ಮೈಸೂರು-2023 ರ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ

27
Share

ಮೈಸೂರು,ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಷನ್ (IPA), ಮೈಸೂರು ಸ್ಥಳೀಯ ಶಾಖೆ, ಮೈಸೂರು, ISS ಕಾಲೇಜ್ ಆಫ್ ಫಾರ್ಮಸಿ, ಮೈಸೂರಿನ ಸಹಯೋಗದೊಂದಿಗೆ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ-2023 ಅನ್ನು *ಔಷಧಾಲಯ ಬಲಪಡಿಸುವ ಆರೋಗ್ಯ ವ್ಯವಸ್ಥೆಗಳು’ ಎಂಬ ವಿಷಯದೊಂದಿಗೆ 22 ಸೆಪ್ಟೆಂಬರ್ 2023ರಂದು ಬೆಳಿಗ್ಗೆ 10:00 ಗಂಟೆಗೆ 153 ಫಾರ್ಮಸಿ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಆಚರಿಸಲಾಗುತ್ತಿದೆ. ಸಮಾರಂಭವನ್ನು ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ ಇವರು ಉದ್ಘಾಟಿಸುವರು, ಶ್ರೀ ಹರೀಶ್ ಕೆ ಜೈನ್, ಅಧ್ಯಕ್ಷರು, ಕರ್ನಾಟಕ ಡ್ರಗ್ಸ್‌ ಮತ್ತು ರಾಮು ಪ್ಯುಟಿಕಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್’ (ಜೆಡಿಪಿಎಂಎ) ಮತ್ತು ನಿರ್ದೇಶಕರು, ಎಂಬಯೋಟೆಕ್ ಲ್ಯಾಬೋರೇಟರೀಸ್, ಬೆಂಗಳೂರು ಇವರು ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಸಿ.ಜಿ, ಬೆಟಸೂರಮಠ, ಕಾರ್ಯನಿರ್ವಾಹಕ ಕಾರ್ಯದರ್ಶಿ, ಜೆಎಸ್‌ಎಸ್ ಮಹಾವಿದ್ಯಾಪೀಠ, ಮೈಸೂರು ಇವರು ವಹಿಸುತ್ತಾರೆ. ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ಡಾ. ಬಿ. ಮಂಜುನಾಥ, ರಿಜಿಸ್ಟ್ರಾರ್, ಜೆಎಸ್‌ಎಸ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್, ಮೈಸೂರು ಮತ್ತು ಡಾ. ಟಿ.ಎಂ. ಪ್ರಮೋದ್ ಕುಮಾರ್‌, ಪ್ರಾಂಶುಪಾಲರು, ಜೆಎಸ್ಎಎಸ್‌ ಫಾರ್ಮಸಿ ಕಾಲೇಜು ಮತ್ತು ಅಧ್ಯಕ್ಷರು, ಐಪಿಎ ಮೈಸೂರು ಶಾಖೆ, ಮೈಸೂರು ಇವರು ಉಪಸ್ಥಿತರಿರುತ್ತಾರೆ ಎಂದು ಗೌರವ ಕಾರ್ಯದರ್ಶಿ ಚಂದನ್ ಅವರು ತಿಳಿಸಿದರು.
ಗೋಲ್ಡನ್ ಜುಬಿಲಿ ಆಚರಣೆ ಮತ್ತು ವಿಶ್ವ ಫಾರ್ಮಸಿಸ್ಟ್: ದಿನದ ಅಂಗವಾಗಿ ನಮ್ಮ ಮೂರು ಹಳೆಯ ವಿದ್ಯಾರ್ಥಿಗಳಾದ ಡಾ. ಕೃಷ್ಣಮೂರ್ತಿ ಭಟ್ ಪ್ರಾಧ್ಯಾಪಕರು ಮತ್ತು ಉಪ ಪ್ರಾಂಶುಪಾಲರು ಮಣಿಪಾಲ್‌ ಕಾಲೇಜಿ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮಣಿಪಾಲ, ಡಾ. ಲೋಕೇಶ್‌ ಪ್ರಸಾದ್ ಎಂ ಎಸ್, ವೈಜ್ಞಾನಿಕ ಅಧಿಕಾರಿ ಮತ್ತು ಸರ್ಕಾರಿ, ಕರ್ನಾಟಕ ಹೆಡ್ ಹೈಟೆಕ್‌ ಪ್ರಯೋಗಾಲಯದ ವಿಶ್ಲೇಷಕರು, ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಮತ್ತು ಶ್ರೀ ಸುಬ್ರಹ್ಮಣ್ಯ ಕುಮಾರ್ ಕುಂಟಿಕಾನಮಠ, ನಿರ್ದೇಶಕರು, ಆಥಸ್ ಮಾರ್ಕೆಟಿಂಗ್ ಲಿಮಿಟೆಡ್, ಹ್ಯಾಂಪ್‌ಶೆ‌, ಯುಕೆ, ಇವರುಗಳನ್ನು ಸನ್ಮಾನಿಸಲಾಗುವುದು, ವಿಶ್ವ ಪಾರ್ಮಸಿಸ್ಟ್ ದಿನದ ಪ್ರಯುಕ್ತ ನಡೆಸಿದ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ: ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಎಂದು ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಫಾರ್ಮಸಿ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಗಳ ಸದಸ್ಯರು ಉಪಸ್ಥಿತರಿರುವರು. ಸಮಾರಂಭದ ವಂದನಾರ್ಪಣೆಯನ್ನು ಐಪಿಎ ಮೈಸೂರು ಶಾಖೆಯ ಕಾರ್ಯದರ್ಶಿ ಡಾ.ಚಂದನ್ ಅರ್.ಎಸ್ ನೆರವೇರಿಸುವರು.

Share