ರಜನಿ ‘ಅನ್ನಾತ್ತೆ’ 100 ಕೋಟಿ..

577
Share

ಸೂಪರ್ ಸ್ಟಾರ್ ರಜನಿಕಾಂತ್ ಎರಡು ದಿನಗಳಲ್ಲೇ ದಾಖಲೆ ಮಾಡಿದೆ. ಬೆಳಕಿನ ಹಬ್ಬ ದೀಪಾವಳಿಗೆ ಅದ್ಧೂರಿಯಾಗಿ ತೆರೆಕಂಡಿದ್ದ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ ಹಾಗೂ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದೆ.
ರಜನಿಕಾಂತ್ ನಟಿಸಿರುವ ಅನ್ನಾತ್ತೆ ಗಲ್ಲಾಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡುತ್ತಿದೆ.
ಅನ್ನಾತ್ತೆ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ ರಜನಿಕಾಂತ್ ‘ ಅನ್ನಾತ್ತೆ ‘ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುತ್ತಿದೆ. ವಿಮರ್ಶಕರಿಂದ ಟೀಕೆಗೆ ಒಳಗಾಗಿದ್ದರೂ, ರಜನಿಕಾಂತ್ ಅಭಿಮಾನಿಗಳು ಕೈ ಹಿಡಿದಿದ್ದಾರೆ.
ಎರಡೇ ದಿನಗಳಲ್ಲಿ ಸೂಪರ್‌ಸ್ಟಾರ್ ಸಿನಿಮಾ 100 ಕೋಟಿ ದಾಟಿ ಅಚ್ಚರಿ ಮೂಡಿಸಿ 2021ರಲ್ಲಿ ಇಷ್ಟು ವೇಗವಾಗಿ ನೂರು ಕೋಟಿ ಗಳಿಸಿದ ಸಿನಿಮಾ ಎಂಬ ದಾಖಲೆ ಬರೆದಿದೆ.

Share