ಮೈಸೂರು ಪತ್ರಿಕೆ: ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 27

695
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 27
ನಿನ್ನೆ ವಕುಳಾದೇವಿ ಮತ್ತು ಅರಮನೆಯ ಸಖಿಯರು ಶಿವಾಲಯದಲ್ಲಿ ಭೇಟಿಯಾದರು. ಇಂದೇನಾಯಿತೋ ನೋಡೋಣ.
ವಕುಳಾದೇವಿ ಅರಮನೆಗೆ ತೆರಳಿದಳು ಸಖಿಯರೊಡನೆ ಧರಣೀ ದೇವಿಯನ್ನು ಭೇಟಿಯಗಲು. ಧರಣೀ ದೇವಿಗಾಗಿ ಕಾದು ಕುಳಿತಿದ್ದಳು ವಕುಳಾದೇವಿ.
ಅಷ್ಟರಲ್ಲಿ ಶ್ರೀನಿವಾಸನಿಗೆ ತಡೆಯಲಾಗದೆ ತಾನೆ ತಲೆಯಲ್ಲಿ ಬೆತ್ತದ ಬುಟ್ಟಿ, ಕೈಯಲ್ಲಿ ತಂಬೂರಿಯಂತಹ ಏಕ ತಂತಿ ವಾದ್ಯ, ಮತ್ತೊಂದು ಕೈಯಲ್ಲಿ ಅದನ್ನು ನುಡಿಸುವ ಕಡ್ಡಿಯೊಂದಿಗೆ ಕೊರವಂಜಿ ವೇಷ ಧರಿಸಿ ಅರಮನೆ ಕಡೆಗೆ ನಡೆದೇ ಬಿಟ್ಟ ಶ್ರೀನಿವಾಸ. ಅರಮನೆ ಬಳಿ ಕೂಗುತ್ತಾ ಹೋಗುತ್ತಿದ್ದಾಗ ಧರಣೀ ದೇವಿ ಕಿವಿಗೆ ಬಿಳುತ್ತದೆ. ತಕ್ಷಣ ಪದ್ಮಾವತಿ ಬಗ್ಗೆ ಅವಳನ್ನು ಕೇಳಬೇಕೆನಿಸುತ್ತದೆ ಅವಳನ್ನು ಕರೆತರುವಂತೆ ಹೇಳುತ್ತಾಳೆ ಸಖಿಯರಿಗೆ. ಕೊರವಂಜಿ ವೇಷದ ಶ್ರೀನಿವಾಸ ಬರುತ್ತಿದ್ದಂತೆ ಪದ್ಮಾವತಿ ಬಗ್ಗೆ ಮತ್ತು ಹಿಂದಿನ ದಿನ ಉದ್ಯಾನವನದಲ್ಲಿ ನಡೆದ ವೃತ್ತಾಂತ ವನ್ನು ಹೇಳುತ್ತಾಳೆ ಕೊರವಂಜಿ. ಮತ್ತು ಉದ್ಯಾನವನದಲ್ಲಿ ಪದ್ಮಾವತಿ ಭೇಟಿಯಾದ್ದು ವೈಕುಂಠ ಪುರವಾಸ ಶ್ರೀನಿವಾಸ ನೆಂದು ಅವನೊಂದಿಗೆ ಪದ್ಮಾವತಿ ವಿವಾಹ ಮಾಡಬೇಕೆಂದು ಇಲ್ಲದಿದ್ದಲ್ಲಿ ಪದ್ಮಾವತಿ ಜೀವಂತವಾಗಿರುವುದಿಲ್ಲವೆಂದು ಹೇಳಿ ಇದನ್ನು ಪದ್ಮಾವತಿಯನ್ನೇ ಬೇಕಾದರೂ ಕೇಳಬೇಕೆಂದು ಹೇಳಿದಳು.
ಧರಣೀದೇವಿಯು ಪದ್ಮಾವತಿಯನ್ನು ಭೇಟಿಯಾದಾಗ ಪದ್ಮ ಮುಖದ ಪದ್ಮಾವತಿ ಮುಖ ಬಾಡಿಹೋಗಿತ್ತು. ಧರಣೀದೇವಿಯು ಏನೆಂದು ಮಗಳನ್ನು ವಿಚಾರಿಸಿದಾಗ ಹಿಂದಿನ ದಿನ ಉದ್ಯಾನವನದಲ್ಲಿ ನಡೆದದ್ದನ್ನು ವಿವರಿಸಿ ತಾನು ಭೇಟಿಯಾದದ್ದು ಸಾಕ್ಷಾತ್ ವೈಕುಂಠ ಪುರವಾಸ ಶ್ರೀನಿವಾಸನನ್ನು ಎಂದು ತಿಳಿಯಿತೆಂದು ಹೇಳಿ ತಾನು ಅವನಿಗೆ ಮನಸೋತಿರುವುದಾಗಿಯೂ ತಾಯಿಯಲ್ಲಿ ಹೇಳುತ್ತಾಳೆ.
” ಹರಿ ಮೇರಾ ಜೀವನ್ ಪ್ರಾಣಧಾರಿ “
ಎನ್ನುವ ಭಜನೆಯೊಂದಿಗೆ ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ ಶ್ರೀ ಸ್ವಾಮೀಜಿಯವರು. ಮತ್ತೆ ತಡವೇಕೆ ಶ್ರಾವಣ ಶನಿವಾರ, ವೆಂಕಟೇಶ್ವರ ಕಲ್ಯಾಣ ಹೇಳುತ್ತಿರುವುದು ಪರಮ ಪೂಜ್ಯ ಸ್ವಾಮೀಜಿ ಯವರು. ಇದಕ್ಕಿಂತ ಬೇರೆ ಸಮಯ ಬೇಕೆ ನೋಡಲು ಬೇಗ ನೋಡಿ ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share