ವಿಷ ಬೀಜ ಬಿತ್ತುವುದೇ ಬಿಜೆಪಿಯ ಪ್ರಣಾಳಿಕೆ : ಎಂಕೆ ಸೋಮಶೇಖರ್

279
Share

ಅಭಿವೃದ್ಧಿ ನಗಣ್ಯ,ಕೋಮುವಾದದ ವಿಷ ಬೀಜ ಬಿತ್ತುವುದೇ ಬಿಜೆಪಿಯವರ ಪ್ರಣಾಳಿಕೆ – ಎಂ ಕೆ ಸೋಮಶೇಖರ್.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ದೇವರಾಜ ಅರಸ್ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ಉಪಸ್ಥಿತಿಯಲ್ಲಿ ಸಂಘಟನಾ ಸಭೆ ಹಾಗೂ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ಕಾರ್ಯಾಲಯದಲ್ಲಿ ಸಭೆ ಜರುಗಿತು.ಈ ಸಂಧರ್ಭದಲ್ಲಿ ನಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ,ಕೆಪಿಸಿಸಿ ಸದಸ್ಯೆ ವೀಣಾ,ದೇವರಾಜ ಅರಸು ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವಿದ್ಯಾ,ಪಾಲಿಕೆ ಸದಸ್ಯೆ ಶೋಭಾ ಸುನೀಲ್,ಉಪಾಧ್ಯಕ್ಷರಾದ ನಾಗರತ್ನ ಮಂಜುನಾಥ್,ಮಾಜಿ ಮೇಯರ್ ಟಿ ಬಿ ಚಿಕ್ಕಣ್ಣ ,ಇಂದಿರಾ,ಮಲ್ಲಾಜಮ್ಮ ಮತ್ತಿತರರು ಹಾಜರಿದ್ದರು.
ನಂತರ ಮಾತನಾಡಿದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಇಡೀ ದೇಶದ್ಯಾಂತ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆದೇಶದ ಮೇರೆಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಪ್ರಾರಂಭವಾಗಿದ್ದು ನಮ್ಮ ರಾಜ್ಯದ ಪ್ರತಿ ಬೂತ್ ಗಳಲ್ಲಿಯೂ ನಡೆಯುತ್ತಿದೆ.ಬೆಂಗಳೂರಿನಲ್ಲಿ ರಾಜ್ಯದ ಉಸ್ತುವಾರಿಗಳಾದ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ ರವರು ನೋಂದಣಿ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು.ಸನ್ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು,ಮೈಸೂರು ನಗರಾಧ್ಯಕ್ಷರಾದ ಆರ್ ಮೂರ್ತಿ ಹಾಗೂ ಸ್ಥಳೀಯ ಶಾಸಕರು,ಮಾಜಿ ಶಾಸಕರ ಉಪಸ್ಥಿತಿಯಲ್ಲಿ ನೋಂದಣಿ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ.ಈಗಾಗಲೇ ವಾರ್ಡ್ ಮತ್ತು ಬೂತ್ ಮಟ್ಟದ ಮುಂಚೋಣಿ ಪ್ರತಿನಿಧಿಗಳಿಗೆ ತರಭೇತಿಯನ್ನು ಸಹ ನೀಡಿದ್ದಾರೆ.ಇವೆಲ್ಲದರ ಅನುಭವದಡಿಯಲ್ಲಿ ನಾವು ನೀವೆಲ್ಲರೂ ಸೇರಿ ಇಡೀ ಕೃಷ್ಣರಾಜ ಕ್ಷೇತ್ರದ್ಯಾಂತ ಹೆಚ್ಚಿನ ಮಹಿಳೆಯರನ್ನು ಪಕ್ಷದ ಸದಸ್ಯತ್ವ ಪಡೆಯುವಂತೆ ಪಕ್ಷದ ಸಾಧನೆಗಳು,ಹಿನ್ನೆಲೆ,ರಾಜಕೀಯ ಪರಿಸ್ಥಿತಿಗಳನ್ನು ಮನವರಿಕೆ ಮಾಡಿ ನೋಂದಣಿಯಾಗಲು ಉತ್ತೇಜಿಸುವ ಕೆಲಸ ಮಾಡಬೇಕಿದೆ.ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ.ರಾಜ್ಯದ ಜನತೆ ಈಗಾಗಲೇ ಕೇಂದ್ರ,ರಾಜ್ಯ ಬಿಜೆಪಿ ಸರ್ಕಾರಗಳ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಪೊಳ್ಳು ಭರವಸೆಗಳನ್ನು ಗಮನಿಸಿ ನೊಂದು ಕಿತ್ತೊಗೆಯುವ ಆತುರದಲ್ಲಿದ್ದಾರೆ.