ಲಸಿಕೆ ತೆಗೆದುಕೊಳ್ಳಲು ಹೋದ ವೃದ್ಧನ ಮೇಲೆ ಎಫ್ ಐ ಆರ್

246
Share

ಪಟ್ನಾ : 11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ವೃದ್ಧನ ವಿರುದ್ಧ ಬಿಹಾರದ ಮಾದೇಪುರದಲ್ಲಿ ಭಾನುವಾರ ಎಫ್‌ಐಆರ್ ದಾಖಲಾಗಿದೆ . ಮಾದೇಪುರದ ಪುರೈನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ .
ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಆರೋಗ್ಯ ಅಧಿಕಾರಿಗಳ ಕರ್ತವ್ಯ ಲೋಪದ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ರಾಜೇಶ್ ಕುಮಾರ್ ಹೇಳಿದ್ದಾರೆ
.
ಮಾದೇಪುರ ಜಿಲ್ಲೆಯ ಉರೈ ಗ್ರಾಮದ ನಿವಾಸಿ 84 ವರ್ಷದ ಬ್ರಹ್ಮದೇವ್ ಮಂಡಲ್ ಎಂಬುವವರು 11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ . 12 ನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳಲು ತೆರಳಿದಾಗ ಆರೋಗ್ಯ ಸಿಬ್ಬಂದಿ ಅವರನ್ನು ಗುರುತಿಸಿದ್ದಾರೆ . e ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಮಂಡಲ್ , ಲಸಿಕೆ ಹಾಕಿಸಿಕೊಳ್ಳಲು ಎಂಟು ಬಾರಿ ಆಧಾರ್ ಕಾರ್ಡ್ , ಮೂರು ಬಾರಿ ವೋಟರ್ ಐಡಿ ಬಳಸಿದ್ದರು ಎಂದು ತಿಳಿದುಬಂದಿದೆ .


Share