ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ಭಾರತ ವಿಶ್ವದಲ್ಲಿ 2ನೇ ಸ್ಥಾನ

30
Share

 

ನೈರುತ್ಯ ರೈಲ್ವೆ
17.05.2023

*ಐಟಿ ಹಾರ್ಡ್‌ವೇರ್‌ ಯಂತ್ರಾಂಶಕ್ಕಾಗಿ ಪಿಎಲ್‌ಐ*

*1 ಹಿನ್ನಲೆ:*

• ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕೆಯು ಕಳೆದ 8 ವರ್ಷಗಳಲ್ಲಿ 17 ರಷ್ಟು CAGRಯೊಂದಿಗೆ ಉತ್ತಮ ಬೆಳವಣಿಗೆಯಾಗಿದೆ. ಈ ವರ್ಷ ಉತ್ಪಾದನೆ – 105 ಶತಕೋಟಿ USD (ಸುಮಾರು ರೂ 9 ಲಕ್ಷ ಕೋಟಿ) ಆಗಿದೆ.

• ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ಭಾರತವು ವಿಶ್ವದ 2ನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಈ ವರ್ಷ 11 ಶತಕೋಟಿ USD ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುವ (ಸುಮಾರು ರೂ 90 ಸಾವಿರ ಕೋಟಿ) ಮೂಲಕ ಹೊಸ ದಾಖಲೆ ಮಾಡಿದೆ.

• ಜಾಗತಿಕವಾಗಿ ತಯಾರಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಸ್ತುಗಳು ಭಾರತಕ್ಕೆ ಅತೀ ಹೆಚ್ಚು ರಪ್ತಾಗುತ್ತಿವೆ. ಇದರಿಂದ ಭಾರತವು ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೇಶವಾಗಿ ಹೊರಹೊಮ್ಮುತ್ತಿದೆ.

• ಮೊಬೈಲ್ ಫೋನ್‌ಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (PLI)ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

*2 ಪ್ರಮುಖ ಅಂಶಗಳು:*

• ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಎಲ್ಲಾ ತರದ ಕಂಪ್ಯೂಟರ, ಸರ್ವರ್‌ ಮತ್ತು ಸಣ್ಣ ವಿಕಿರಣ ಸಾಧನಗಳಲ್ಲಿ ಈ ಐಟಿ ಹಾರ್ಡ್‌ವೇರ್‌ ಪಿಎಲ್‌ಐ ಒಳಗೊಂಡಿರುತ್ತವೆ.

• ಈ ಯೋಜನೆಗೆ ಅಂದಾಜು ರೂ. 17 ಸಾವಿರ ಕೋಟಿ.

• ಈ ಯೋಜನೆಯ ಕಾಲಾವಧಿ 6 ವರ್ಷ.

• ಉತ್ಪಾದನೆಗೆ ರೂ. 3.35 ಲಕ್ಷ ಕೋಟಿ ಮೀಸಲು

• ಹೂಡಿಕೆಗಾಗಿ ರೂ. 2,430 ಕೋಟಿ

• ಈ ಯೋಜನೆಯಿಂದ 75 ಸಾವಿರ ಯುವಕರಿಗೆ ನೇರ ಉದ್ಯೋಗ

*3 ಮಹತ್ವ:*

• ಭಾರತವು ಎಲ್ಲಾ ಜಾಗತಿಕ ತಯಾರಕರ ವಿಶ್ವಾಸಾರ್ಹ ದೇಶದ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ಭಾರತದಲ್ಲಿ ದೊಡ್ಡ-ದೊಡ್ಡ ಐಟಿ ಹಾರ್ಡ್‌ವೇರ್ ಕಂಪನಿಗಳು ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗುತ್ತಿವೆ. ಐಟಿ ಸೇವಾ ಉದ್ಯಮವು ಉತ್ತಮ ಬೇಡಿಕೆಯಿಂದ ಮತ್ತಷ್ಟು ಬೆಂಬಲಿತ ಕ್ಷೇತ್ರವಾಗುತ್ತಿದೆ.

• ಹೆಚ್ಚು ಕಂಪನಿಗಳು ಭಾರತದೊಳಗಿನ ದೇಶೀಯ ಮಾರುಕಟ್ಟೆಗಳಿಗೆ ಲಗ್ಗೆ ಇಡಲು ಮತ್ತು ಭಾರತ ದೇಶವನ್ನು ದೊಡ್ಡ ರಫ್ತು ಕೇಂದ್ರವನ್ನಾಗಿ ಮಾಡಲು ಬಯಸುತ್ತಿವೆ.

ಅನೀಶ್ ಹೆಗಡೆ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈಋತ್ಯ ರೈಲ್ವೆ, ಹುಬ್ಬಳ್ಳಿ


Share