ನಮ್ಮ ಕಾಂಗ್ರೆಸ್ ಪಕ್ಷ ಇವತ್ತಿನವರೆಗೂ ಅಭಿವೃದ್ಧಿಯನ್ನೇ ಮಾನದಂಡವನ್ನಾಗಿಟ್ಟುಕೊಂಡು ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುತ್ತಾ ಬಂದಿದೆ.ಆದರೆ ಬಿಜೆಪಿ ಸರ್ಕಾರ ಒಂದು ಹೊಸಯೋಜನೆ,ರೈತಪರ,ಮಹಿಳೆಯರ ಪರ,ದಲಿತ ದಮನಿತರ ಪರ,ಹಿಂದುಳಿದವರ ಪರ,ಅಲ್ಪಸಂಖ್ಯಾತರ ಪರ ಯಾವುದೇ ಹೊಸಯೋಜನೆಗಳನ್ನು ಅನುಷ್ಠಾನ ಮಾಡದೇ,ಆರೋಗ್ಯಕರ ಬಜೆಟ್ ಮಂಡಿಸಿದೆ ಜನರನ್ನು ಬಡತನ ಮತ್ತು ಹಸಿವಿನ ಹಾಗೂ ನಿರುದ್ಯೋಗದ ಕೂಪಕ್ಕೆ ತಳ್ಳಿದೆ.ಮಹಿಳೆಯರ ರಕ್ಷಣೆ,ಸ್ವಾತಂತ್ರ್ಯ,ಸಮಾನತೆ,ಮಹಿಳಾ ಪರ ಹೊಸ ಯೋಜನೆಗಳನ್ನೂ ರೂಪಿಸುವ ಆಲೋಚನೆಯೂ ಈ ಬಿಜೆಪಿ ಸರ್ಕಾರಕ್ಕಿಲ್ಲ.ಇದೆಲ್ಲದರ ವಿರುದ್ಧ ಉಪಚುನಾವಣೆಗಳಲ್ಲಿ ನಾಗರೀಕರು ಬಿಜೆಪಿಯವರಿಗೆ ತಕ್ಕ ಶಾಸ್ತಿ ನೀಡಿದ್ದಾರೆ.ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ಬಿಜೆಪಿ ಸರ್ಕಾರ ಜನರ ದಿಕ್ಕುತಪ್ಪಿಸುವ ದೃಷ್ಠಿಯಿಂದ ಹಿಜಾಬ್ ಅಸ್ತ್ರ ಬಳಸಿ ದೇಶದೆಲ್ಲೆಡೆ ಅಶಾಂತಿಗೆ ಪ್ರೇರಣೆ ನೀಡುತ್ತಿದ್ದಾರೆ.ಒಂದು ವರ್ಗವನ್ನು ನೇರವಾಗಿ ದೂಷಿಸುವ ದುಷ್ಟ ಕಾರ್ಯಕ್ಕೆ ಕೈ ಹಾಕಿದ್ದಾರೆ.ದೇಶ,ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಮಲಗಿರುವ ಬಿಜೆಪಿ ಸರ್ಕಾರ ಚುನಾವಣೆ ಹತ್ತಿರವಾಗುತ್ತಿರುವಂತೆ ಜಾತಿ,ಧರ್ಮದ ಅಸ್ತ್ರ ಬಳಸಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ.ಬಿಜೆಪಿಯವರು ಅಭಿವೃದ್ಧಿಯ ಹೆಸರಲ್ಲಿ ಎಂದು ಮಾತನಾಡುವ ಧೈರ್ಯ ಮಾಡುವುದಿಲ್ಲ ಬದಲಾಗಿ ಈ ರಾಜ್ಯದ ಸರ್ವಧರ್ಮ,ಸರ್ವಜಾತಿ ಜನಾಂಗಗಳು ಒಪ್ಪುವಂತಹ ನೇತಾರ ಸಿದ್ದರಾಮಯ್ಯನವರರನ್ನು ಟಾರ್ಗೆಟ್ ಮಾಡಿ ಮಾತನಾಡುವ ಚಾಳಿ ಪ್ರಾರಂಭಿಸಿದ್ದಾರೆ.ಬಿಜೆಪಿಯ ರಾಷ್ಟ್ರ,ರಾಜ್ಯ,ಬೂತ್ ಮಟ್ಟದವರೆಗೂ ಎಲ್ಲರೂ ಸಿದ್ದರಾಮಯ್ಯನವರನ್ನು ಬೈಯ್ಯುವ,ಕೆಣಕುವ ಮೂಲಕ ದೊಡ್ಡಮಟ್ಟಕ್ಕೆ ಬೆಳೆಯಬಹುದು,ನಿರಂತರ ಪ್ರಚಾರದಲ್ಲಿರಬಹುದು ಎಂಬುದನ್ನು ತಿಳಿದು ಪದೇ ಪದೇ ಸಿದ್ದರಾಮಯ್ಯನವರನ್ನೇ ನೆನಪಿಸಿಕೊಳ್ಳುತ್ತಿದ್ದಾರೆ.ನಿಜವಾಗಿ ಒಳ್ಳೆಯ ಆಡಳಿತ ಸುಭದ್ರ ಸರ್ಕಾರವನ್ನು ನೆಡೆಸಿದ್ದೇ ಆದರೆ ಕೇವಲ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿ ಚುನಾವಣೆ ಎದುರಿಸಲಿ ಅದನ್ನು ಬಿಟ್ಟು ಸಿದ್ದರಾಮಯ್ಯನವರನ್ನು ಕೆಣಕುವ ಮೂಲಕ,ಧರ್ಮ,ಜಾತಿ,ಕೋಮುವಾದದ ವಿಷ ಬೀಜ ಭಿತ್ತುವ ಮೂಲಕ ಅದನ್ನೇ ಚುನಾವಣೆ ಪ್ರಣಾಳಿಕೆ ಮಾಡಿಕೊಳ್ಳಬೇಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.ನಂತರ ದೇವರಾಜ ಅರಸು ಬ್ಲಾಕ್ ನ ವಿವಿಧ ವಾರ್ಡ್ ಗಳಿಂದ ಆಗಮಿಸಿದ್ದ ಮಹಿಳಾ ಅಧ್ಯಕ್ಷರು,ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನದ ಯಶಸ್ಸಿಗೆ ಉಪಯುಕ್ತವಾಗುವ ಸಲಹೆ,ಅಭಿಪ್ರಾಯ,ಅನಿಸಿಕೆಗಳನ್ನು ಮುಕ್ತವಾಗಿ ಚರ್ಚಿಸಿದರು.


Share