ರಾಜ್ಯ ಉಪ ಚುನಾವಣೆ : ಕೊನೆ ಕ್ಷಣದಲ್ಲಿ ಮಂಗಳ ಗೆಲವು ವಿಧಾನಸಭೆ: 1–1

363
Share

: ರಾಜ್ಯ ಉಪ ಚುನಾವಣೆ :
ಕೊನೆ ಕ್ಷಣದಲ್ಲಿ ಮಂಗಳ ಗೆಲವು
ವಿಧಾನಸಭೆ: 1–1
: ಅತ್ಯಂತ ರೋಚಕವೆನಿಸಿದ ಬೆಳಗಾವಿ 2021ಲೋಕಸಭಾ ಉಪಚುನಾವಣಾ ಮತ ಎಣಿಕೆಯ ದಿನವಾದ ಇಂದು ಕ್ರಿಕೇಟ್ ಆಟದ ಕೊನೇ ಓವರ್ ನಲ್ಲಿ ಯಾರಿಗೆ ಗೆಲುವು ಎಂಬಂತೆ ಕೊನೆಗೂ ಅತ್ಯಂತ ಅಲ್ಪ ಮತದಿಂದ ವಿಜಯದ ಮಾಲೆ ಭಾರತೀಯ ಜನತಾ ಪಕ್ಷದ ಮಂಗಲಾ ಅಂಗಡಿ ಪಾಲಾಗಿದೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಸತೀಶ್ ಜಾರಕಿಹೊಳಿ 432299ಮತ ಗಳಿಸಿದ್ದಾರೆ.
ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದು 435202 ಮತ ಗಳಿಸಿದರು .
ಬೆಳಿಗ್ಗೆ ಮತ ಪ್ರಾರಂಭವಾದಾಗಿನಿಂದಲೂ ಪ್ರತಿ ಹಂತದಲ್ಲೂ ಹತ್ತು ಸಾವಿರ ಮತಗಳ ಅಂತರದಲ್ಲಿ ಪೈಪೋಟಿ ನಡೆಸುತ್ತ ಬಂದ ಇವರಿಬ್ಬರು ಕ್ಷಣಕ್ಷಣಕ್ಕೂ ಪ್ರತಿಯೊಬ್ಬರ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತಲೇ ಹೋದರು.ಸತೀಶ್ ಜಾರಕಿಹೊಳಿ ಗೆದ್ದೇ ಬಿಡುವರು ಎಂಬಂತೆ ಭಾಸವಾಗುತ್ತಿತ್ತು . ಮೂವತ್ತನೇ ಸುತ್ತಿನ ಮತಎಣಿಕೆಯ ನಂತರವಷ್ಟೇ ಸುಮಾರು 3 ಸಾವಿರ ಅಂತರದಲ್ಲಿ ಮಂಗಳ ಅಂತರ ಕಾಯ್ದುಕೊಳ್ಳುತಾ ಮುನ್ನಡೆದರು .
ಇಷ್ಟು ರೋಚಕ ತಿರುವು ಪಡೆಯುತ್ತಾ ಹೋದಂತೆ ಚುನಾವಣಾ ಮತ ಎಣಿಕೆ ಬೇರೊಂದು ಇಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ
ಕರ್ನಾಟಕ ರಾಜ್ಯದ ಎರಡೂ 2ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಮತ ಎಣಿಕೆಯು ಇಂದು ನಡೆದು
ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಬಸವನಗೌಡ ಕುರ್ಮಿ ಆಳ 86222 ಮತ ಗಳಿಸಿ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ ಅವರನ್ನು (55581) ಸೋಲಿಸಿದರು .
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಶರಣು ಸಲಗಾರ 70556 ಮತಗಳಿಸಿ ಕಾಂಗ್ರೆಸ್ನ ಮಾಲಾ ನಾರಾಯಣ್ ರಾವ್ ರವರನ್ನು (50107)ಸೋಲಿಸಿದರು .


Share