ಮೈಸೂರು ಪತ್ರಿಕೆ ; ಆಧ್ಯಾತ್ಮಿಕ ಅಂಗಳ ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ ಪುಟ -29

482
Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 3

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 29

ಅನಘಾ ಸಮೇತ ದತ್ತಾತ್ರೇಯ ದರ್ಶನ

ನನ್ನ ಪಕ್ಕದಲ್ಲೇ ಇದ್ದ ಮತ್ತೊಂದು ಮಹಾಸರ್ಪವು “ ಮಗೂ ! ಮಾಧವಾ ! ನಮ್ಮನ್ನು ಋಷೀಶ್ವರರು ಕಾಲನಾಗರೆಂದು ಕರೆಯುತ್ತಾರೆ. ಸಾವಿರಾರು ವರ್ಷಗಳು ದತ್ತಾತ್ರೇಯರು ರಾಜ್ಯ ಪರಿಪಾಲನೆ ಮಾಡಿದ ಬಳಿಕ ತಮ್ಮ ರೂಪವನ್ನು ಗುಪ್ತಪಡಿಸಲು ಇಚ್ಚಿಸಿದರು. ಅವರು ನದಿ ನೀರಿನಲ್ಲಿ ಮುಳುಗಿ ಕೆಲವು ವರ್ಷಗಳು ಇದ್ದರು. ಆಮೇಲೆ ಮೇಲೆ ಬಂದರು. ಅವರ ಅನುಚರರಾದ ನಾವು ಅವರು ಮತ್ತೆ ಬರುವರೆಂದು ಅಲ್ಲೇ ಇದ್ದೆವು. ಅವರು ನಮ್ಮಿಂದ ಮರೆಯಾಗಲು ಪ್ರಯತ್ನಿಸುತ್ತಿದ್ದಾರೆಂದು ತಿಳಿಯಿತು. ಅವರು ಮತ್ತೆ ನೀರಿನಲ್ಲಿ ಮುಳುಗಿ ಕೆಲವು ವರ್ಷಗಳ ನಂತರ ಮೇಲೆ ಬಂದರು. ಆದರೆ ಈ ಸಲ ಅವರ ಕೈಯಲ್ಲಿ ಮಧುಪಾತ್ರೆ ಇದ್ದಿತು. ಇನ್ನೊಂದು ಕೈಯಲ್ಲಿ 16 ವರ್ಷದ ಸುಂದರಾಂಗಿ ಇದ್ದಳು. ಸ್ತ್ರೀಲೋಲನೂ ಹಾಗೂ ಮಧುಪಾನ ಮತ್ತನೂ ಆದ ಇವನನ್ನೇನು ನಾವು ಇದುವರೆಗೂ ದೇವರೆಂಬ ಭ್ರಮೆಯಲ್ಲಿದ್ದದ್ದು ? ಅಂದುಕೊಂಡು ಹಿಂತಿರುಗಿದೆವು. ಅವರು ಅದೃಶ್ಯರಾದರು. ಅವರು ಅದೃಶ್ಯರಾದ ಬಳಿಕ ನಮಗೆ ಜ್ಞಾನೋದಯವಾಯಿತು. ಅವರ ಕೈಯಲ್ಲಿದ್ದದ್ದು ಯೋಗಾನಂದ ರೂಪವಾದ ಅಮೃತವು ಹಾಗೂ ಆ ಸುಂದರಾಂಗಿಯು ತ್ರಿಶಕ್ತಿ ರೂಪಿಣಿಯಾದ ಅನಘಾಲಕ್ಷ್ಮಿ ದೇವಿ ಎಂದು ಅರಿವಾಯಿತು. ಮತ್ತೆ ಅವರನ್ನು ಈ ಭೂಮಿಯ ಮೇಲೆ ಅವತರಿಸುವಂತೆ ಮಾಡಲು ಘೋರ ತಪಸ್ಸನ್ನು ಆಚರಿಸದೆವು. ಶ್ರೀ ದತ್ತಾತ್ರೇಯರ ಅನುಗ್ರಹದಿಂದ ಶ್ರೀ ಪೀಠಿಕಾಪುರದಲ್ಲಿ ಅವರು ಶ್ರೀಪಾದ ಶ್ರೀವಲ್ಲಭರಾಗಿ ಅವತರಿಸಿದರು.

ಶ್ರೀ ಕುರುವಪುರ ವರ್ಣನೆ

ಆ ದಿನ ಅವರು ಎಲ್ಲಿ ಸ್ನಾನಕ್ಕೆಂದು ನೀರಿನಲ್ಲಿ ಮುಳುಗಿದರೋ ಅದೇ ಸ್ಥಳವೇ ಈ ಪರಮ ಪವಿತ್ರವಾದ ಕುರುವಪುರವು ಆವಾಗ ಅವರು ಜಲಸಮಾಧಿಯಲ್ಲಿ ಹೇಗಿದ್ದರೋ ಹಾಗೆ ಈಗ ನಾವು ಈ ಸೂಕ್ಷ್ಮ ಲೋಕದಲ್ಲಿ ಸೂಕ್ತ ನೀರಧಾರಿಗಳಾಗಿ ಯೋಗ ಸಮಾಧಿಯಲ್ಲಿ ಇದ್ದೇವೆ. ಕೌರವ ಪಾಂಡವರಿಗೆ ಮೂಲ ಪುರುಷರಾದ ಕುರು ಮಹಾರಾಜರಿಗೆ ಜ್ಞಾನೋಪದೇಶ ಮಾಡಿದ್ದು ಈ ಪವಿತ್ರ ಕ್ಷೇತ್ರವಾದ ಕುರುಪುರದಲ್ಲಿಯೇ. ಮಗೂ ! ಮಾಧವಾ ! ಈ ಕುರುವಪುರದ ಮಹಿಮೆಯನ್ನು ವರ್ಣಿಸಲು ಆದಿಶೇಷನಿಗೆ ಕೂಡ ಸಾಧ್ಯವಿಲ್ಲ.

