ಮೈಸೂರು-ಹೊಸ ತಾರೆಯ ಉದಯ

272
Share

 

ಹೊಸ ತಾರೆಯ ಉದಯ
ಮೈಸೂರಿನ ಶಶಾಂಕ್ ಕೇಶವರಾವ್ , ರಾಜ್ಯಮಟ್ಟದ ಎನ್.ಎಮ್.ಎಸ್ ಸಿಂಗಲ್ಸ್ ಟೇಬಲ್ ಟೆನ್ನಿಸ್ ಪಂದ್ಯಾಳಿಯಲ್ಲಿ, ಅತ್ಯಂತ ಕಿರಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಭಾನುವಾರ, ೨೮.೦೮.೨೦೨೨ ರಂದು ಬೆಳಗಾಂನಲ್ಲಿ ನಡೆದ ಪಂದ್ಯಾವಳಿಯಲ್ಲಿ. ಟೇಬಲ್ ಟೆನ್ನಿಸ್ ತರಬೇತುದಾರರಾಗಿರುವ ಬೆಂಗಳೂರು ಮೂಲದ ಶ್ರೀಯುತ ವರುಣ್ ಎಮ್. ರನ್ನು ೩-೦ ಸೆಟ್‌ಗಳಿಂದ (೧೧-೮,೧೧-೪,೧೧-೮) ಸೋಲಿಸಿ, ನಂತರ ರಾಷ್ಟ್ರಮಟ್ಟದಲ್ಲಿ ೧೩ ವರ್ಷದ ಒಳಗಿನ ಬಾಲಕರ ಗುಂಪಿನಲ್ಲಿ, ೫ ನೇ ರ‍್ಯಾಂಕ್‌ನಲ್ಲಿರುವ ಆರ್ನವ್ ಎನ್ ರನ್ನು ಸೆಮಿಫೈನಲ್ನಲ್ಲಿ ೩-೨ ಸೆಟ್‌ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ.
ಅದೇ ದಿನ ನಡೆದ ರಾಜ್ಯಮಟ್ಟದ, ೧೩ ವರ್ಷದ ಒಳಗಿನ ಗುಂಪಿನ ಪಂದ್ಯಾವಳಿಯಲ್ಲಿ ಬೆಂಗಳೂರಿನ ‘ಅಥರ್ವ ನವರಂಗೆ’ ಅವರೊಂದಿಗೆ ಫೈನಲ್ನಲ್ಲಿ ಸೆಣಸಾಡಿ (೨-೪) ಸೆಟ್‌ಗಳೊಂದಿಗೆ ಪರಾಭವಹೊಂದಿ, ಬೆಳ್ಳಿ ಪದಕ ವಿಜೇತರಾಗಿದ್ದಾರೆ.
ಮೈಸೂರಿನ ವಿವೇಕಾನಂದ ನಗರದ ಆದಿತ್ಯ ಕ್ಲಿನಿಕ್ನಲ್ಲಿ ಮಕ್ಕಳ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಸುಮಾರಾವ್, ಹಾಗೂ ಡಾ.ಪ್ರಶಾಂತ್‌ರಾವ್ ರವರ ಸುಪುತ್ರ. ಶಶಾಂಕ್, ಮೈಸೂರಿನ ಕೌಟಿಲ್ಯ ವಿದ್ಯಾಲಯದಲ್ಲಿ ೭ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಅನೇಕ ಪದಕಗಳನ್ನು ತನ್ನದಾಗಿಸಿಕೊಂಡಿರುವ, ಶ್ರೀಯುತ ಅಕ್ಷಯ್ ಮಹಾಂತ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಪ್ರಸ್ತುತ ಶಶಾಂಕ್. OMTTA ( ಒಲಿಂಪಿಕ್ ಮಹರ್ಷಿ ಟ್ರೈನಿಂಗ್ ಟಿ.ಟಿ. ಅಕಾಡೆಮಿ ), ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಹರ್ಷಿ ಶಾಲೆಯಲ್ಲಿರುವ OMTTA ಕ್ಲಬ್‌ನಲ್ಲಿರುವ ಸೌಲಭ್ಯಗಳು ರಾಷ್ಟ್ರೀಯ ಮಟ್ಟದಲ್ಲಿವೆ ಮತ್ತು ಈ ಸೌಲಭ್ಯಗಳನ್ನು ಒದಗಿಸಲಿರುವುದಕ್ಕೆ ಅವರು ಮಹರ್ಷಿ ಪಬ್ಲಿಕ್ ಶಾಲೆಯ ಸಿ.ಇ.ಒ ಆಗಿರುವ ಶ್ರೀಯುತ ತೇಜಸ್ ಶಂಕರ್ ಅವರಿಗೆ ಶಶಾಂಕ್ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸಿದ್ದಾರೆಮತ್ತು ತನ್ನ OMTTAತರಬೇತುದಾರರಾದ ಶ್ರೀಯುತ ಥಾಮಸ್ ಎಮ್,ಎ. ಅವರಿಗೆ ಮತ್ತು ಮಹರ್ಷಿ ಪಬ್ಲಿಕ್ ಶಾಲೆಯ ತನ್ನ ಸಹ ಪಾಠಿಗಳಿಗೂ ಧನ್ಯವಾದ ಅರ್ಪಿಸಿದ್ದಾರೆ.
ಪ್ರಸ್ತುತ ಶಶಾಂಕ್ ಅವರು ಕರ್ನಾಟಕದಲ್ಲಿ ೩ ನೇ ರ‍್ಯಾಂಕ್‌ನಲ್ಲಿದ್ದು ಇನ್ನೊಂದು ವರ್ಷದೊಳಗೆ ಒಂದನೇ ರ‍್ಯಾಂಕ್ ಅನ್ನು ತಲುಪುವ ಗುರಿ ಹೊಂದಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ತೇಜಸ್ ಬಿ ಶಂಕರ್
+91 96636 66046


Share