ಸಂಪಾದಕೀಯ: *ಕೋರೋಣ ಸ್ವಾಗತ- ಕರೋನಾ ಲಸಿಕೆಯನ್ನ.*

509
Share

ಈಗ ಬರುತ್ತೆ – ಆವಾಗ ಬರುತ್ತೆ ಎಂದು ಲಸಿಕೆ ಯನ್ನು ಜಪಿಸಿ ಸುತ್ತಿದ್ದವರಿಗೆ ಕೊನೆಗೂ ಹೊರಬಿತ್ತು ಸಿಹಿ ಹೂರಣ .2020 ವರ್ಷವನ್ನು ಕಾಡಿ ಬೇಡಿದ ಕರೋನಾ ಹೋಗಲಾಡಿಸಲು ಬಂದೇ ಬಿಟ್ಟಿತು ಭಾರತ ನಿರ್ಮಿತ ಲಸಿಕೆ ದ್ವಯ . ಮೊದಲು ಅಭಿನಂದನಾರ್ಹರು ನಮ್ಮ ಭಾರತದ ವಿಜ್ಞಾನಿಗಳು.ಕೋವಿಂದ್-19 ನ್ನು ಹತ್ತಿಕ್ಕಲು ಹಗಲಿರುಳು ಶ್ರಮಿಸಿದ ವಿಜ್ಞಾನಿಗಳು ಹಾಗೂ ಭಾರತ ಸರ್ಕಾರದ ದಿಟ್ಟ ಕ್ರಮ ಸ್ವಾಗತಾರ್ಹ .ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿ ಮುಂಬರುವ ಜನವರಿ ಹದಿನಾರು ಇಪ್ಪತ್ತು ಇಪ್ಪತ್ತ ಒಂದ ರಂದು ಭಾರತದಾದ್ಯಂತ 3ಕೋಟಿ ಜನರಿಗೆ ಮೊದಲ ಹಂತದಲ್ಲಿ 2 ಬಗೆಯ ಲಸಿಕೆಗಳಾ ದ ಕೋವಿಂದ್ ಶೀಲ್ಡ್ ಹಾಗೂ ಕೋ ವ್ಯಾಕ್ಸಿನ್ ಅನ್ನು ಹಂಚಲು ಸಂಪೂರ್ಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ಸದ್ಯದಲ್ಲೇ ಇನ್ನೂ 4ರೀತಿಯ ಲಸಿಕೆಗಳು ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದೇ ಸಂದರ್ಭದಲ್ಲಿ ಅವರು ಮಾತನಾಡಿ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ವಿಫಲಗೊಳಿಸುವುದಕ್ಕಾಗಿ ,ಕಾರ್ಪೊರೇಟ್ ವಲಯಗಳಲ್ಲಿ ಲಾಬಿ ಮಾಡುವ ಬಗ್ಗೆ ಎಚ್ಚರಿಕೆಯಿಂದ ಇರಲು ಸಹ ತಿಳಿಸಿದ್ದಾರೆ .ಪ್ರಧಾನಿಗಳ ಮಾತು ಅಕ್ಷರಸಹ ನಿಜ ಇಡೀ ವಿಶ್ವವೇ ನಲುಗಿ ಹೋಗಿರುವ ಈ ಸಂದರ್ಭ ಭಾರತದಲ್ಲಿ ಇದೀಗ 2 ರೀತಿಯ ಲಸಿಕೆಗಳನ್ನು ಹಂಚಲುಮುಂದಾಗಿರುವುದಕ್ಕೆ ಪಕ್ಷಬೇಧ ಮರೆತು ಇಡೀ ಭಾರತವೇ ಹೆಮ್ಮೆ ಪಡುತ್ತಾ ರೋಗದ ವಿರುದ್ಧ ಹೋರಾಡಬೇಕಾಗಿದೆ .ಕೇಂದ್ರದೊಂದಿಗೆ ಯಾರೇ ಒಬ್ಬರು ಅಪಸ್ವರವೆತ್ತದೇ ಪ್ರತಿಯೊಬ್ಬರ ಆರೋಗ್ಯಕ್ಕೆ ಹೆಚ್ಚು ಗಮನ ನೀಡಿ ಕೇಂದ್ರ ಸರ್ಕಾರದೊಂದಿಗೆ ಸ್ಪಂದಿಸಬೇಕಾಗಿದೆ.ಈ ಹೆಮ್ಮಾರಿ ರೋಗವು ಹೆಚ್ಚು ಹೆಚ್ಚು ಜನರಿಗೆ ತಲುಪದಂತೆ ಹಗಲಿರುಳು ಶ್ರಮಿಸಿದ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಪೋಲಿಸ್ ಗ್ರಾಮಾಂತರ ಗ್ರಾಮೀಣ ಪ್ರದೇಶದ ಪುರಸಭೆ ನಗರ ಪಾಲಿಕೆಗಳ ಸಿಬ್ಬಂದಿಗಳಿಗೆ ಮೊದಲು ಲಸಿಕೆ ನೀಡುವ ಬಗ್ಗೆ ತೆಗೆದುಕೊಂಡಿರುವ ಕ್ರಮ ಇಡೀ ವಿಶ್ವವೇ ಮೆಚ್ಚತಕ್ಕದ್ದು …ಔಷಧ ನೀಡುವ “ವೈದ್ಯ ಆರೋಗ್ಯವಾಗಿದ್ದರೆ ತಾನೇ ರೋಗಿ ಆರೋಗ್ಯ ವಾಗಲು ಸಾಧ್ಯ” ಎಂಬ ನಾಣ್ನುಡಿಯನ್ನು ಕೇಂದ್ರ ಪಾಲಿಸಲು ಹೊರಟಿರುವುದು ಮೆಚ್ಚತಕ್ಕದ್ದು .ರಾಜ್ಯ ಹಾಗು ಇಡೀ ಭಾರತದಪ್ರತಿಯೊಬ್ಬ ನಾಗರೀಕ ಸಂಯಮ ಮತ್ತು ಸಹಿಷ್ಣತೆಯಿಂದ ವರ್ತಿಸಿದರೆ ಕೆಲವೇ ತಿಂಗಳುಗಳಲ್ಲಿ ಎಲ್ಲರೂ ಲಸಿಕೆ ಪಡೆಯಬಹುದು . .ಮಹಾಜನರೇ ಈಗ ನಮ್ಮ – ನಿಮ್ಮ ಕೈಯಲ್ಲಿದೆ ರೋಗ ಮುಕ್ತ ಸಮಾಜ ನಿರ್ಮಾಣಮಾಡುವ ಹೊಣೆ .


Share