ಸದಾಶಿವ ಬ್ರಹೇಂದ್ರರ ಪೂರ್ವಕಥೆ

ಶ್ರೀಪಾದ ಶ್ರೀವಲ್ಲಭರ ಪಾದ ಪದ್ಮಗಳಿಗೆ ನಾನು ನಮಸ್ಕರಿಸಿದನು. ಶ್ರೀವಲ್ಲಭರು ಕರುಣೆಯಿಂದ, “ವತ್ಸಾ ! ಈ ನನ್ನ ದಿವ್ಯ ಭವ್ಯ ದರ್ಶನವು ನಿಜವಾಗಿಯೂ ದೂಡ್ಡ ಅಲಭ್ಯಯೋಗವು. ನಿನ್ನ ಹತ್ತಿರ ಮಾತನಾಡಿದ ಒಂದು ಮಹಾಸರ್ಪವು ಮುಂಬರುವ ಶತಮಾನದಲ್ಲಿ ಜ್ಯೋತಿ ರಾಮಲಿಂಗಸ್ವಾಮಿಗಳಾಗಿ ಅವತರಿಸಿ ಜ್ಯೋತಿ ರೂಪದಲ್ಲಿಯೇ ಅಂತರ್ಧಾನವಾಗುತ್ತಾರೆ. ನಿನ್ನೊಡನೆ ಮಾತನಾಡಿದ ಇನ್ನೊಂದು ಮಹಾಸರ್ಪವು ಸದಾಶಿವ ಬ್ರಹೇಂದ್ರ ಎಂಬ ಹೆಸರಿನಿಂದ ಮುಂದೆ ಬರುವ ಶತಮಾನದಲ್ಲಿ ಭೂಮಿ ಮೇಲೆ ಅವತರಿಸಿ ಅನೇಕ ದಿವ್ಯಲೀಲೆಗಳನ್ನು ತೋರಿಸುತ್ತದೆ. ಶ್ರೀ ಪೀಠಿಕಾಪುರವು ನನಗೆ ಅತ್ಯಂತ ಪ್ರೀತಿ ಪಾತ್ರವಾದದ್ದು. ನನ್ನ ಪಾದುಕೆಗಳು ಪೀಠಿಕಾಪುರದಲ್ಲೇ ಪ್ರತಿಷ್ಠಿಸಲ್ಪಡುತ್ತದೆ. ನಾನು ಹುಟ್ಟಿದ ನನ್ನ ತಾಯಿಯ ತವರು ಮನೆಯಲ್ಲಿಯೇ ನನ್ನ ಪಾದುಕೆಗಳು ಪ್ರತಿಷ್ಠಿಸಲ್ಪಡುತ್ತವೆ. ನನ್ನ ಜನ್ಮ ಮತ್ತು ಕರ್ಮಗಳು ಅತ್ಯಂತ ದಿವ್ಯವಾದವು. ಅದು ರಹಸ್ಯವಾದದ್ದು ಗೋಪನೀಯವಾದದ್ದು. ನೀನು ಪೀಠಾಪುರವನ್ನು ಸೇರಿ ನನ್ನ ಪಾದುಕೆಗಳು ಪ್ರತಿಸಲ್ಪಡುವ ಸ್ಥಳದಿಂದ ಪಾತಾಳಲೋಕವನ್ನು ಸೇರಿ ಅಲ್ಲಿ ಕಪೋನಿಷ್ಠರಾಗಿರುವ ಕಾಲನಾಗರನ್ನು ಸಂಧಿಸಿ ಬಾ ” ಎಂದರು.
ಶ್ರೀ ಪಳನಿ ಸ್ವಾಮಿಯವರು ಮಂದಹಾಸದಿಂದ, ” ಮಗು ! ಮಾಧವಾ ! ಕಾಲನಾಗರನ್ನು ಕುರಿತು ನೀನು ಆಮೇಲೆ ಮಾತನಾಡುವೆಯಂತೆ. ಈಗ ತಕ್ಷಣ ಸ್ನಾನವನ್ನು ಮುಗಿಸಿ ಧ್ಯಾನಕ್ಕೆ ಕೂರಬೇಕು, ಇದು ಶ್ರೀಪಾದವಲ್ಲಭರ ಆಜ್ಞೆ ” ಎಂದು ಹೇಳಿದರು.

II ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ II
———–
( ಮುಂದುವರೆಯುವುದು)

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 30

ಕಮಲ ಅರಳುವುದು ಕೆಸರಿನಲ್ಲಿ.
ಚೆಂಗುಲಾಬಿಯ ಕೆಳಗೆ ಮುಳ್ಳು ಮೊನಚು.
ಕರುಣಾರ್ದ್ರ ಹೃದಯಗರಿಗೆ ಕಷ್ಟಕಾರ್ಪಣ್ಯ.
ಎಂಥ ಚೋದ್ಯ ಇದೆಲ್ಲ – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share