ವೈವಿಧ್ಯ ಗೌರಿಹಬ್ಬದ ಸಂಪ್ರದಾಯ :ವಿಶೇಷ MP TALK ಕಾರ್ಯಕ್ರಮ

2252
Share

ಕರ್ನಾಟಕ ರಾಜ್ಯದಲ್ಲಿ ಬಹುತೇಕ ಎಲ್ಲರೂ ಗೌರಿ ಗಣಪತಿ ಹಬ್ಬವನ್ನು ಆಚರಿಸುತ್ತಾರೆ . ಪುರೋಹಿತರನ್ನು ಕರೆಸಿ ಪೂಜೆ ಮಾಡುವುದು ಶಾಸ್ತ್ರೀಯ ಪದ್ಧತಿ, ಅದರ ಜೊತೆಗೆ ಮನೆಯಲ್ಲಿ ಅವರವರ ಸಂಪ್ರದಾಯಕ್ಕೆ ತಕ್ಕಂತೆ ಯಾವ ರೀತಿ ಆಚರಣೆ ಮಾಡುತ್ತಾರೆ? ಎನ್ನುವುದರ ಬಗ್ಗೆ ಇಂದಿನ ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಗೌರಿ ಹಬ್ಬ ಯಾಕೆ ಆಚರಣೆ ಮಾಡಬೇಕು? ಅದರ ಕಾರ್ಯವಿಧಾನ ಹಾಗೂ ಪ್ರಾರಂಭ ಹೇಗೆ ಮಾಡಬೇಕು? ಇಂಥವರೇ ಆಚರಿಸಬೇಕೇ? ನಿಬಂಧನೆ ಏನಾದರೂ ಇದೆಯೇ ? ಯಾರು ಅರ್ಹರು? ಎಷ್ಟು ವರ್ಷ ಮಾಡಬೇಕು? ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ? ಗೌರಮ್ಮನನ್ನು ಹೇಗೆ ಕೂರಿಸಬೇಕು? ಅರಿಶಿನ ಗೌರಮ್ಮ ಎಂದರೆ ಏನು? ಉಪಾಯನ ದಾನ, ಪೂರ್ಣ ಫಲ ಯಾವಾಗ/ಯಾರಿಗೆ ಸಮರ್ಪಣೆ ಮಾಡಬೇಕು? ಸೊಗಲಕ್ಕಿ/ಉಪ್ಪಕ್ಕಿ, ಗೌರಮ್ಮನ ವಿಸರ್ಜನೆ, ಮುಂತಾದ ವಿವಿಧ ರೀತಿಯಲ್ಲಿ ಚರ್ಚೆಯನ್ನು ಇಂದಿನ ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳದಲ್ಲಿ ಚರ್ಚಿಸಲಾಗುತ್ತಿದೆ .ಇಂದಿನ ಈ ಚರ್ಚಾ ಸ್ಪರ್ಧೆಯಲ್ಲಿ ಶ್ರೀಮತಿ ಶೀಲಾ ಕಶ್ಯಪ್, ಜ್ಯೋತಿ ಮಹೇಶ್, ಮತ್ತು ಗೀತಾ ರಘು ಅವರುಗಳು ಪಾಲ್ಗೊಂಡಿದ್ದು ಕುಮಾರಿ ಚಿನ್ಮಯಿ ಶ್ರೀನಿವಾಸ್ ಅವರು ನಿರೂಪಣೆ ಮಾಡುತ್ತಿದ್ದಾರೆ


Share