ಮೈಸೂರು ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ

357
Share

 

ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ

ಅಗ್ರಹಾರ ವಾರ್ಡ್ ನಂ. 51 ರ ವ್ಯಾಪ್ತಿಯ ವಿಶ್ವಮಾನವ ಉದ್ಯಾನವನ ಹಿಂಭಾಗ ಮೈಸೂರು – ಊಟಿ ರಸ್ತೆಯಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಶಾಸಕ ಎಸ್ ಎ ರಾಮದಾಸ್ ಗುದ್ದಲಿಪೂಜೆ ನೆರವೇರಿಸಿದರು.

ಮೈಸೂರು – ಊಟಿ ರಸ್ತೆ ಅಗಲೀಕರಣದೊಂದಿಗೆ ಕಳೆದ ವರ್ಷ ಲೋಕಾರ್ಪಣೆಗೊಂಡಿತ್ತು, ಅದರೆ ಈ ಸ್ಥಳದಲ್ಲಿ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರು, ಇಲ್ಲಿಂದ ಕಡಕೋಳ, ನಂಜನಗೂಡು, ಗುಂಡ್ಲುಪೇಟೆ, ಚಾಮರಾಜ ನಗರ, ಊಟಿ ಮತ್ತು ಕೇರಳ ರಾಜ್ಯಕ್ಕೆ ಪ್ರಯಾಣಿಸುವ ಬಹಳಷ್ಟು ಮಂದಿ ಪ್ರಯಾಣಿಕರು ಇಲ್ಲಿ ಬಿಸಿಲಿನಿಂದ, ಮಳೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರು, ಇಲ್ಲಿ ಬಸ್ ನಿಲ್ದಾಣ ಬೇಕೆಂದು ಬಹಳಷ್ಟು ಪ್ರಯಾಣಿಕರ ಬೇಡಿಕೆ ಬಹಳ ದಿನದಿಂದ ಇತ್ತು,

ಇದನ್ನು ಮನಗೊಂಡ ಸ್ಥಳೀಯ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್ ಬಸ್ ನಿಲ್ದಾಣದ ಕಾಮಗಾರಿಗೆ ಅನುದಾನದ ನಿರೀಕ್ಷೆಯಲ್ಲಿ ಇದ್ದರು, ಈ ಸಂದರ್ಭದಲ್ಲಿ ಇದೆ ವಾರ್ಡ್ ನ ನಿವಾಸಿ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಜಿಲ್ಲೆ – 318 ರ ಅಧ್ಯಕ್ಷರಾದ ಕವಿತ ವಿನೋದ್ ರವರನ್ನು ಸಂಪರ್ಕಿಸಲಾಗಿ ತಮ್ಮ ಕ್ಲಬ್ ವತಿಯಿಂದ 5 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಿಕೊಡುವುದಾಗಿ ಮುಂದೆ ಬಂದಿರುತ್ತಾರೆ, ಇದಕ್ಕೆ ಪಾಲಿಕೆವತಿಯಿಂದ ಅನುಮತಿ ಪಡೆದು ಇಂದು ಶಾಸಕರಿಂದ ಭೂಮಿ ಪೂಜೆ ನೆರವೇರಿಸಲಾಗಿದೆ.

ಇವರ ಈ ಸಹಕಾರವನ್ನು ಶಾಸಕ ಎಸ್ ಎ ರಾಮದಾಸ್ ರವರು ಮುಕ್ತಕಂಠದಿಂದ ಶ್ಲಾಘಿಸಿದ್ದರೆ.

ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್, ಕ್ಲಬ್ ನ ಮಾಜಿ ಅಧ್ಯಕ್ಷರಾದ ರಚನ ನಾಗೇಶ್, ಉಪಾಧ್ಯಕ್ಷರಾದ ಸಂಧ್ಯಾ ದಿನೇಶ್, PDC ಡಾ. ಸಾರಿಕಾ ಪ್ರಸಾದ್, ಅಂಜು ಜಯಕುಮಾರ್, ಎ ಜಿ ಭಾರತಿ, ಪಾರ್ವತಿ ವಿ ಶೆಟ್ಟಿ, ಸುಶಿಲಮ್ಮ ಮರೀಗೌಡ ಹಾಜರಿದ್ದರು.


Share