ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

84
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಸಂಗೀತ ವಿ.ವಿ ಗೌರವ ಡಾಕ್ಟರೇಟ್

ಮೈಸೂರು: ಮೈಸೂರಿನ ಅವಧೂತ ದತ್ತಪೀಠಾದಿಪತಿ ಶ್ರೀ  ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಾಗಿದೆ.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅ.18ರಂದು ಸಂಜೆ 4ಕ್ಕೆ ವಿಶ್ವವಿದ್ಯಾಲಯದ ಐದು ಮತ್ತು ಆರನೇ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರದಾನ ಪುರಸ್ಕಾರ ನೀಡಿ ಗೌರವಿಸಲಿರುವರು.
ಸಂಗೀತ ಸಂಶೋಧನೆಯಲ್ಲಿ ನೀಡಿದ ಕೊಡುಗೆ ಪರಿಗಣಿಸಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ 20-21 ನೆ ಸಾಲಿನ ಆರನೇ ಘಟಿಕೋತ್ಸವ ಪ್ರಯುಕ್ತ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಪಂಡಿತ್‌ ಶ್ರೀಪಾದ ಹೆಗಡೆ ಕಂಪ್ಲಿ ಹಾಗೂ ಪ್ರೊ.ಎಸ್.ಸಿ.ಶರ್ಮಾ ಅವರನ್ನೂ 2020-21ನೇ ಸಾಲಿನ ಆರನೇ ಘಟಿಕೋತ್ಸವದ ಗೌರವ ಡಾಕ್ಟರೇಟ್‌ ಗೆ ಆಯ್ಕೆ ಮಾಡಲಾಗಿದೆ.
ಸಂಗೀತ
ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಿದುಷಿ ಡಿ.ಶಶಿಕಲಾ, ಮಧುಸೂದನ ಸಾಯಿ ಹಾಗೂ ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ್‌ ವಿನಾಯಕ ತೊರವಿ ಅವರಿಗೆ 2019-20ನೇ ಸಾಲಿನ ಐದನೇ ಘಟಿಕೋತ್ಸವ ಪ್ರಯುಕ್ತ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ 6 ಮಂದಿ ಸಲ್ಲಿಸಿದ ಪ್ರಬಂಧಗಳಿಗೆ ಪಿಎಚ್‌ಡಿ ಪದವಿ ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ನಕೋಟೆ ತಿಳಿಸಿದ್ದಾರೆ.


Share