ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 36

799
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 36
ಅಗಸ್ತ್ಯರು ರಣರಂಗದಲ್ಲೇ ಕುಳಿತು ಬಿಟ್ಟರು ನಿನ್ನೆಯ ಸಂಚಿಕೆಯಲ್ಲಿ.
ಸ್ವಾಮಿಯು ಅಗಸ್ತ್ಯರ ಮಾತಿನಂತೆ ಯುದ್ಧ ರಾಜಿ ಮಾಡುತ್ತಾನೆ. ತೋಂಡಮಾನ ಹಾಗೂ ವಸುಧಾನ ರಿಬ್ಬರೂ ತಮ್ಮಿಂದ ಸ್ವಾಮಿಯು ಯುದ್ಧ ಮಾಡುವಂತಾಯಿತು ಎಂದು ನೊಂದುಕೊಂಡರು. ಸ್ವಾಮಿಯಲ್ಲಿ ಕ್ಷಮೆಯಾಚಿಸಿ ಅವನು ಹೇಳಿದಂತೆ ಕೇಳುವುದಾಗಿ ಹೇಳಿದರು. ಶ್ರೀನಿವಾಸ ನು ಇಬ್ಬರಿಗು ಅರ್ಧ ಅರ್ಧ ರಾಜ್ಯವನ್ನು ಹಂಚುವನು. ಅವರಿಬ್ಬರೂ ಸೇರಿ ವೆಂಕಟೇಶ್ವರನಿಗೆ 32 ಗ್ರಾಮಗಳನ್ನು ಅರ್ಪಿಸುವರು.
ಕಲಿ ಪ್ರಭಾವ ಹೆಚ್ಚುತ್ತಿರುವುದು ಮತ್ತು ಜನರು ಧರ್ಮ ಮರೆಯುತ್ತಿರುವುದು ಹೆಚ್ಚಾಗಿ ಕಂಡುಬಂದಿತು. ಇದಕ್ಕೆಲ್ಲ ದಾರಿ ತಾನು ಭೂಲೋಕದಲ್ಲೇ ಉಳಿಯಬೇಕು. ಇದನ್ನು ಸರಿಮಾಡಲು ತಾನು ಶಿಲಾ ಮೂರ್ತಿಯಾಗಬೇಕು. ಒಂದೇ ಕಡೆ ಸ್ಥಿರವಾಗಿ ನಿಲ್ಲಬೇಕು ಎಂದು ನಿಶ್ಚಯಿಸಿದ. ಅರ್ಚನ ಮೂರ್ತಿಯ ಅವತಾರ ಎತ್ತಲು ನಿರ್ಧರಿಸಿದ. ಪದ್ಮತೀರ್ಥದ ಬಳಿ ಕುಳಿತು ವಾಯೂವನ್ನು ಕರೆದು ಪದ್ಮತೀರ್ಥದಲ್ಲಿ ಸಹಸ್ರದಳ ಪದ್ಮವೊಂದು ಪದ್ಮತೀರ್ಥದಲ್ಲಿ ಬೇಕೆಂದು ಕೇಳಲು ಅದರಂತೆ ಆಯಿತು.ಅದನ್ನು ನೋಡುತ್ತ ತಪಸ್ಸನ್ನಾರಂಭಿಸಿದ ಶ್ರೀನಿವಾಸನು. ಅದು ತೀವ್ರವಾಯಿತು. ಇದರ ತೀವ್ರತೆ ಅರಿತ ಲಕ್ಷ್ಮಿ ದೇವಿಯು ತನಗೆ ತಪಸ್ಸು ಮಾಡಲಾಗುತ್ತಿಲ್ಲ ಎನ್ನಲು ಕಪೀಂದ್ರನು ಹೇಳುತ್ತಾನೆ ಶ್ರೀನಿವಾಸನು ಎಲ್ಲರಿಗೂ ಸೇರಿದವನು. ಅವನು ಏಕೆ ಹೀಗೆ ಮಾಡುತ್ತಿದ್ದಾನೆ ಎಂಬುದು ನಿನಗೇ ತಿಳಿದಿದೆ. ಏನು ಮಾಡಬೇಕೆಂಬುದು ನಿನಗೆ ತಿಳಿದಿದೆ, ಆದ್ದರಿಂದ ಈ ಕೂಡಲೆ ಅಲ್ಲಿಗೆ ಹೋಗಬೇಕೆಂದು ಹೇಳಲು ಲಕ್ಷ್ಮಿ ದೇವಿಯು ಪದ್ಮತೀರ್ಥದ ಸಹಸ್ರದಳ ಪದ್ಮದಲ್ಲಿ ಪ್ರತ್ಯಕ್ಷ ಳಾಗುತ್ತಾಳೆ. ಅಲ್ಲಿಂದ ಹೊರ ಬಂದು ಸ್ವಾಮಿ ಹೃದಯದಲ್ಲಿ ಸೇರುತ್ತಾಳೆ. ಭೃಗುವು ಕ್ಷಮೆ ಯಾಚಿಸುತ್ತಾನೆ ಎಂದು ಶ್ರೀ ಸ್ವಾಮೀಜಿ ಯವರು ಇಂದಿನ ಕಥಾ ಮಾಲಿಕೆಯಲ್ಲಿ ತಿಳಿಸಿದ್ದಾರೆ. ಎಲ್ಲರೂ ತಪ್ಪದೆ ನೋಡಿ ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share