ಮೈಸೂರು – ಪುಷ್ಪ ಅಮರನಾಥ್ V/S ಹೇಮಾ ನಂದೀಶ್, ವೀಕ್ಷಿಸಿ

257
Share

 

ಮೈಸೂರು,   ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರೀಮತಿ ಪುಷ್ಪ ಅಮರನಾಥ್‌ರವರು 23-8-2022 ಮಂಗಳವಾರ ರಂದು ಪ್ರತಿಕಾಗೋಷ್ಠಿಯನ್ನು ಕರೆಸಿ ಮೇಯರ್‌ ಕ್ಯಾಟಗರಿಯ ಬಗ್ಗೆ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಖಂಡಿಸಿರುವುದಾಗಿ ಮತ್ತು ಕ್ಷಮೆ ಯಾಚಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಮೈಸೂರು ಮಹಾನಗರ ಮಹಿಳಾ ಮೋರ್ಚ ಅಧ್ಯಕ್ಷರು ಆಗ್ರಹಿಸಿದ್ದಾರೆ. ಅವರು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯ ಬಿಜೆಪಿ ಸರ್ಕಾರ ಕಳೆದ ಬಾರಿ ಸ್ವಲ್ಪ ಅವಧಿಯಿದ್ದರು ಉಪಮೇಯರ್ ಸ್ಥಾನಕ್ಕೆ ಎಸ್.ಟಿ.ಜನಾಂಗದ ಶ್ರೀಮತಿ ರತ್ನ ಲಕ್ಷಣರವರನ್ನು ಮತ್ತು ಮತ್ತೊಬ್ಬರು ಮಹಿಳಾ ಉಪಮೇಯರಾಗಿ ಶ್ರೀಮತಿ ಮಹದೇವಮ್ಮರವರನ್ನು ಪಾಲಿಕೆಯಲ್ಲಿ ಆಯ್ಕೆ ಮಾಡುವ ಮುಖಾಂತರ ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದಾರೆ . ಹಾಗೆ ಬಹುಸಂಖ್ಯಾತ ವೀರಶೈವ ಲಿಂಗಾಯಿತ ಇರುವ ಸಮಾಜದಲ್ಲಿ ಇದುವರೆಗೆ ಮಹಿಳಾ ಮೇಯರ್ ಕೊಟ್ಟಿರಲಿಲ್ಲ . ಈಗ ಬಿಜೆಪಿ ಮಹಿಳಾ ಮೇಯರ್‌ರಾಗಿ ಶ್ರೀಮತಿ ಸುನಂದ ಪಾಲನೇತ್ರರವರನ್ನು ಕೊಟ್ಟಿರುವುದನ್ನು ಇದು ಬಿಜೆಪಿಯ ಸಾಮಾಜಿಕ ನ್ಯಾಯ. , ಅವರು ಮುಂದುವರೆದ ಮಾತನಾಡುತ್ತಾ ಮತ್ತೊಂದು ವಿಶೇಷವಾಗಿ ಹೇಳಬೇಕೆಂದರೆ ರಾಷ್ಟ್ರೀಯ ಬಿಜೆಪಿ ಮತ್ತು ಮೋದಿಜಿ ಸರ್ಕಾರ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಯಾಗಿ ಮಾಡಿರುವುದು ದೇಶಕ್ಕೆ ಕೊಟ್ಟ ಸಾಮಾಜಿಕ ಕೊಡುಗೆ ಇಂತಹ ಜನಪರ ಸರ್ಕಾರಕ್ಕೆ ಮಾತಾನಾಡುವ ಆರ್ಹತೆ ಏನಿದೆ ? ಈ ಮಾತನ್ನು ವಾಪಸ್‌ಗೆದುಕೊಳ್ಳಬೇಕು ಮತ್ತು ಕ್ಷಮಪಣೆ ಕೀಳಬೇಕು ಒತ್ತಾಯಿಸಿದರು

