ವೀಕ್ಷಿಸಿ : ಕಿವುಡು ಮಕ್ಕಳೂ ಮಾತನಾಡಬಲ್ಲರು – ಡಾ. ಶಾಂತಾ ರಾಧಾಕೃಷ್ಣ ಎಸ್ ಜಿಎಸ್ ವಾಗ್ದೇವಿ ಶಿಕ್ಷಣ ಕೇಂದ್ರ

764
Share

 

 

SGS ವಾಗ್ದೇವಿ ಸಂವಹನ ದುರ್ಬಲಗೊಂಡವರ ಪುನರ್ವಸತಿ ಕೇಂದ್ರವನ್ನು ಡಾ. ಶಾಂತಾ ರಾಧಾಕೃಷ್ಣ ಅವರು 1996 ರಲ್ಲಿ ಸ್ಥಾಪಿಸಿದರು ಮತ್ತು 2002 ರಿಂದ ಮೈಸೂರಿನ ಅವಧೂತ ದತ್ತ ಪೀಠಂ ಟ್ರಸ್ಟ್‌ನ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಗ್ದೇವಿ ಕೇಂದ್ರವು ಶ್ರವಣ ದೋಷದಂತಹ ಸಂವಹನ ದುರ್ಬಲತೆ ಹೊಂದಿರುವ (HI), ಕಲಿಕೆಯ ಅಸಾಮರ್ಥ್ಯ (LD), ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD), ಅಟೆನ್ಶನ್ ಡೆಫಿಸಿಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD) ಸೆರೆಬ್ರಲ್ ಪಾಲ್ಸಿ (CP) ಇತ್ಯಾದಿ, ತೊಂದರೆಗಳನ್ನು ಪರಿಹರಿಸುತ್ತದೆ.
ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ.
ಸಾಮಾಜಿಕ ಶಿಕ್ಷಣ ಮತ್ತು ಮಲ್ಟಿಮೀಡಿಯಾದ ಮೂಲಕ ಸಂವಹನ ದುರ್ಬಲತೆಯ ಬಗ್ಗೆ ಜಾಗೃತಿ ಮೂಡಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ. ಸಾಮೂಹಿಕ ಸ್ಕ್ರೀನಿಂಗ್ ಮೂಲಕ ಆರಂಭಿಕ ರೋಗನಿರ್ಣಯ, ಗ್ರಾಮೀಣ ವಲಯಗಳಲ್ಲಿ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸಿ ತೊಂದರೆಯ ತಡೆಗಟ್ಟುವಿಕೆ , ಕಂಡು ಹಿಡಿಯುವಿಕೆಗೆ ಒತ್ತು ಕೊಡಲಾಗುತ್ತದೆ . ವಿಕಲಚೇತನ ಮಕ್ಕಳಿಗೆ ನೈತಿಕ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ನೀಡಿ, ಅವರನ್ನು ದೇಶದ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಪ್ರೇರೇಪಿಸುತ್ತಿದೆ. ಸಂವಹನ ದುರ್ಬಲರಿಗೆ ಮಾಹಿತಿ ಭಂಡಾರವಾಗಿರುವ ಸಂಪನ್ಮೂಲ ಕೇಂದ್ರವನ್ನು ರಚಿಸುತ್ತಿದೆ.
ಅಂದಾಜು ಸುಮಾರು ಹತ್ತು ಸಾವಿರ ಮಕ್ಕಳಲ್ಲಿ 1 ಕಿವುಡು ಮಗು ಹುಟ್ಟುತ್ತದೆ ಎಂದು ತಿಳಿದು ಬಂದಿದೆ. ಇಂತಹ ಮಕ್ಕಳು ಯಾವ ರೀತಿಯ ಶಿಕ್ಷಣ ಅಥವಾ ಪುನಶ್ಚೇತನ ಕಾರ್ಯಕ್ರಮವಿಲ್ಲದೆ ಸಮಾಜದ ಹೊರಗೆ ಉಳಿದಿದ್ದಾರೆ .
ಮುಂದುವರೆದ ಶ್ರವಣೋಪಕರಣ ತಂತ್ರಜ್ಞಾನ, ಕಾಕ್ಲಿಯರ್ ಇಂಪ್ಲಾಂಟೇಶನ್, ಕಿವುಡನ್ನು ಅತಿ ಶೀಘ್ರದಲ್ಲಿ ಗುರುತಿಸುವಿಕೆ ಇವೆಲ್ಲಾ ಇದ್ದರೂ ಶ್ರವಣ ನ್ಯೂನ್ಯತೆಯುಳ್ಳ ವಯಸ್ಕನ ಶಿಕ್ಷಣ ನಾಲ್ಕನೇ ತರಗತಿಯ ಮಟ್ಟದಲ್ಲೇ ಉಳಿದಿದೆ.
