ರಥಯಾತ್ರೆ-ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳು ದತ್ತಾ ವಿಜಯಾನಂದ ತೀರ್ಥ ಶ್ರೀಗಳಿಂದ ಸ್ವಾಗತ, ವೀಕ್ಷಿಸಿ

34
Share

 

ವಿಶ್ವ ಹಿಂದೂ ಪರಿಷತ್ 80ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಇಂದು ಮೈಸೂರಿಗೆ ಆಗಮಿಸಿತು

ಮೈಸೂರು-ಕರ್ನಾಟಕ ದಕ್ಷಿಣ ಪ್ರಾಂತ ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಯು ಇಂದು ಬೆಳಗ್ಗೆ ಮೈಸೂರು ನಗರಕ್ಕೆ ಆಗಮಿಸಿತು.
ಮೈಸೂರು ನಗರದ ಅವಧೂತ ದತ್ತಪೀಠ ಶ್ರೀ ದತ್ತ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂದೆ. ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳು ದತ್ತಾ ವಿಜಯಾನಂದ ತೀರ್ಥ ಶ್ರೀಗಳು ರಥ ಯಾತ್ರೆ ಯನ್ನು ಬರ ಮಾಡಿಕೊಂಡು .
ರಥಯಾತ್ರೆಯನ್ನು ಮೈಸೂರು ನಗರದ ಅವಧೂತ ದತ್ತ ಪೀಠದ ಕಿರಿಯ ಸ್ವಾಮೀಜಿ ಸ್ವಾಗತಿಸಿದರು
ಶೌರ್ಯ ಪರಾಕ್ರಮಗಳ ಇತಿಹಾಸ, ಸಾವಿರಾರು ವರ್ಷಗಳಿಂದ ಈ ರಾಷ್ಟ್ರದ ಮೇಲೆ ಪರಕೀಯರ ಆಕ್ರಮಣಗಳು ನಡೆಯುತ್ತಲೇ ಇದ್ದರೂ ಅದನ್ನು ದಿಟ್ಟವಾಗಿ, ಸಮರ್ಪಕವಾಗಿ ಎದುರಿಸುತ್ತಾ, ನಮ್ಮ ಸನಾತನ ಧರ್ಮವನ್ನು, ಈ ಪವಿತ್ರ ಭರತಭೂಮಿಯನ್ನು ಸಂರಕ್ಷಿಸುವಲ್ಲಿ ನೂರಾರು, ಸಾವಿರಾರು ವೀರರು, ಧೀರರು, ಶೂರರು, ಪರಾಕ್ರಮಿಗಳು ತಮ್ಮ ಜೀವನವನ್ನೇ ಸಮರ್ಪಿಸಿ, ಅವಶ್ಯ ಬಂದಾಗ ಬಲಿದಾನವೂ ಆಗಿ ನಮಗೆ ಶ್ರೇಷ್ಠ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರ ತ್ಯಾಗ ಬಲಿದಾನಗಳ ಪರಿಣಾಮವಾಗಿ ನಮ್ಮ ಸನಾತನ ಧರ್ಮವು ಸುರಕ್ಷಿತವಾಗಿ ನಮ್ಮ ಕಾಲಖಂಡದವರೆಗೆ ತಲುಪಿದ್ದು, ಇದನ್ನು ಸಂರಕ್ಷಿಸುವ ಹೊಣೆ ಮತ್ತು ಮುಂದಿನ ಪೀಳಿಗೆಗೆ ಯಥಾವತ್ತಾಗಿ ತಲುಪಿಸಿ ನಿರಂತರ ಧರ್ಮ ರಕ್ಷಣೆಯನ್ನು ಮಾಡಬೇಕಾದ ಕಾರ್ಯವು ಪ್ರತಿಯೊಬ್ಬ ಹಿಂದುವಿನ ಮೇಲೆ ಇದೆ. ಈ ವಿಚಾರವನ್ನು ಇಂದಿನ ಜನತೆಗೆ ತಲುಪಿಸಿ, ಅವರಲ್ಲಿ ಧರ್ಮಪ್ರಜ್ಞೆಯನ್ನು ಜಾಗೃತಗೊಳಿಸಿ, ಈ ರಾಷ್ಟ್ರವನ್ನು, ಸನಾತನ ಧರ್ಮವನ್ನು ಸಂರಕ್ಷಿಸಲೆಂದೇ ಜನ್ಮತಾಳಿದ ವಿಶ್ವ ಹಿಂದೂ ಪರಿಷದ್ ಧರ್ಮೋ ರಕ್ಷತಿ ರಕ್ಷಿತಃ ಎಂಬ ಧೈಯಮಂತ್ರದೊಂದಿಗೆ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಸಂಘಟನೆಗೆ ಸೇರಿಕೊಂಡು, ಧೈಯ ಸಾಧನೆಗಾಗಿ ಪ್ರತಿಯೊಬ್ಬರನ್ನು ಕೈ ಬೀಸಿ ಕರೆಯುತ್ತಿದ.
ಈ ಯಶೋಗಾಥೆಯನ್ನು ಎಲ್ಲರಿಗೂ ತಿಳಿಸಿ, ನಮ್ಮ ಪೂರ್ವಜರ ಬಗ್ಗೆ, ಸನಾತನ ಧರ್ಮದ ಬಗ್ಗೆ ನೈಜ ಅರಿವನ್ನು ಮೂಡಿಸುವ ಸಲುವಾಗಿ ಬಜರಂಗದಳವು ಆಯೋಜಿಸಿರುವ ಈ ರಾಷ್ಟ್ರವ್ಯಾಪೀ ರಥಯಾತ್ರೆಯಲ್ಲಿ ಪ್ರತಿಯೊಬ್ಬ ಹಿಂದುವೂ ಭಾಗವಹಿಸಿ, ಕೈ ಜೋಡಿಸಿ,  ppಸಮರ್ಪಿಸಿಕೊಳ್ಳುವಂತೆ ಸಮಸ್ತ ಹಿಂದೂ ಸಮಾಜಕ್ಕೆ ವಿನಂತಿಸಲಾಗಿದೆ

Share