ಮೈಸೂರು , 2ನೇ ಕೋವಿಡ್ ಆಸ್ಪತ್ರೆಗೆ ಸಜ್ಜು.

468
Share

ಮೈಸೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಕಾರಣ ನಮಗೆ ಇನ್ನೂ ಹೆಚ್ಚುವರಿ ಆಸ್ಪತ್ರೆಗಳು ವೆಂಟಿಲೇಟರ್ ಗಳು ಬೇಕಾ ಗಲಿದೆ. ಹಾಗಾಗಿಯೇ ತಾಯಿ ಮತ್ತು ಮಗುವಿನ ಆಸ್ಪತ್ರೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎರಡನೇ ಕೋವಿಡ್ ಆಸ್ಪತ್ರೆಯಾಗಿ ಮಾಡಿಕೊಳ್ಳಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಅವರಿಂದು ಮೈಸೂರು ಜಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ತುಳಸಿದಾಸ್ ಆಸ್ಪತ್ರೆ ಕಟ್ಟಡವನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು ಕೆಂಪೇಗೌಡ ಜಯಂತಿಯ ಶುಭಾಶಯ ಕೋರಿದರು. ಮೈಸೂರಿನ ತುಳಸಿದಾಸ್ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಿದಂತಹ ಕೇಂದ್ರ ಸರ್ಕಾರದ ಅನುದಾನ ವನ್ನು ಹೊಂದಿರುವಂತಹ ತಾಯಿ ಮತ್ತು ಮಗುವಿನ ಆಸ್ಪತ್ರೆ ಕಾಮಗಾರಿ ಯನ್ನು ಪೂರ್ಣಗೊಳಿಸುವ ಹಂತಕ್ಕೆ ಬಂದಿದ್ದು, ಅದರ ವೀಕ್ಷಣೆಗೋಸ್ಕರ ಬಂದಿದ್ದೇನೆ ಎಂದರು.

ನಿನ್ನೆ ದಿಶಾ ಕಮೀಟಿ ಮೀಟಿಂಗ್ ನಲ್ಲಿ ಕೇಂದ್ರ ಸರ್ಕಾರ ಯೋಜನೆಗಳ ಪರಾಮರ್ಶೆ ನಡೆಯಿತು. ಆ ಸಂದರ್ಭ ಈ ಎಂಸಿಎಚ್ ಕೂಡ ಚರ್ಚೆಗೆ ಬಂತು. ನರೇಂದ್ರ ಮೋದಿಯವರ ಸರ್ಕಾರ 2017ರಲ್ಲಿ ಮೈಸೂರಿಗೆ 20ಕೋಟಿರೂ.ವೆಚ್ಚದಲ್ಲಿ ಒಂದು ಎಂಸಿಹೆಚ್ ಹಾಗೂ ಹುಣಸೂರಿಗೆ 18ಕೋಟಿ ರೂ.ವೆಚ್ಚದಲ್ಲಿ ಒಂದು ಎಂಸಿಹೆಚ್ ನ್ನು ಮಂಜೂರು ಮಾಡಿತ್ತು. ಅದರ ಕಾಮಗಾರಿ ಕೂಡ ತ್ವರಿತವಾಗಿ ನಡೆದಿದೆ. ಆದರೆ ಇವತ್ತು ಇಡೀ ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ನಮಗೆ ಇನ್ನೂ ಹೆಚ್ಚುವರಿ ಆಸ್ಪತ್ರೆಗಳು ವೆಂಟಿಲೇಟರ್ ಗಳು ಬೇಕಾಗತ್ತೆ, ಹಾಗಾಗಿ ನಮ್ಮ ಈ ಒಂದು ತಾಯಿ ಮತ್ತು ಮಗುವಿನ ಆಸ್ಪತ್ರೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಸೆಕೆಂಡ್ ಕೋವಿಡ್ ಆಸ್ಪತ್ರೆಯಾಗಿ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಅದರ ಕಾಮಗಾರಿಯ ವೀಕ್ಷಣೆಗೆ ಬಂದಿದ್ದೇನೆ ಎಂದರು.

ಕಾಮಗಾರಿ ಬಹಳ ಚೆನ್ನಾಗಿ ನಡೆದಿದೆ. 100ಬೆಡ್ ಹಾಸ್ಪಿಟಲ್ ಇದು. ಕಾಮಗಾರಿ ಅತ್ಯುತ್ತಮವಾಗಿ ಗುಣಮಟ್ಟ ಹೊಂದಿದೆ. ಒಂದೂವರೆ ತಿಂಗಳು ಶ್ರಮಪಟ್ಟರೆ ಆಸ್ಪತ್ರೆ ಕಾಮಗಾರಿ ಮುಗಿಯತ್ತೆ. ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ 2ನೇ ಕೋವಿಡ್ ಆಸ್ಪತ್ರೆಯಾಗಿ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು. ಮೀಟಿಂಗ್ ನಲ್ಲಿ ಭೇಟಿ ನೀಡೋಣ, ಸದ್ಬಳಕೆ ಮಾಡಿಕೊಳ್ಳಬೇಕು ಎಂದಿದ್ದೆ. ಶಾಸಕ ರಾಮದಾಸ್ ಅವರೂ ಬರಬೇಕಿತ್ತು. ಅಧಿಕಾರಿಗಳು ಮಾಹಿತಿ ನೀಡಬೇಕಿತ್ತು. ಮಾಹಿತಿ ನೀಡುವಲ್ಲಿ ಲೋಪವಾಗಿದೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ. ಅನ್ಯತಾ ಭಾವಿಸುವ ಅಗತ್ಯವಿಲ್ಲ ಎಂದರು.

ಇದು 2017ರಲ್ಲಿ ಮಂಜೂರಾದ ಕೇಂದ್ರ ಪುರಸ್ಕೃತ ಯೋಜನೆ. 100 ಬೆಡ್ ಗಳದ್ದು. ಪಿರಿಯಾಪಟ್ಟಣ, ಹೆಚ್.ಡಿ.ಕೋಟೆಗಳಲ್ಲಿ ಮುಂದಿನ ದಿನಗಳಲ್ಲಿಯೂ ನಿರ್ಮಿಸುವ ಕುರಿತು ಕೇಳಿದ್ದೇನೆ. ಮೈಸೂರಿಗರಿಗಾಗಿ ಮಾಡಿರುವುದು. ಕೋವಿಡ್-ಪೀಡಿತರಿಗಾಗಿ ಬಳಸಿಕೊಂಡರೆ ಜನತೆ ಆತಂಕಪಡುವ ಅಗತ್ಯವಿಲ್ಲ. ಸೋಖಿತರನ್ನು ಬೇರೆ ದೃಷ್ಟಿಯಲ್ಲಿ ನೋಡುವ ಅಗತ್ಯವಿಲ್ಲ. ವೈರಸ್ ಗಾಳಿಯಲ್ಲಿ ಹಾರಿಕೊಂಡು ಬರಲ್ಲ ಎಂದು ಸ್ಪಷ್ಟಪಡಿಸಿದರು.

ಬಿಲ್ ಪೇಮೆಂಟ್ ವಿಳಂಬ ಆಗೋದು ಸಹಜ. ಅದನ್ನು ಸರಿಪಡಿಸಲಾಗುವುದು ಎಂದರು. ಈ ಸಂದರ್ಭ ಅಧಿಕಾರಿಗಳು ಸಂಸದರ ಜೊತೆಗಿದ್ದರು.


Share