ಸಚಿನ್ ತೆಂಡೂಲ್ಕರ್ ತಮ್ಮ ಕೊನೆ ಆಟದ ಬಗ್ಗೆ ಮಂಡಳಿಯಿಂದ ಕೇಳಿದ ಸಹಾಯ ಯಾವುದು ?

313
Share

ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿಯಾದ ದಿನವು ದೇಶದ ಮತ್ತು ಪ್ರಪಂಚದಾದ್ಯಂತದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಆತ್ಮಸಾಕ್ಷಿಯಲ್ಲಿ ಅಚ್ಚಳಿಯದ ದಿನವಾಗಿದೆ. ಸಚಿನ್ ನವೆಂಬರ್ 16, 2013 ರಂದು 200 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ 24 ವರ್ಷದ ವೃತ್ತಿಜೀವನಕ್ಕೆ ತೆರೆ ಎಳೆದರು, ಟೆಸ್ಟ್ ಮತ್ತು ODI ಎರಡರಲ್ಲೂ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗಳನ್ನು ಹೊಂದಿದ್ದಾರೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಪತ್ರಕರ್ತರೊಬ್ಬರೊಂದಿಗೆ ಮಾತನಾಡುತ್ತ ಅವರು ಮುಂಬೈನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದಾಗ, ಅವರು ತಮ್ಮ ತಾಯಿ ಬಂದು ಅವರ ಆಟವನ್ನು ವೀಕ್ಷಿಸಲು ಪಂದ್ಯವನ್ನು ತಮ್ಮ ಊರಿನಲ್ಲಿಯೇ ಇರಿಸುವಂತೆ ಬಿಸಿಸಿಐಗೆ ವಿನಂತಿಸಿದ್ದರು ಎಂದು ಹಂಚಿಕೊಂಡಿದ್ದಾರೆ.
“ನಾನು ನನ್ನ ಕೊನೆಯ ಪಂದ್ಯವನ್ನು ಆಡಲಿರುವಾಗ, ನಾನು ಮಂಡಳಿಗೆ… ಬಿಸಿಸಿಐಗೆ ಹೇಳಿದ್ದೇ, ಈ ಎರಡು ಪಂದ್ಯಗಳು ನನ್ನ ಕೊನೆಯದಾದ್ದರಂದ ನನ್ನ ಏಕೈಕ ವಿನಂತಿ ಮತ್ತು ನನ್ನ ಬಯಕೆಯೆಂದರೆ ನಾನು ನನ್ನ ಕೊನೆಯ ಪಂದ್ಯವನ್ನು ಮುಂಬೈನಲ್ಲಿ ಆಡುತ್ತೇನೆ. ತಾಯಿ ಕ್ರೀಡಾಂಗಣಕ್ಕೆ ಬಂದು ವೀಕ್ಷಿಸಬೇಕೆಂದು. ಹಾಗಾಗಿ ಮಂಡಳಿಯು ಮುಂಬೈನಲ್ಲಿ ಕೊನೆಯ ಪಂದ್ಯವನ್ನು ಆಯೋಜಿಸಲು ದಯೆಯಿಂದ ಒಪ್ಪಿಕೊಂಡರು.
24 ವರ್ಷಗಳಲ್ಲಿ ನಾನು ಆಡುವುದನ್ನು ನೇರವಾಗಿ ಅವರು ಇದು ಒಂದೇ ಬಾರಿ ನೋಡಿದ್ದು, ”ಎಂದು ಮಾಸ್ಟರ್ ಬ್ಲಾಸ್ಟರ್ ಹಂಚಿಕಿಂಡಿದ್ದಾರೆ.
“ಇದು ನಂಬಲಸಾಧ್ಯವಾಗಿತ್ತು, ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ಅವರು ತಾಯಿಯನ್ನು ಆ ಮೆಗಾ-ಸ್ಕ್ರೀನ್‌ನಲ್ಲಿ ತೋರಿಸಿದರು ಮತ್ತು ಅವಳಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ಮತ್ತು ಇಡೀ ಕ್ರೀಡಾಂಗಣವು ಅವಳ ಪ್ರತಿಕ್ರಿಯೆಯನ್ನು ನೋಡುತ್ತಿತ್ತು. ನಾನು ಭಾವುಕನಾಗಿದ್ದೆ ಮತ್ತು ಆ ಭಾವನೆಗಳಲ್ಲೂ ಆಟದ ಕಡೆ ಗಮನಹರಿಸಬೇಕಿತ್ತು. ಅದೊಂದು ಪ್ರಮುಖ ಓವರ್, ಕೊನೆಯ ಆರು ಎಸೆತಗಳು ಆದರೆ ಮೆಗಾ-ಸ್ಕ್ರೀನ್‌ನಲ್ಲಿ ನಾನು ನೋಡಿದ್ದು ಅಷ್ಟೇ ಮುಖ್ಯವಾಗಿತ್ತು,” ಎಂದು ಅವರು ಹೇಳಿದ್ದಾರೆ.


Share