾವತಿ ಯನ್ನು ನನಗೆ ಕೊಟ್ಟು ಕಲ್ಯಾಣ ಮಾಡಿದಾಗ ವಜ್ರದ ಕಿರೀಟವನ್ನು ವರದಕ್ಷಿಣೆ ಯಾಗಿ ಕೊಡುತ್ತಾನೆ. ನಾನು ಅದನ್ನು ತೊಟ್ಟಾಗ ಶುಕ್ರವಾರ ನನ್ನ ದರ್ಶನ ಮಾಡಿದಾಗ ನಿನ್ನ ಶಾಪ ವಿಮೋಚನೆಯಾಗುತ್ತದೆ ಎಂದನು ಶ್ರೀ ನಿವಾಸನು.
ಇದಿಷ್ಟು ಇಂದಿನ ಕಥೆಯನ್ನು ಸ್ವಾಮೀಜಿ ಯವರು ವಿವರಿಸಿರುವರು.
ಇಂದಿನ ಮುಖ್ಯ ಭಜನೆ
” ಮಾಧವ ಮಧುಸೂದನ
ಶ್ರೀ ಹರಿ ಹರ ಮಾಧವ “
ಕೇಳೋಣ. ಮತ್ತೆ ಇನ್ನೊಂದು ಮುಖ್ಯ ವಿಷಯ ಶ್ರಾವಣ ಮಾಸ ಕೇವಲ ಎರೆಡೇ ದಿನ ಉಳಿದಿರುವುದು, ಎಲ್ಲರು ತಪ್ಪದೇ ವೀಕ್ಷಿಸಿ ಎಲ್ಲರಲ್ಲೂ ಶೇರ್ ಮಾಡಿ.
( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share