ಮೈಸೂರು – ಮಾಜಿ ಶಾಸಕ ವಾಸು ನಿಧನ

244
Share

ಮೈಸೂರು-ಮಾಜಿ ಶಾಸಕ ಮಾಜಿ ಮೇಯರ್ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ನಿಧನರಾದರೆಂದು ತಿಳಿಸಲು ವಿಚಾರಿಸುತ್ತೇವೆ. ಇಂದು ಬೆಳಗ್ಗೆ ನಿಧನರಾದ ಮಾಜಿ ಶಾಸಕರು, ಪ್ರಜಾನುಡಿ ಪತ್ರಿಕೆ ಮಾಲೀಕರು, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ವಾಸು(72) ಅವರ ಮೃತದೇಹವನ್ನು ರೇಡಿಯಂಟ್ ಅಸ್ಪತ್ರೆಯಿಂದ ಕೆಲವೇ ನಿಮಿಷಗಳಲ್ಲಿ ಜಯಲಕ್ಷ್ಮಿಪುರಂನ ಮನೆಗೆ ತರಲಾಗುತ್ತದೆ. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ನಾಳೆ(ಭಾನುವಾರ) ಬನ್ನೂರು ರಸ್ತೆಯ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ.


Share