ಮೈಸೂರು: ಪಾಲಿಕೆ ವತಿಯಿಂದ ಜಲ್ ದಿವಾಳಿ ಅಭಿಯಾನ ಆಯೋಜನೆ

71
Share

ಮಹಾನಗರ ಪಾಲಿಕೆ ವತಿಯಿಂದ ಜಲ್ ದಿವಾಳಿ ಅಭಿಯಾನ ಆಯೋಜನೆ
ಮೈಸೂರು,ನ.05.:- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನವೆಂಬರ್ 07 ರಿಂದ ನ. 09 ರ ವರೆಗೆ ಅಮೃತ್ 2.0 ಕಾರ್ಯಕ್ರಮದಡಿ  “Women for Water, Water for Women Campaign”  “Jal Diwali”     ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಮೃತ್ ಅಭಿಯಾನದಡಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಮಿಸಲಾದ  Water Treatment plants (WTPS)     ಗಳಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಮಹಿಳಾ ಸ್ವ-ಸಹಾಯ ಗುಂಪುಗಳು ಭೇಟಿ ನೀಡಿ  Water Treatment plants (WTPS)     ಗಳ ಮೂಲಕ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ, ನಾಗರೀಕರು ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ತಿಳಿಸುವುದರ ಜೊತೆಗೆ ನೀರಿನ ಮೂಲ ಸೌಕರ್ಯದ ಬಗ್ಗೆ ಅರಿವು ಮೂಡಿಸಲಾಗುವುದು.

ಡೇ-ನಲ್ಮ್ ವಿಭಾಗದ ಮತ್ತು ವಾಣಿ ವಿಲಾಸ ನೀರು ಸರಬರಾಜು ಕೇಂದ್ರ ಸಂಯೋಜನೆಯೊAದಿಗೆ ನೀರು ಸರಬರಾಜು ಕೇಂದ್ರ ಹೊಂಗಳ್ಳಿ ಮತ್ತು ವಾಣಿ ವಿಲಾಸ ನೀರು ಸರಬರಾಜು ಕೇಂದ್ರಕ್ಕೆ  Water Treatment plants (WTPS)    ಗೆ ನವೆಂಬರ್ 7 ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿಯಿಂದ 30 ಸ್ವ-ಸಹಾಯ ಸಂಘದ ಮಹಿಳೆಯರನ್ನು ಬಸ್ ಮೂಲಕ ಕರೆದುಕೊಂಡು ಹೋಗಲು ಕ್ರಮ ವಹಿಸಲಾಗಿದೆ. ಸದರಿ ಕೇಂದ್ರಗಳಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರ ಮೂಲಕ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆಯ ಪ್ರಕ್ರಿಯೆ, ನಾಗರೀಕರು ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ತಿಳಿಸುವುದರ ಜೊತೆಗೆ ನೀರಿನ ಮೂಲ ಸೌಕರ್ಯದ ಮತ್ತು ಮಾಲಿಕತ್ವದ ಭಾವನೆಯನ್ನು ಮಹಿಳೆಯರ ನಡುವೆ ತಂದು ಪ್ರೋತ್ಸಾಹಿಸಲು ಕ್ರಮವಹಿಸಲಾಗುವುದು ಸಾರ್ವಜನಿಕರು ಮತ್ತು ಸ್ವ-ಸಹಾಯ ಸಂಘದ ಮಹಿಳೆಯರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share