ಮತ್ತೊಂದು ವಿಷಯವಾಗಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರ ಬಗ್ಗೆ ಹೇಳಿದ್ದಾರೆ . ಈ ಮೊಟ್ಟೆ ಎಸೆತದಲ್ಲಿ ಕಾಂಗ್ರೇಸ್ ಕಾರ್ಯಕರ್ತನೆ ಸೇರಿಕೊಡಿರುವುದು ಕಾರ್ಯಕರ್ತನೆ ಒಪ್ಪಿಕೊಂಡಿದ್ದಾನೆ , ಇದು ನ್ಯಾಯಾಂಗ ತನಿಖೆಗೆ ಮಾಜಿ ಹಾಗೂ ಹೋಗಿದೆ . ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರು ಇದನ್ನು ನಾವು ಒಪ್ಪುವುದಿಲ್ಲ . ಇದು ನ್ಯಾಯಾಂಗ ತನಿಖೆಗೆ ಕೊಟ್ಟಿದ್ದಾರೆ . ಶ್ರೀ ಸಿದ್ದರಾಮಯ್ಯರಿಗೆ 2+ ಸೆಕ್ಯೂರಿಟಿ ಕೊಟ್ಟಿರುತ್ತಾರೆ . ಇದರ ಬಗ್ಗೆ ಪ್ರಶ್ನೆ ಮಾಡಲು ಹೊಗುವುದಿಲ್ಲ . ಸಿದ್ದರಾಮೋತ್ಸವ ಮಾಡಿರುವುದು ಬಿಜೆಪಿಗೆ ಭಯ ತಂದಿದೆ ಎನ್ನುವ ವಿಷಯ ಹೇಳಿದ್ದಾರೆ . ಈ ವಿಷಯಕ್ಕೆ ನಿಮ್ಮನ್ನು ಪ್ರಶ್ನೆ ಮಾಡುತ್ತೇನೆ . ಇದು ಆಯೋಜಕರ ಉತ್ಸವ ( Sponsers ) : ಇದು ಚುನಾವಣ ಉತ್ಸವಲ್ಲ . ಬಿಜೆಪಿಯವರದು ಜನೋತ್ಸವ : ಜನ ಸಾಮಾನ್ಯವರಿಗಾಗಿ ಇರುವ ಪಕ್ಷ , ಇಲ್ಲಿ ವ್ಯಕ್ತಿ ಪೂಜೆ ಇರುವುದಿಲ್ಲ ಈ ಬಿಜೆಪಿ 2023 ಕ್ಕೆ ಮಾತ್ರವಲ್ಲ 2028 ‘ ಕೂ ಕೂಡ ಬಿಜೆಪಿ ಬರುತ್ತದೆ . ಬಿಜೆಪಿಗೆ ಯಾವ ಭಯ ಇಲ್ಲ , ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರ ಆಡಳಿತವನ್ನು ಕೊಟ್ಟಿದ್ದಾರೆ.ಹಲವಾರು ಮಹಿಳಾಪರ ಯೋಜನೆಯನ್ನು ಕೊಟ್ಟಿದ್ದಾರೆ . ಇದೆಲ್ಲಾವು ನೇರವಾಗಿ ಜನರಿಗೆ ತಲುಪಿದೆ . ಬಿಜೆಪಿ ಸರ್ಕಾರ ಬರುವುದಲ್ಲಿ ಯಾವ ರೀತಿಯ ಅನುಮಾನವಿಲ್ಲ . ತಮ್ಮಗೆ ಭಯವಿರುವುದರಿಂದ ಅದಕ್ಕೆ ಉತ್ಸವಗಳ ಆಚರಣೆ ಪಬ್ ಸಂಸ್ಕೃತಿಯ ಬಗ್ಗೆ ಮಾತಾನಾಡಿದ್ದಿರ ? ಯಾವುದು ಪಬ್ ಸಂಸ್ಕೃತಿ ತೆಗೆದುಕೊಂಡನೆ ನೇರವಾಗಿ ರಾಷ್ಟ್ರೀಯ ಅಧ್ಯಕ್ಷೆಗೆ ಹೋಗಿ ತಲುಪುತ್ತದೆ . ನಿಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿಯವರ ನೇಪಾಳ ನೈಟ್ಸ್‌ಗೆ ಹೋಗಿ ತಲುಪುತ್ತದೆ , ಮತ್ತೊಂದು ವಿಷಯವನ್ನು ನಿಮಗೆ ನಾನು ಕೇಳುತ್ತೇನೆ , ಬೆಂಗಳೂರಿನಲ್ಲಿ ಇರುವ “ ಶುಗರ್ ಫ್ಯಾಕ್ಟರಿ ” ಯಾರಿಗೆ ಸೇರಿದ್ದು ಸಿದ್ದರಾಮಯ್ಯವರ ಮಗನಾದ ದಿವಂಗತ ಶ್ರೀ : ರಾಕೇಶ್ ಸಿದ್ದರಾಮಯ್ಯನಿಗೆ ಸೇರಿರುವುದು . ನೀವು ನಮ್ಮ ಮೈಸೂರು ಸಂಸದರನ್ನು ಪಬ್ ಸಂಸ್ಕೃತಿಯೆಂದು ಪ್ರಶ್ನೆ ಮಾಡುತ್ತಿರ . ನಾಲಿಗೆ ಕುಲ ಹೇಳುತ್ತದೆ , ಒಬ್ಬ ಗೌರವನ್ವಿತ ಸಂಸದರನ್ನು ಏಕವಚನದಲ್ಲಿ ಕರೆದಿರುವುದ ಅವರವರ ವ್ಯಕ್ತಿತ್ವ ಪ್ರದರ್ಶನಕ್ಕೆ ಸಾಕ್ಷಿ . ನೀವು ಜಿಲ್ಲಾ ಪಂಚಾಯಿತಿ ಅಧ್ಯಕ್ಷತೆಯಾಗಿ ಏನು ಸಾಧನೆ ಮಾಡಿದ್ದಿರ . ಏಕಾಏಕಿ ರಾಜ್ಯ ಕಾಂಗ್ರೇಸ್ ಮಹಿಳಾ ಅಧ್ಯಕ್ಷೆಯಾಗಿ ಹೇಗೆ ಮಾಡಿದ್ದಾರೆ ? ಮತ್ತೊಂದು ನೀವು ಯಾವಾಗಲು ಬೆಂಗಳೂರಿನಲ್ಲಿ – ಸ್ತವ ಹೊರುತ್ತಿರ . ನಮಗೆ ನಿಮ್ಮ ಮೇಲೆ ಅನುಮಾನ ಕಾಡಿರುತ್ತದೆ . ಕೆ.ಪಿ.ಸಿ.ಸಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಎಂದ ಮಾತ್ರಕ್ಕೆ ಸಂಸದ ವಿರುದ್ಧ ನಾಲಿಗೆ ಹರಿಬಿಟ್ಟಿರುವುದು ಅಕ್ಷಮ್ಯ ಕೂಡಲೇ ಕ್ಷಮೆ ಯಾಚಿಸಬೇಕು . ತಮ್ಮ ರಾಜಕೀಯ ಶಿವಲಿಗಾಗಿ ಹಾಗೂ ಸಿದ್ದರಾಮಯ್ಯಯನ್ನು ಓಲೈಸುವ ಸಲುವಾಗಿ ಸಂಸದರ ಬಗ್ಗೆ ಕವಲವಾಗಿ ಮಾತಾನಾಡಿರುವುದು ಖಂಡನಾರ್ಹ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಲ್ಲಿ ಶ್ರೀ ಮಂಜುನಾಥ್‌ರವರಿಗೆ ಕಾಂಗ್ರೆಸ್ ಪಕ್ಷ ಟಿಕೇಟ್ ಕೊಡುವುದು ಅನುಮಾನ ಎಂಬ ಹಿನ್ನೆಲೆಯಲ್ಲಿ ಈ ವರಸೆ ತೆಗೆದು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ . ಕಾಂಗ್ರೇಸ್‌ನೊಳಗಿನ ಒಂದು ಬಣ ರಾಜಕೀಯ ಮರೆಮಾಚುವ ಸಲುವಾಗಿ ಇಷ್ಟವರೆಗೆ ಬೀಲದಲ್ಲಿದ್ದ ಹೆಗಣಗಳು ಬೀದಿಯಲ್ಲಿ ಕುಣಿದಾಡತೊಡಗಿದೆ . ಈ ಕೆ.ಪಿ.ಸಿ.ಸಿ ಮಹಿಳಾ ಅಧ್ಯಕ್ಷೆ ಯಾವಾಗ ಮೈಸೂರಿನಲ್ಲಿ ಪ್ರತಿಕಾಗೋಷ್ಟಿ  ಮಾಡಿದ ಸಂದರ್ಭದಲ್ಲಿ ಅಭಿವೃದ್ಧಿಯನ್ನು ಕೇಳುವುದಿಲ್ಲ , ಚರ್ಚೆಯನ್ನು ಕೂಡ ಮಾಡುವುದಿಲ್ಲ . ಕೆವಲ ಸಂಸದರ ವೈಯಕ್ತಿಗ ವಿಷಯವನ್ನು ತೆಗೆದುಕೊಂಡು ಕೀಳು ಮಟ್ಟದ ರಾಜಕೀಯವನ್ನು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಮೈಸೂರಿನವರಲ್ಲಿದ್ದರು ಮೈಸೂರು ಮತ್ತು ಕೊಡಗು ಜನ ಎರಡು ಬಾರಿ ಅತ್ಯಂತ ಅಧಿಕ ಮತದಿಂದ ಕೈಹಿಡಿದಿದ್ದಾರೆ . ಮೈಸೂರಿಗರೆ ಆದ ಶ್ರೀ ಸಿದ್ದರಾಮಯ್ಯರವರನ್ನು ಓಡಿಸಿದ್ದಾರೆ . ಮತ್ತೊಮ್ಮೆ ನಾನು ಹೇಳುತ್ತಿದ್ದಾನೆ ಕಾಂಗ್ರೇಸ್ ಮಹಿಳಾ ಅಧ್ಯಕ್ಷಗೆ ಶ್ರೀ ಸಿದ್ದರಾಮಯ್ಯರನ್ನೆ ಶ್ರೀ ಪ್ರತಾಪ್ ಸಿಂಹರವರ ವಿರುದ್ಧ ಸ್ಪರ್ಧೆ ಮಾಡಲು ಹೇಳಿ ಜನ ಕಾಂಗ್ರೇಸ್ ತಕ್ಕ ಪಾಠ ಕಲಿಸುತ್ತಾರೆ . ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಿಕ್ಕೆ ಬಂದೆ ಬರುತ್ತದೆ . ಮೈಸೂರಿನಲ್ಲಿ ಬಿಜೆಪಿಯಲ್ಲಿ ಹೊಸ ಪರ್ವ ಪ್ರಾರಂಭವಾಗುತ್ತದೆ ಆಶಾಭಾವನೆ ವ್ಯಕ್ತಪಡಿಸಿದರು.

Share