ಸಂಪಾದಕೀಯ : ಬಿಜೆಪಿಗೆ ಯಾವ ನೈತಿಕತೆನೂ ಇಲ್ಲ

57
Share

ಇಂದು ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಯಾಗಿ ಆರು ತಿಂಗಳಾದರೂ ಮುಖ್ಯಮಂತ್ರಿ ಇನ್ನೂ ಎಷ್ಟು ದಿನ ಇರುತ್ತಾರೆ ಎಂಬುದರ ಬಗ್ಗೆ ಒಂದು ನಿರ್ದಿಷ್ಟವಾದ ಮಾಹಿತಿ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲ , ಇನ್ನು ರಾಜ್ಯವನ್ನು ಯಾವ ರೀತಿ ಆಳುತ್ತಾರೆ ಎಂದು ಕೇಳಿದ್ದಾರೆ. ಇದು ನಿಜ ಇರಬಹುದು. ಆದರೆ ಇದನ್ನು ಪ್ರಶ್ನಿಸುವ ಮುಂಚೆ ಕರ್ನಾಟಕದಲ್ಲಿ ಇನ್ನೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಆರಿಸಿಲ್ಲ . ಇದರ ಬಗ್ಗೆ ಚಕಾರ ಎತ್ತಿಲ್ಲ. ಸರಿಯಾಗಿ ಪ್ರಶ್ನೆಸುವಂತಹ ವಿರೋಧಪಕ್ಷದ ನಾಯಕರೇ ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಬಹುದಿತ್ತು. ತಮ್ಮಲ್ಲೇ ತಪ್ಪಿಟ್ಟುಕೊಂಡು ಬೇರೆಯವರ ಬಗ್ಗೆ ಎತ್ತಾಡುತ್ತಿದ್ದಾರೆ . ಹಾಗೆ ಮಾಡಿದಾಗ ಜನರು ಇವರನ್ನು ಗಮನಿಸುತ್ತಿರುತ್ತಾರೆ ಎಂಬುವ ತಿಳುವಳಿಕೆ ಬಿಜೆಪಿಗೆ ಏಕೆ ಇನ್ನು ಬಂದಿಲ್ಲ ? ಇನ್ನು ಎಷ್ಟು ದಿನ ಕರ್ನಾಟಕ ಜನ ವಿರೋಧ ಪಕ್ಷದ ನಾಯಕ ಯಾರೆಂದು ತಿಳಿದುಕೊಳ್ಳಲು ಕಾಯಬೇಕೋ ? ಸಾರ್ವಜನಿಕರೆಲ್ಲರಿಗೂ ಇದೊಂದು ಪ್ರಶ್ನೆಯಾಗೇ ಉಳಿದಿದೆ.

ಒಂದು ರಾಷ್ಟ್ರೀಯ ಪಕ್ಷವಾಗಿ ಸರ್ಕಾರ ನಡೆಸುತ್ತಿರುವಂತಹ ಪಕ್ಷಕ್ಕೆ ಒಂದು ರಾಜ್ಯದ ವಿರೋಧ ಪಕ್ಷದ ನಾಯಕನನ್ನು ಆರಿಸುವುದಕ್ಕೂ ಸಾದ್ಯವಾಗದಷ್ಟು ಬಲಹೀನವಾಗಿದೆಯಾ ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿ ಬಗ್ಗೆ ಕುಹಕವಾಡುತ್ತಿದೆ.


Share