ವಂಶವಾಹಿನಿ ಕಾಯಿಲೆ ತಡೆಗೆ ಸಂಶೋಧಡಾ. ವೈ ಎಂ ಶಿವಕುಮಾರ್ ಅಗತ್ಯ

124
Share

 

 

ವಂಶವಾಹಿನಿ ಕಾಯಿಲೆ ತಡೆಗೆ ಸಂಶೋಧನೆ ಅಗತ್ಯ:ಮೈಸೂರು ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ವೈ ಎಂ ಶಿವಕುಮಾರ್
ತಿಳಿಸಿದರು.

ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ, ದಾನಿಗಳಿಂದಷ್ಟೆ ರಕ್ತವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹೆಚ್ಚಾಗಬೇಕು ಎಂದು ಮೈಸೂರು ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ವೈ ಎಂ ಶಿವಕುಮಾರ್
ತಿಳಿಸಿದರು.

ಮೈಸೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ
ರಕ್ತದಾನಿಗಳ ಅನುಕೂಲಕ್ಕಾಗಿ
ಹಾಗೂ ಸ್ವಯಂ ಪ್ರೇರಿತ ರಕ್ತದಾನ ಮಾಡುವ ಉದ್ದೇಶದಿಂದ , ರಕ್ತದಾನಿಗಳನ್ನು ಉತ್ತೇಜಿಸಲು,
ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಮಾಡುವ ರಕ್ತದಾನಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯ ವಾಹನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು
ರಕ್ತವನ್ನು ವಿವಿಧ ಭಾಗಗಳಾಗಿ ಬೇರ್ಪಡಿಸಿ ನಿರ್ದಿಷ್ಟ ಬೇಡಿಕೆಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಆದರೆ, ರಕ್ತವನ್ನು ದೀರ್ಘ ಕಾಲದವರೆಗೂ ಸಂರಕ್ಷಿಸಿಡಲು ಸಾಧ್ಯವಿಲ್ಲ. ಹೆಚ್ಚೆಂದರೆ ರಕ್ತವನ್ನು 32 ದಿನ, ಪೇಟ್ಲೆಟ್‌ಗಳನ್ನು ವಾರದವರೆಗೂ ಇಡಬಹುದು. ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಸಲಹೆ ನೀಡಿದರು.

‘ವಂಶವಾಹಿನಿಗಳ ಮೂಲಕ ಬರುವ ಕಾಯಿಲೆಗಳನ್ನು ತಡೆಯುವುದು ಕಷ್ವವಾಗಿದ್ದು, ವೈದ್ಯರು ಇಂತಹ ಸವಾಲುಗಳನ್ನು ಸ್ವೀಕರಿಸಬೇಕು. ಅಂತರ
ರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧ ಮಂಡನೆ ಹಾಗೂ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.

ತುರ್ತು ಅವಘಡಗಳು ಸಂಭವಿಸಿದಾಗ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದಿದ್ದರೆ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ, ರಕ್ತದಾನದ ಬಗ್ಗೆ ಯುವಕರಲ್ಲಿ ಅರಿವು ಮೂಡಬೇಕು. ಕಾಲೇಜುಗಳಲ್ಲಿ ರಕ್ತದಾನಿಗಳ ಗುಂಪು ರಚನೆ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಂತರ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್
ನಗರ ಹಾಗೂ ಜಿಲ್ಲೆಯಲ್ಲಿ ರಕ್ತದಾನ ಪ್ರಮಾಣವನ್ನು ಹೆಚ್ಚಿಸಲು ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ನಮ್ಮ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಅವರ ಇರುವ ಸ್ಥಳದಿಂದ ಕರೆದುಕೊಂಡು ಬಂದು ಸ್ವಯಂ ಪ್ರೇರಿತ ರಕ್ತದಾನ ಪಡೆದು ಆನಂತರ ಕರೆದುಕೊಂಡು ಬಂದ ಸ್ಥಳದಲ್ಲಿ ಬಿಡುವಂತ ವ್ಯವಸ್ಥೆಯನ್ನು ಮಾಡಲಾಗಿದೆ ಇದರ ಉಪಯೋಗವನ್ನು ರಕ್ತದಾನಿಗಳು ಪಡೆಯಬಹುದು ಎಂದು ಹೇಳಿದರು , ರಕ್ತದಾನಿಗಳಿಗೆ ಇನ್ನೂ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಇರುವ ಸ್ಥಳದಲ್ಲಿ ರಕ್ತದಾನ ಮಾಡಿಸುವ ನಿಟ್ಟಿನಲ್ಲಿ
ಮುಂದಿನ ದಿನಗಳಲ್ಲಿ ಸಂಚಾರಿ ರಕ್ತ ನಿಧಿ ವಾಹನವನ್ನು ಲೋಕಾರ್ಪಣೆ ಮಾಡುವ ಚಿಂತನೆಯಲ್ಲಿದ್ದೇವೆ,
ಸ್ವಯಂ ಪ್ರೇರಿತರಕ್ತದಾನ ಮಾಡಲು ವಾಹನದ ವ್ಯವಸ್ಥೆ ಬೇಕಾದಲ್ಲಿ 9008123101
ಈ ದೂರವಾಣಿಗೆ ಸಂಪರ್ಕಿಸಬಹುದು ಎಂದು ಹೇಳಿದರು

ನಂತರ ಮಾತನಾಡಿದ ಸ್ತ್ರೀ ಮತ್ತು ಪ್ರಸೂತಿ ಸಂಘದ ಅಧ್ಯಕ್ಷರಾದ ಖ್ಯಾತ ವೈದ್ಯರಾದ ರೂಪಪ್ರಕಾಶ್
ಮಾತನಾಡಿ, ‘ರಕ್ತಕ್ಕೆ ಬದಲಿ ವಸ್ತುಗಳು ಇಲ್ಲವಾದ್ದರಿಂದ, ರಕ್ತಕ್ಕೆ ವಿಶೇಷ ಮಹತ್ವವಿದೆ. ಯುವಕರು ರಕ್ತದಾನದ ಸಂಕಲ್ಪ ತೊಡಬೇಕು. ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಮೈಸೂರು ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ವೈ ಎಂ ಶಿವಕುಮಾರ್,ಸ್ತ್ರೀ ಮತ್ತು ಪ್ರಸೂತಿ ಸಂಘದ ಅಧ್ಯಕ್ಷರಾದ ಖ್ಯಾತ ವೈದ್ಯರಾದ ರೂಪಪ್ರಕಾಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ, ರಶ್ಮಿ, ಮಮತಾ, ಸದಾಶಿವ್ ,ಚಂದ್ರು, ಶಾರದಾ, ಪ್ರಭು,ಬ್ಲಡ್ ಆನ್ ಕಾಲ್ ಕ್ಲಬ್ ದೇವೇಂದ್ರ ಪರಿಹಾರಿಯ ,
ಆನಂದ್ ಮಂಡೂತ್, ಅನ್ಮೋಲ್ ,ಹಾಗೂ ಇನ್ನಿತರರು ಹಾಜರಿದ್ದರು


Share