ವಿದೇಶಿ ಪ್ರಜೆಗಳಿಗೂ ಭಾರತದಲ್ಲಿ ಕೋವಿಡ್ ಲಸಿಕೆ

250
Share

ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಈಗ ಭಾರತದಲ್ಲಿ ಕೋವಿಡ್ -19 ಲಸಿಕೆಗಳನ್ನು ತೆಗೆದುಕೊಳ್ಳಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಿಸಿದೆ.
ಭಾರತದಲ್ಲಿ ಕೋವಿಡ್ -19 ವಿರುದ್ಧ ಲಸಿಕೆ ಪಡೆಯಲು, ವಿದೇಶಿ ಪ್ರಜೆಗಳು ತಮ್ಮ ಗುರುತನ್ನು ಬಳಸಿಕೊಂಡು ಸರ್ಕಾರದ ಕೋವಿನ್ ಆಪ್ ನಲ್ಲಿ ಪಾಸ್‌ಪೋರ್ಟ್‌ಗಳೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
” ಭಾರತದಲ್ಲಿ ವಿದೇಶಿ ಪ್ರಜೆಗಳು ಹೆಚ್ಚಾಗಿ ಇದ್ದು ಅದರಲ್ಲೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಮಂದಿ ಇರುವುದರಿಂದ ಅವರಿಂದ ಕೊರೋನ ಹೆಚ್ಚಾಗಿ ಹರಡುವ ಸಾಧ್ಯತೆ ಇರುವುದರಿಂದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಲಸಿಕೆ ಹಾಕುವುದು ಮುಖ್ಯ, ”ಎಂದು ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


Share