ಶ್ರೀ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪುಣ್ಯಸ್ಮರಣೆ

393
Share

ಶ್ರೀ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವರಹ ದ್ವಾರ ವ್ಯಾಪಾರಿಗಳ ಸಂಘವತಿಯಿಂದ
ಶ್ರೀ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 7ನೇ ವರ್ಷದ ಪುಣ್ಯಸ್ಮರಣೆ(ಎಡೆ ಕಟ್ಟಲೆ) ಯನ್ನು ಮೈಸೂರು ಅರಮನೆಯ ವರಹ ದ್ವಾರದ ಬಳಿ ಪುಣ್ಯಸ್ಮರಣೆಯನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸ್ಮರಿಸಲಾಯಿತು
ಪುಷ್ಪನಮನ ಸಲ್ಲಿಸಿ ಮಾತನಾಡಿದ
ಮೈಸೂರು ರಾಜವಂಶಸ್ಥರ ಕೊಡುಗೆಗಳನ್ನು ಹೇಳುತ್ತಾ ಹೋದರೆ ದಿನಗಳೇ ಸಾಲದು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ಶ್ಲಾಘಿಸಿದರು.
ಭಾರತದಲ್ಲೇ ಮೈಸೂರು ಸಂಸ್ಥಾನ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಕನ್ನಡ ಮತ್ತು ಸಾಹಿತ್ಯಕ ಪರಂಪರೆಗೆ ಕೊಡುಗೆ ನೀಡಿದೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಪರ ಕಾರ್ಯಕ್ರಮಗಳನ್ನು, ಜಯಚಾಮರಾಜ ಒಡೆಯರ್ ಅವರು ಸಂಗೀತ ಕೃತಿಗಳನ್ನು ರಚಿಸುವ ಮೂಲಕ ಕೊಡುಗೆ ನೀಡಿದರೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಈ ಪರಂಪರೆಯನ್ನು ಮುಂದುವರಿಸಿರು ಎಂದು ಹೇಳಿದರು.
‘ಮೈಸೂರಿನ ಸಂಸದರಾಗಿ, ರಾಜ್ಯ ಕ್ರಿಕೆಟ್ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಧಾನ ಪೋಷಕರಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಡಿಗೆ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.
ದಸರಾ ಮಹೋತ್ಸವದ ಧಾರ್ಮಿಕ ಪರಂಪರೆಯನ್ನು ಭಕ್ತಿ, ಗೌರವಗಳಿಂದ ಮುನ್ನಡೆಸಿದ ಕೀರ್ತಿಯೂ ಇವರಿಗೆ ಸಲ್ಲಬೇಕು. ಇವರೊಬ್ಬ ನಿರ್ಗರ್ವಿ, ಜನಮುಖಿ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವದವರಾಗಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರು ಸಂಘದ ಗೌರವಾಧ್ಯಕ್ಷರಾದ ಎಂ. ಕೆ. ಅಶೋಕ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ರಸೂಲ್,ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ,ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ್,KMK trust ಅದ್ಯಕ್ಷರಾದ ವಿಕ್ರಮ್ ಅಯ್ಯಂಗಾರ್, ಕುಂಚಿಟಿಗರ ಸಂಘದ ನಿರ್ದೇಶಕರಾದ ರವಿ,ಕರುಣಾಮಯಿ ಸಂಘದ ಅದ್ಯಕ್ಷರಾದ ಎಸ್ ಎನ್ ರಾಜೇಶ್, ರಾಕೇಶ್ ಕುಂಚಿಟಿಗ , ಎಸ್ ಎನ್ ರಾಜೇಶ್,ರವಿ ಕುಂಚುಟಿಗ ಮತ್ತಿತರರು ಹಾಜರಿದ್ದರು


Share