ಸಮರ್ಥನಂ ಅಂಗವಿಕಲರ ಸಂಸ್ಧೆಯಿಂದ: ಕೋರೊನ ಸೈನಿಕರಿಗೆ ಸುರಕ್ಷತಾ ಕವಚ ವಿತರಣೆ

347
Share

ಸಮರ್ಥನಂ ಅಂಗವಿಕಲರ ಸಂಸ್ಧೆಯಿಂದ 3ನೇ ಹಂತದ ಮೈಸೂರಿನಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ದುಡಿಯುತ್ತಿರುವ ಕೋರೊನ ಸೈನಿಕರಿಗೆ ಸುರಕ್ಷತಾ ಕವಚವನ್ನು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

• ಸಮರ್ಥನಂ ಅಂಗವಿಕಲರ ಸಂಸ್ಧೆಯು 1997 ರಿಂದ ಭಾರತದಲ್ಲಿ ವಿಕಲಚೇತನರು ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಲಿದೆ. ಪ್ರಮುಖವಾಗಿ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಕಲಚೇತನರು ವೈಯಕ್ತಿಕ ಸ್ವಾವಲಂಬನೆಯನ್ನು ಸಾಧಿಸುವದಾಗಿದೆ ಮತ್ತು ಸಮಾಜದಲ್ಲಿ ತಮ್ಮದೇ ಆಗಿರುವ ಪ್ರಮುಖ ಹೆಜ್ಜೆಯನ್ನು ಇಡುವಲ್ಲಿ ಸಹಾಯಮಾಡುವತ್ತ ಕಾರ್ಯನಿರ್ವಹಿಸುತ್ತಿದೆ

• ದಿನಾಂಕ 27-07-2020 ರಂದು ಸೋಮವಾರ ವಲಯ-9 ಕಛೇರಿ ಆವರಣದಲ್ಲಿ ಕೋವಿಡ್-19 ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತರುವ ಮೈಸೂರು ಮಹಾನಗರ ವ್ಯಾಪ್ತಿಯ ಪೌರಕಾರ್ಮಿಕರಿಗೆ ಕೋಕಾ – ಕೋಲಾ ಪೌಂಡೇಷನ್ ಮತ್ತು ಯುನೈಟೆಡ್ ವೇ ಮುಂಬೈ ಇವರ ಸಹಯೋಗದೊಂದಿಗೆ ಸಮರ್ಥನಂ ಅಂಗವಿಕಲರ ಸಂಸ್ಧೆಯು ಸ್ಯಾನಿಟೈಜರ್, ಮಾಸ್ಕ್, ಹ್ಯಾಂಡ್ ವಾಷ್, ಮುಖ ಕವಚ, ಹ್ಯಾಂಡ್ ಗ್ಲಾವ್ಸ್ ಹಾಗು ಇತರ ಅಗತ್ಯ ಪರಿಕರಗಳನ್ನು ಸಂಕೇತಿಕವಾಗಿ ಕೋರೊನ ಸೈನಿಕರಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಉಪ ಪೌರರಾದ ಸಿ. ಶ್ರೀಧರ್, ವಿಕಲಚೇತನ ಅಧಿನಿಯಮ ವಿಶ್ರಾಂತ ಆಯುಕ್ತರಾದ ಕೆ.ವಿ.ರಾಜಣ್ಣ, ಪಾಲಿಕೆ ವಲಯ-9 ಆಯುಕ್ತರಾದ ಮುರಳಿಧರ್, ಸಮರ್ಥಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥರಾದ ಶಿವರಾಜು.ಎಂ ಹಾಗೂ ಸಿದ್ದರೂಢ ರವರು ಚಾಲನೆ ನೀಡಿದರು.

• ಉಪ ಮಹಾಪೌರರಾದ ಸಿ.ಶ್ರೀಧರ್ ಮಾತನಾಡಿ, ಸಮರ್ಥಂ ಅಂಗವಿಕಲರ ಸಂಸ್ಥೆಯು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಹಂತದ ಕೋವಿಡ್-19 ಪರಿಹಾರ ಕಾರ್ಯಚಟುವಟಿಕೆ ಮಾಡುತ್ತದ್ದು ದೇಶದ 13 ನಗರಗಳಲ್ಲಿ ಕೋವಿಡ್-19 ಪರಿಹಾರ ವಿತರಣಾ ಕಾರ್ಯಕ್ರಮ ಮಾಡಲಾಗಿದ್ದು, 11 ಆಸ್ವತ್ರೆಗಳಲ್ಲಿ ದುಡಿಯುತ್ತಿರುವ ವೈದ್ಯಕೀಯ ತರ್ತು ಸೇವಾ ಸಿಬ್ಬಂದಿಗಳಿಗೆ 20 ಸಾವಿರಕ್ಕೂ ಹೆಚ್ಚು ಪಿಪಿಇ ಕಿಟ್ ವಿತರಣೆ, 2 ಲಕ್ಷಕ್ಕೂ ಹೆಚ್ಚು ಜನರಿಗೆ ಪಡಿತರ ವಿತರಣೆ, ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗ ಕಳೆದುಕೊಂಡೆ ವಿಕಲಚೇತನರಿಗೆ ಜೀವನಾಧಾರವಾಗಲು ನಗರ ಪ್ರದೇಶದಲ್ಲಿ 7000/-ರೂ ಮತ್ತು ಗ್ರಾಮೀಣ ಪ್ರದೇಶದಲ್ಲಿ 5000/- ರೂ ರಂತೆ ನೇರ ನಗದು ವರ್ಗಾವಣೆ ಹಾಗೂ ಅಗತ್ಯವಿರುವ ವೈದ್ಯಕೀಯ ನೆರವು. ಎಂದು ಸಮರ್ಥನಂ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

