ವಿದೇಶದಿಂದ ಬಂದವರು ಪತ್ತೆಯಾಗಿಲ್ಲ ಎಂದರೆ ಏನರ್ಥ ?

578
Share

ಬ್ರಿಟನ್ ದೇಶದಿಂದ ಕರ್ನಾಟಕ ರಾಜ್ಯಕ್ಕೆ ಈವರೆಗೆ 2127ಜನರು ಬಂದಿದ್ದಾರೆಂದು ಹೇಳಲಾಗಿದೆ. ಇವರಲ್ಲಿ 1587ಜನರಿಗೆ ಕರೋನಾ ಟೆಸ್ಟ್ ಮಾಡಲಾಗಿದೆ. 540ಇನ್ನೂ ಪತ್ತೆಯಾಗಿಲ್ಲ ಎಂದು ಸರ್ಕಾರ ಹೇಳುತ್ತಿದೆ .
ಏನಿದರ ಅರ್ಥ ?ಯಾವುದೇ ಒಬ್ಬ ನಾಗರಿಕ ಹೊರದೇಶದಿಂದ ಬಂದರೆ ಅವನ ಬಳಿ ಅಗತ್ಯವಿರುವ ಪಾಸ್ ಪೋರ್ಟ್ ವೀಸಾ ಅದರಲ್ಲಿ ಪೂರ್ಣ ವಿಳಾಸದ ಮಾಹಿತಿ ಫೋನ್ ನಂಬರ್ ಇದ್ದೇ ಇರುತ್ತದೆ ಆದರೆ ಇವರುಗಳು ಪತ್ತೆ ಇಲ್ಲ ಎಂದರೆ ಏನು ಅರ್ಥ ?ನಮ್ಮ ಗೃಹ ಇಲಾಖೆ ಕೈಕಟ್ಟಿ ಕೂತಿದೆಯೇ?
ಈ ರೀತಿ ಹೇಳುತ್ತಿರುವುದು ಬೇಜವಾಬ್ದಾರಿಯ ಸಂಕೇತ .
ಭಯೋತ್ಪಾದಕರ ತಂಡ ಇದೇ ರೀತಿ ರಾಜ್ಯಕ್ಕಾಗಲಿ ದೇಶದ ಇನ್ನಿತರೆ ಯಾವುದೇ ಭಾಗಕ್ಕಾಗಲಿ ಬಂದಿಳಿದಿದ್ದರೆ ಸುಮ್ಮನೆ ಕೂರಲು
ಆಗುತಿತ್ತೇ? ಯುದ್ದೋಪಾದಿಯಲ್ಲಿ ಎಲ್ಲ ಕಡೆಯೂ ಅವರ ಚಲನವಲನಗಳ ಬಗ್ಗೆ ನಿಗಾ ಇಡುತ್ತಿರಲಿಲ್ಲವೇ? ಆ ರೀತಿ ಈಗ ಬ್ರಿಟನ್ ನಿಂದ ಬಂದಿರುವ ಸೋಂಕಿತರನ್ನು ಏಕೆ ಪತ್ತೆ ಮಾಡಲು ಮುಂದಾಗಿಲ್ಲ?ಅಥವಾ ಸರಕಾರ ಮಾಹಿತಿ ಇದ್ದರೂ ಮುಂಬರುವ ಜನವರಿ ಒಂದರ ಆಚರಣೆಯನ್ನು ಹತ್ತಿಕ್ಕಲು ಈ ರೀತಿಯ ನಾಟಕ ಆಡುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ .
ಸರ್ಕಾರದ ಈ ರೀತಿಯ ಬೇಜವಾಬ್ದಾರಿಯ ವರ್ತನೆ ಜನರಿಗೆ ಮತ್ತಷ್ಟು ಆತಂಕ ಉಂಟು ಮಾಡಲಿದೆ.
ಒಂದೆಡೆ ರಾಜ್ಯದಲ್ಲಿ ಕರೋನಾ ಸೋಂಕು ಇಳಿಮುಖವಾಗುತ್ತಿದೆ ,ಸಾವಿನ ಸಂಖ್ಯೆ ಕ್ಷೀಣಿಸುತ್ತಿದೆ ಎಂದೆಲ್ಲಾ ವರದಿ ಬರುತ್ತಿದೆ .ಈ ಸಮಯದಲ್ಲಿ ಬ್ರಿಟನ್ ಕರೋನ ಸೋಂಕಿನ ಬಗ್ಗೆ ಯಾವುದೇ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.
ಈ ನಿಟ್ಟಿನಲ್ಲಿ ಕೇಂದ್ರವೂ ಸಹ ಖಚಿತ ಅಭಿಪ್ರಾಯ ತಿಳಿಸುತ್ತಿಲ್ಲ. ಒಟ್ಟಾರೆ ಹೇಳುವುದಾದರೆ ರಾಜ್ಯ ಮತ್ತು ಕೇಂದ್ರ ದೊಡ್ಡ ನಾಟಕವೇ ಆಡುತ್ತಿದೆ ಎಂದು ಹೇಳಬಹುದಾಗಿದೆ.ಸರ್ಕಾರ ಅಥವಾ ಪಾಸ್ ಸ್ಪೋರ್ಟ್ ಸಂಬಂಧದ ಇಲಾಖೆ ಕೂಡಲೇ ಮುಂದಾಗಿ ಪಾಸ್ಪೋರ್ಟ್ ಸೀಸ್ ಮಾಡಬೇಕು ಅದೇನು ದೊಡ್ಡ ಕೆಲಸ ಅಲ್ಲ ಕೂಡಲೇ ಮಾಡಿದರೆ ಎಲ್ಲಿದ್ದರೂ ಓಡಿ ಬರುತ್ತಾರೆ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಶೀಘ್ರದಲ್ಲಿ ಮುಂದಾಗಬೇಕು.


Share