ವೈದ್ಯಕೀಯ ಸೇವೆಯಲ್ಲಿ ಕನ್ನಡ ಬಳಕೆಗೆ-ಆಗ್ರಹ

204
Share

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಕಾಯಕ ವರ್ಷ ಆಚರಣೆ ಅಂಗವಾಗಿ ವೈದ್ಯಕೀಯ ಸೇವೆಯಲ್ಲಿ ಕನ್ನಡ ಬಳಕೆ ಕುರಿತು ಕೆ.ಆರ್.ನಗರ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿಗಳಾದ ಡಾ.ಎಂ.ಎಸ್.ನಾಗೇಂದ್ರ ಅವರಿಗೆ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ‌ ಡಾ.ಭೇರ್ಯ ರಾಮಕುಮಾರ್‌ಅವರು ಹಕ್ಕೊತ್ತಾಯ ಪತ್ರ ಸಲ್ಲಿಸಿದರು.ವೈದ್ಯರು ಚಿಕಿತ್ಸೆ ನೀಡುವಾಗ ರೋಗಿಗಳಿಗೆ ಅರ್ಥವಾಗುವ ಕನ್ನಡ ಭಾಷೆಯನ್ನೇ‌ ಬಳಸಬೇಕು.ಅವರು ರೋಗದ ವಿವರಗಳನ್ನು ಕನ್ನಡದಲ್ಲಿ ಹೇಳಿದರೆ ರೋಗಿಗೆ ತನಗೆ ಬಂದಿರುವ ರೋಗ ಕುರಿತಂತೆ ಮಾಹಿತಿ ಸಿಗುತ್ತದೆ .ಆತನಿಗೆ ಕಾಯಿಲೆ ಎದುರಿಸುವ ದೈರ್ಯ ಬರುತ್ತದೆ .ಆಸ್ಪತ್ರೆಯ ನಾಮ ಫಲಕಗಳಲ್ಲಿ ಹಾಗೂ ಸೂಚನಾ ಫಲಕಗಳಲ್ಲಿ ಸಹಾ ಕನ್ನಡ ಬಳಸಬೇಕೆಂದು ಈ ಸಂದರ್ಭದಲ್ಲಿ ಅವರು ಹಕ್ಕೊತ್ತಾಯ ಮಾಡಿದರು.ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳಾದ ಡಾ.ಗೌತಮ್,ಡಾ.ತೇಜಮ್ಮಣ್ಣಿ,ಡಾ.ಶಾಂತಕುಮಾರ್,ಡಾ.ನವೀನಕುಮಾರ್ ಉಪಸ್ಥಿತರಿದ್ದರು.


Share