ಮೈಸೂರು ಪತ್ರಿಕೆ ಆಧ್ಯಾತ್ಮಿಕ ಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 32.

1235
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 32
ಸೂರ್ಯನು ಲಕ್ಷ್ಮೀ ದೇವಿಯನ್ನು ಕರೆತಂದದ್ದು ನಿನ್ನೆ ಕೇಳಿದೆವು. ಮುಂದೇನಾಗುತ್ತದೆ ನೋಡೋಣ.
ಲಕ್ಷ್ಮೀ ದೇವಿಯು ಏನು ಮಾಡಬೇಕೆಂದು ಕೇಳಲು ಲಕ್ಷ್ಮಿಯು ಸೀತೆಯಾಗಿ ಅಗ್ನಿ ಪ್ರವೇಶಿಸಿ ಹೊರ ಬಂದಾಗ ತನ್ನೊಡನೆ ವೇದವತಿ ಬಂದಾಗ ಅವಳಿಗೆ ಅವರಿಬ್ಬರೂ ಏನು ಮಾತು ಕೊಟ್ಟಿದ್ದರೆಂದು ನೆನಪಿಸಿಕೊ ಎಂದಾಗ ಲಕ್ಷ್ಮಿಯು ಅಂದು ಇಂದು ಒಂದೇ ಮಾತು. ಪದ್ಮಾವತಿ ರೂಪದಲ್ಲಿರುವ ವೇದವತಿಯನ್ನು ಶ್ರೀನಿವಾಸನು ಕಲ್ಯಾಣ ವಾಗಲೇಬೇಕು ಎನ್ನುತ್ತಾಳೆ ಲಕ್ಷ್ಮಿ ದೇವಿಯು. ತಾಯಿಯ ಮಾತಿನಿಂದ ವೆಂಕಟೇಶ್ವರ ಸೇರಿದಂತೆ ಎಲ್ಲರೂ ಸಂತೋಷಗೊಂಡರು.
ಮತ್ತೆ ಬ್ರಹ್ಮನು ಮಂಗಳಸ್ನಾನ ಮಾಡಿಬರಲು ಹೇಳಿದಾಗ ನೀರಸವಾಗಿದ್ದ ಶ್ರೀನಿವಾಸ ನನ್ನು ನೋಡಿ ಅರ್ಥ ಮಾಡಿಕೊಂಡು ಲಕ್ಷ್ಮಯೇ ಮಂಗಳಸ್ನಾನ ಮಾಡಿಸಿದಳು. ಸಾವಿತ್ರಿಯು ವಸ್ತ್ರವನ್ನು ಕೊಟ್ಟಳು. ಪಾರ್ವತಿಯು ಧೂಪವನ್ನು, ಗಂಗೆಯು ಬಂಗಾರದ ಪಾದುಕೆಯನ್ನು ಕೊಟ್ಟರು. ರತಿ ಮನ್ಮಥರು ಛಾಮರ ಸೇವೆ ಮಾಡಿದರು. ವಸಿಷ್ಟಾದಿ ಮುನಿಗಳು ವೇದ ಮಂತ್ರ ಪಾರಾಯಣ ಆರಂಭಿಸಿದರು. ತುಂಬುರಾದಿ ಗಂಧರ್ವರು ಗಾನ ಆರಂಭಿಸಲು ರಂಬೆ ಊರ್ವಶಿ ಯರು ನರ್ತಿಸಲು ತೊಡಗಿದರು. ಲಕ್ಷ್ಮಿ ದೇವಿಯು ಶ್ರೀನಿವಾಸ ನನ್ನು ಅಲಂಕರಿಸಿದಳು. ವೆಂಕಟೇಶ್ವರನು ಮೊದಲಬಾರಿಗೆ ನಾಮವನ್ನು ಧರಿಸಿದನು.
ಬ್ರಹ್ಮ ನು ಕುಲದೇವರಿಗೆ ಪೂಜಿಸಲು ಹೇಳಿದಾಗ ಶಮೀವೃಕ್ಷಕ್ಕೆ ಪೂಜಿಸಿ ಸಣ್ಣ ಕೊಂಬೆಯನ್ನು ಕತ್ತರಿಸಿ ತಂದನು. ನಾರದನು ಅದನ್ನು ವರಾಹನ ಬಳಿ ಇಡಲು ಹೇಳಿದನು. ಪೂರ್ವ ಸಿದ್ಧತೆಗಳೆಲ್ಲಾ ಆಯಿತು. ಆದರೆ ಮುಂದಿನ ತಯಾರಿಗೆ ಹಣದ ವ್ಯವಸ್ಥೆ ಆಗಬೇಕಿತ್ತು. ಶ್ರೀನಿವಾಸನು ಕುಬೇರನನ್ನು ಸಾಲ ಕೇಳಲಾಗಿ ಕುಬೇರನು ಹೇಳುತ್ತಾನೆ ಧನ ಸಹಾಯ ಕೇಳಿದ್ದರೆ ಉದಾರವಾಗಿ ಮಾಡುತ್ತಲಿದ್ದೆ ಆದರೆ ಸಾಲ ಕೇಳಿದ್ದರಿಂದ ಅದಕ್ಕೆ ಸಾಕ್ಷಿ ಸಮೇತ ಪತ್ರ ಬರೆದು ಕೊಡಬೇಕೆಂದು ಹೇಳುತ್ತಾನೆ. ಅದಕ್ಕೊಪ್ಪುತ್ತಾನೆ ವೆಂಕಟೇಶ್ವರನು.
ಪತ್ರರದಲ್ಲಿ ಈ ರೀತಿ ಬರೆಸುತ್ತಾನೆ.

ಶುಭಮಸ್ತು
ಕಲಿಯುಗದ ವಿಳಂಬಿ ನಾಮ ಸಂವತ್ಸರದ ವೈಶಾಖ ಸಪ್ತಮಿಯಂದು 14 ಸಾವಿರ ರಾಮ ಮುದ್ರೆಯನ್ನು ಸಾಲವಾಗಿ ಕೊಡುತ್ತಿದ್ದು ಅದನ್ನು ಕಲ್ಯಾಣ ವಾದ 1 ಸಾವಿರ ವರ್ಷದೊಳಗೆ ಸಾಲ ತೀರಿಸಬೇಕಾಗಿ ಇಲ್ಲದಿದ್ದರೆ ಬಡ್ಡಿ ಚಕ್ರ ಬಡ್ಡಿ ಸಮೇತ ಲಾಲವನ್ನು ಕಟ್ಟಬೇಕು.

ಈ ರೀತಿ ಬರೆದ ಪತ್ರಕ್ಕೆ ಬ್ರಹ್ಮ ನು ಸಾಕ್ಷಿಯಾದನು.
ಈ ಮಹಾ ಸಂಚಿಕೆಯನ್ನು ಶ್ರೀ ಸ್ವಾಮೀಜಿ ಯವರು ಇಂದು ವಿವರಿಸಿದ್ದಾರೆ. ನಯ
ನೋಡಲೇ ಬೇಕಾದ ಸಂಚಿಕೆ, ಸಂದೇಹವೇ ಬೇಡ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share