ಮೈಸೂರು-ಶಂಖ ಜಾಗಟೆ ಗಂಟೆ ನಾದದ ಮೂಲಕ ವಿನೂತನ ಪ್ರತಿಭಟನೆ‌.* 

28
Share

 

*ಕಾವೇರಿ ನೀರಿಗಾಗಿ ಬ್ರಾಹ್ಮಣ ಸಂಘದಿಂದ ಸಾಮೂಹಿಕ ಭಜನೆ ಶಂಖ ಜಾಗಟೆ ಗಂಟೆ ನಾದದ ಮೂಲಕ ವಿನೂತನ ಪ್ರತಿಭಟನೆ‌.*

ಕರ್ನಾಟಕದ ಜೀವನದಿ ಕಾವೇರಿ ತಮಿಳು ನಾಡಿಗೆ ಪ್ರತಿನಿತ್ಯ 5000ಕ್ಯೂಸೆಕ್ಸ್ ಹೊರಹರಿವಿನಿಂದಾಗಿ‌ ರೈತಾಪಿ ಕೃಷಿ ವರ್ಗಕ್ಕೆ, ಕುಡಿಯುವ ನೀರಿಗೆ ಆಗುತ್ತಿರುವ ಅನ್ಯಾಯ ತಮಿಳುನಾಡಿನ ಧೋರಣೆ ಖಂಡಿಸಿ ಮೈಸೂರು ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ವಿಪ್ರ ಸಮುದಾಯದವರು ಜಾಗಟೆ ಶಂಕ ಸಾಮೂಹಿಕ ಭಜನೆ ಮಾಡಿ ಮೈಸೂರು ಜಿಲ್ಲಾ ಪಂಚಾಯತ್ ಎದುರುಗಡೆ ಪ್ರತಿಭಟಿಸಲಾಯಿತು,

ಇದೇ ಸಂಧರ್ಭದಲ್ಲಿ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ಕನ್ನಡ ನೆಲ ಜಲ ಭಾಷೆ ವಿಚಾರವಾಗಿ ಧಕ್ಕೆ ಬಂದಾಗ ಪ್ರತಿಭಟಿಸುವುದು ನ್ಯಾ ಕೇಳುಕುವುದು ಪ್ರತಿಯೊಬ್ಬ ಕನ್ನಡಿಗರ ಹಕ್ಕು, ಸುಪ್ರಿಂಕೋರ್ಟ್ ತೀರ್ಪಿಗೆ ತಲೆಬಾಗಬೇಕು ನಿಜ ಆದರೆ ವಾಸ್ತವತೆ ವೈಜ್ಞಾನಿಕತೆ ವಿಷಯವನ್ನ ಅರಿವು ಮಾಡಿಕೊಡಬೇಕಾಗಿರುವುದು ನಮ್ಮ ಕರ್ನಾಟಕದ ಜನಪ್ರತಿನಿಧಿಗಳ ಕರ್ತವ್ಯ ಈ ಹಿಂದೆಯೂ ಕೂಡ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರ ನೀರಿಗಾಗಿ ಖ್ಯಾತೆ ತೆಗೆದಾಗ ಅಂದು ಮಾಜಿ ಪ್ರಧಾನಿ ಹೆಚ್.ಡಿ ದೇವಗೌಡ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕದ ಸಮಸ್ತ ಜನಪ್ರತಿನಿಧಿಗಳ ನಿಯೋಗ ರಾಷ್ಟ್ರಪತಿ ರಾಜ್ಯಪಲರ ಬಳಿ ಕರ್ನಾಟಕದ ಸಮಸ್ಯೆಯನ್ನ ತಿಳಿಸಿ ನ್ಯಾಯ ಕೊಡಿಸಿದ್ದರು, ಇಂದು ಅಂತಹ ಆರೊಗ್ಯಕರ ಸಮನ್ವಯ ಕಾಣದಿರುವುದು ಬೇಸರದ ಸಂಗತಿ ಎಂದರು, ಮತ್ತೊಮ್ಮೆ ನ್ಯಾಯಾಲಯ ಕಾವೇರಿ ತೀರ್ಪನ್ನ ಪರಿಶೀಲಿಸಿ 5000ಕ್ಯೂಸೆಕ್ಸ್ ಹೊರಹರಿವು ಚರ್ಚಿಸಿ ಕನ್ನಡಿಗರಿಗೆ ನ್ಯಾಯ ಸಿಗಬೇಕು ಎಂದು ಅಗ್ರಹಿಹಿಸಿದರು,

ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠಕುಮಾರ್ ರವರು ಮಾತನಾಡಿ ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನ ಕಾರ್ಯರೂಪಕ್ಕೆ ತರಲು ಮುಂದಾಗಬೇಕು, ಇದರಿಂದ ರೈತಾಪಿ ವರ್ಗಕ್ಕೆ ಮತ್ತು ಕುಡಿಯುವ ಸಹಕಾರವಾಗುತ್ತದೆ ಎಂದರು

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಮಾತನಾಡಿ
ಹೋರಾಟ ಮರೆತರು

ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದಾಗ ‘ನಮ್ಮ ನೀರು ನಮ್ಮ ಹಕ್ಕು’ ಎಂದು ಹೋರಾಟ ನಡೆಸಿದರು. ಅಧಿಕಾರಕ್ಕೆ ಬಂದ ಮೇಲೆ ಅದನ್ನು ಮರೆತಿದ್ದಾರೆ. ನೀರಾವರಿ ಸಚಿವರು ಕಾವೇರಿ ನೀರು ಉಳಿಸುವ ಹೋರಾಟಕ್ಕಿಂತ ಬ್ಯಾಂಡ್ ಬೆಂಗಳೂರಿಗೆ ಒತ್ತು ಕೊಟ್ಟು ಕಾವೇರಿ ಹೋರಾಟ ಮರೆತರು. ಅದರ ಪರಿಣಾಮ ಕಾವೇರಿ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಹೇಳಿದರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ನo ಶ್ರೀಕಾಂತ ಕುಮಾರ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಜಯಸಿಂಹ ಶ್ರೀಧರ್, ಶ್ರೀನಿವಾಸ್ ಬಾಷ್ಯಂ, ಓಂ ಶ್ರೀನಿವಾಸ್, ಅಪೂರ್ವ ಸುರೇಶ್, ಶ್ರೀಕಾಂತ್ ಕಶ್ಯಪ್ ,ಮುಳ್ಳೂರು ಸುರೇಶ್, ಪ್ರಶಾಂತ್, ರಂಗನಾಥ್, ಮುಳ್ಳೂರು ಸುರೇಶ್, ವಿಜಯ್ ಕುಮಾರ್, ಡಾಕ್ಟರ್ ಲಕ್ಷ್ಮಿ, ಮಾಜಿನಗರ ಪಾಲಿಕಾ ಸದಸ್ಯರಾದ ಸೌಭಾಗ್ಯ ಮೂರ್ತಿ,
ಸುಚಿಂದ್ರ, ಜ್ಯೋತಿ, ನಾಗಶ್ರೀ, ಪುಟ್ಟಸ್ವಾಮಿ, ರಾಜಗೋಪಾಲ್,
ವಸುದೇವ್ ಮೂರ್ತಿ, ಹರೀಶ್, ಹಾಗೂ ಇನ್ನಿತರ ವಿಪ್ರ ಸಂಘ, ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು


Share