ಲೋಕ್-ಅದಾಲತ್: 34686 ಪ್ರಕರಣಗಳು ಇತ್ಯರ್ಥ

57
Share

 

ಲೋಕ್-ಅದಾಲತ್: 34686 ಪ್ರಕರಣಗಳು ಇತ್ಯರ್ಥ

ಮಂಡ್ಯ.ಡಿ.11-. ಮಂಡ್ಯ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್-ಅದಾಲತ್ ಗೆ ವಕೀಲರಿಂದ, ಕಕ್ಷಿಗಾರರಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ವಷÀðಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಒಟ್ಟು 4341 ಪ್ರಕರಣಗಳು ಹಾಗೂ ಜಿಲ್ಲೆಯ ಒಟ್ಟು 30348 ವ್ಯ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 34686 ಪ್ರಕರಣಗಳು ಇತ್ಯರ್ಥವಾಗಿದೆ.


ಮಂಡ್ಯ ನಗರದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 25584 ಪ್ರಕರಣಗಳು, ಮದ್ದೂರಿನ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 2394 ಪ್ರಕರಣಗಳು, ಶ್ರೀರಂಗಪಟ್ಟಣದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1967 ಪ್ರಕರಣಗಳು, ಪಾಂಡವಪುರದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 651 ಪ್ರಕರಣಗಳು, ಮಳವಳ್ಳಿಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 1225 ಪ್ರಕರಣಗಳು, ನಾಗಮಂಗಲದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 576 ಪ್ರಕರಣಗಳು ಹಾಗೂ ಕೆ.ಆರ್.ಪೇಟೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 2292 ಪ್ರಕರಣಗಳು ಇತ್ಯರ್ಥಗೊಂಡಿವೆ.

ದಾAಪತ್ಯದಲ್ಲಿ ಬಿರುಕು ಮೂಡಿ ವಿವಾಹ ವಿಚ್ಚೇದನಕ್ಕೆ ಮಂಡ್ಯ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕೆಲವು ವರುಷÀಗಳ ಬಳಿಕ ಒಂದು ಜೋಡಿ ದಂಪತಿ ಡಿಸೆಂಬರ್ 9 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ವಿಶೇಷವಾಗಿತ್ತು ಸದರಿ ದಂಪತಿಗಳ ದಾಂಪತ್ಯದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಕಂಡುಬAದು, ನ್ಯಾಯಾಲಯದಲ್ಲಿ ವಷÀðಗಳಿಂದ ಪ್ರಕರಣ ನಡೆದು ವಿವಾಹ ವಿಚ್ಚೇದನ ಹಂತ ತಲುಪಿತ್ತು. ಅದಾಲತ್ ನಲ್ಲಿ ಈ ದಂಪತಿಗಳ ಭಿನ್ನಾಭಿಪ್ರಾಯ ನಿವಾರಣೆಗೆ ನಿರಂತರವಾಗಿ ನ್ಯಾಯಾಧೀಶರು, ವಕೀಲರು ಹಾಗೂ ಸಂಧಾನಕಾರರು ನಡೆಸಿದ ರಾಜಿ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ದಾಂಪತ್ಯದ ತಪ್ಪು ತಿಳುವಳಿಕೆಗಳನ್ನು, ಸÀರಿಪಡಿಸಿಕೊಂಡು ಮುಂದೆ ಯಾವುದೇ ಭಿನ್ನಾಭಿಪ್ರಾಯ ಬರದಂತೆ ಸಂತೋಷದಿAದ ದಾಂಪತ್ಯ ಜೀವನ ನಡೆಸಿಕೊಂಡು ಹೋಗಲು ಮತ್ತೆ ಒಂದಾದರು.

ಲೋಕ ಅದಾಲತ್ ನಲ್ಲಿ ಭಾಗವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಇವರು ಮಂಡ್ಯದ ನ್ಯಾಯಾಲಯದಲ್ಲಿ ಒಂದಾದ ಜೋಡಿಗೆ ಮದುವೆಯ ಭಾಂಧವರು ಪಾವಿತ್ರತೆ ಹಾಗೂ ಸಾಮರಸ್ಯದ ಬದುಕಿನ ಬಗ್ಗೆ ಕಿವಿಮಾತು ಹೇಳಿ ಶುಭಾಶಯ ಕೋರಿದರು. ಜೋಡಿಗಳು ನ್ಯಾಯಾಲಯದಲ್ಲಿ ಹಾರ ಬದಲಾಯಿಸಿ, ಸಂಭ್ರಮಿಸಿದರು.

ನ್ಯಾಯಾಲಯದಲ್ಲಿ ಹಾಜರಿದ್ದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿಗಳು ಹಾಗೂ ಸಾರ್ವಜಿನಿಕರು
ಈ ಶುಭ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


Share