• ವಿಶ್ರಾಂತ ಆಯುಕ್ತ ಕೆ.ವಿ.ರಾಜಣ್ಣ ಮಾತನಾಡಿ ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿಶ್ವ ಮಟ್ಟದಲ್ಲಿ ವಿಕಲಚೇತನರ ಅಭಿವೃದ್ದಿಗೆ ದುಡಿಯುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಧರ ಕ್ರಿಕೇಟ್ ತಂಡಗಳನ್ನು ಸಂಘಟನೆ ಮಾಡುವ ಮೂಲಕ ಅಂಧರ ಆಟಗಾರರನ್ನು ಮುಂಚೂಣಿ ತರುವುದರಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

• ಸಮರ್ಥನಂ ಅಂಗವಿಕಲರ ಸಂಸ್ಥೆಯ ವಿಭಾಗದ ಸಂಯೋಜಕ ಶಿವರಾಜು.ಎಂ ಮಾತನಾಡಿ ಸಮರ್ಥನಂ ಅಂಗವಿಕಲರ ಸಂಸ್ಥೆಯು ಆಶಾ, ಅಂಗನವಾಡಿ, ಸಮುದಾಯ ಆರೋಗ್ಯ ಮತ್ತು ಪೋಲೀಸ್ ಸೇರಿದಂತೆ 1,10,000 ವೈದ್ಯಕೀಯ ಪರಿಕರ ವಿತರಣೆ ಹಾಗೂ ಕೋರೊನಾ ಸೈನಿಕ 2500 ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಟ್ಯಾಬ್‍ಗಳು, ವರ್ಚುವಲ್ ಶಿಕ್ಷಣದ ಅಗತ್ಯ ವಸ್ತುಗಳು ಮತ್ತು ಬೇಸಿಗೆ ಶಿಬಿರ ಮಾಡಲಾಗಿದೆ. ಸಂಸ್ಥಯ ತನ್ನ ಎಲ್ಲಾ ಸಿಬ್ಬಂದಿಗಳ 1 ದಿನದ ವೇತನವನ್ನು (5ಲಕ್ಷ) ಸನ್ಮಾನ್ಯ ಮುಖ್ಯಮಂತ್ರಿಗಳು ಕೋವಿಡ್-19 ಪರಿಹಾರ ನಿಧಿಗೆ ನೀಡಲಾಯಿತು. ಸನ್ಮಾನ್ಯ ಪ್ರಧಾನ ಮಂತ್ರಿಗಳು ಹಾಗು ಸನ್ಮಾನ್ಯ ಮುಖ್ಯಮಂತ್ರಿಗಳು ನೇತೃತ್ವದಲ್ಲಿ ಕೋವಿಡ್-19 ಎಂಬ ಹೆಮ್ಮಾರಿಯನ್ನು ದೇಶ ಹಾಗೂ ರಾಜ್ಯದಿಂದ ನಿರ್ಮೂಲವಾಗಿ ರಾಜ್ಯ ಹಾಗು ರಾಷ್ಟ್ರ ಎಂದಿನಂತೆ ಆಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು ಎಂದು ತಿಳಿಸಿದರು.

• ಮೈಸೂರು ಮಹಾನಗರ ಪಾಲಿಕೆಯ ನರಸಿಂಹರಾಜ ಕ್ಷೇತ್ರ ಮತ್ತು ಚಾಮರಾಜ ಕ್ಷೇತ್ರದ ಎಲ್ಲಾ ವಲಯ ಕಛೇರಿಗಳ ಎಲ್ಲಾ ಪೌರಕಾರ್ಮಿಕರಿಗೆ ರಕ್ಷಣ ಕವಚ, ವೈದ್ಯಕೀಯ ಪರಿಕರಗಳನ್ನು ವಿತರಣೆ ಮಾಡಲಾಯಿತು.

• ಸದರಿ ಕಾರ್ಯಕ್ರಮದಲ್ಲಿ ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಶಿವರಾಜು.ಎಂ, ವಲಯ-9ರ ಆಯುಕ್ತರಾದ ಮುರಳಿಧರ್, ಸಂಸ್ಥೆಯ ದರ್ಶನ್, ಸಿದ್ದರೂಢ, ಪರಿಸರ ಅಭಿಯಂತರಾದ ಚೇತನ್ ಮತ್ತಿತ್ತರು ಭಾಗವಹಿಸಿದರು.

• ಹೆಚ್ಚಿನ ಮಾಹಿತಿಗಾಗಿ ಶಿವರಾಜ 8123725949


Share