ಇದಕ್ಕೆ ಕಾರಣ ತರಬೇತಿ ಹೊಂದಿರುವ ನುರಿತ ಶಿಕ್ಷಕರು, ಒಳ್ಳೆಯ ಶ್ರವಣೋಪಕರಣಗಳು, ಶಿಶು ಶಿಕ್ಷಣ ಮತ್ತು ಒಳ್ಳೆಯ ಶಾಲೆಗಳ ಕೊರತೆ.
ಇಂತಹ ಕಿವುಡು ಮಗುವಿನ ಪ್ರತಿಯೊಬ್ಬ ಪೋಷಕರು ತಮ್ಮ ಮಗು ಇತರ ಮಕ್ಕಳಂತೆ ಮಾತು ಭಾಷೆ ಕಲಿತು ಸಾಮಾನ್ಯ ಶಾಲೆಯಲ್ಲಿ ಓದುವಂತಾಗಬೇಕು ಎಂದು ಬಯಸುತ್ತಾರೆ. ಇದು ಸಾಧ್ಯವಾಗಬೇಕಾದರೆ ಸಾಧಾರಣ ಮಗು ಯಾವ ರೀತಿಯಲ್ಲಿ ಮಾತು ಭಾಷೆ ಕಲಿಯುತ್ತದೋ ಅದೇ ರೀತಿಯ ವಾತಾವರಣವನ್ನು ಆ ಮಗುವಿಗೂ ಕಲ್ಪಿಸಬೇಕು .
ಶ್ರವಣದೋಷವಿರುವ ಮಕ್ಕಳ ತರಬೇತಿ ಯಶಸ್ವಿಯಾಗಬೇಕಾದರೆ ಅವರಿಗೆ ಮಾತಿನ ಶ್ರವಣ ತರಬೇತಿ ಅತಿ ಶೀಘ್ರದಲ್ಲಿ ನೀಡಬೇಕು . ಎಸ್ ಜಿಎಸ್ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ ಪೋಷಕರಿಗೆ ಕನ್ನಡ ತೆಲುಗು ಮತ್ತು ಇಂಗ್ಲಿಷ್ ಭಾಷೆಯಲ್ಲಿ ತರಬೇತಿ ನೀಡಲಾಗುವುದು. ಮನೆ ಹಾಗೂ ಪರಿಸರದಲ್ಲಿ ಹೆಚ್ಚು ಬಳಕೆಯಲ್ಲಿರುವ ಭಾಷೆಯನ್ನು ಆಧರಿಸಿ 3 ಭಾಷೆಗಳಲ್ಲಿ ಒಂದನ್ನು ಮಕ್ಕಳ ತರಬೇತಿಗಾಗಿ ಪೋಷಕರು ಆಯ್ದುಕೊಳ್ಳಬಹುದು .
ಈ ತಾಯಿ ಮಗು ಉತ್ತೇಜನ ಕಾರ್ಯಕ್ರಮದ ಉದ್ದೇಶ ತಾಯಿ ತನ್ನ ಸಾಧಾರಣ ಮಗುವಿನ ಜತೆ ಯಾವ ರೀತಿಯಲ್ಲಿ ಮಾತನಾಡುತ್ತಾಳೋ ಅದೇ ರೀತಿ ಕಿವುಡು ಮಗುವಿನ ಜತೆಯೂ ಮಾತಾಡಬೇಕು ಉತ್ತೇಜಿಸಬೇಕು .
ಈ ತರಬೇತಿಯಲ್ಲಿ ತಾಯಿಯದೇ ಮುಖ್ಯಪಾತ್ರ. ಕ್ರಮಬದ್ಧವಾದ ವ್ಯವಸ್ಥಿತ ಮಾರ್ಗದಲ್ಲಿ ಹಂತಹಂತವಾಗಿ ಮಾತು ಹಾಗೂ ಶ್ರವಣೇಂದ್ರಿಯದ ಉತ್ತೇಜನದ ಜತೆಗೆ ತರಬೇತಿ ನಡೆಯುತ್ತದೆ.
ತರಬೇತಿ ಜೂನ್ ಮೊದಲನೇ ವಾರದಿಂದ ಮಾರ್ಚ್ ಕೊನೆಯವರೆಗೆ ನಡೆಯುತ್ತದೆ .
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಶ್ರೀ ಗಣಪತಿ ಸಚ್ಚಿದಾನಂದ ವಾಗ್ದೇವಿ ಸೆಂಟರ್ ಫಾರ್ ದಿ ರಿಹ್ಯಾಬಿಲಿಟೇಶನ್ ಆಫ್ ಕಮ್ಯುನಿಕೇಶನ್ ಇಂಪೇರ್ಡ್
ಗಿರಿನಗರ
ಬೆಂಗಳೂರು 560085
Shri Ganapathy Sachchidananda Vagdevi center for the rehabilitation of communication impaired
Giri nagar
bangalore 85
ph no. –
2672 7141
65593266
email : vagdevitrust@rediffmail.com
Website : www.sgsvagdevi.org

Share