ಸಮಾಜ ಸೇವೆಯಿಂದ ಬದುಕು ಸಾರ್ಥಕ

215
Share

 

ಸಮಾಜ ಸೇವೆಯಿಂದ ಬದುಕು ಸಾರ್ಥಕ : ಟಿ ಎಸ್ ಶ್ರೀವತ್ಸ

ಮೈಸೂರು: ಸಾಮಾಜಿಕ ಸೇವೆ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದು ಶಾಸಕರಾದ ಟಿ ಎಸ್ ಶ್ರೀವತ್ಸ ಹೇಳಿದರು.

ನಗರದ ಬೋಗಾದಿಯ ರವಿಶಂಕರ್ ಲೇಔಟ್ ನಲ್ಲಿ ಜೈ ಶ್ರೀ ರಾಮ್ ಯುವ ಬ್ರಿಗೇಡ್ ನೂತನ ಸಂಘವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು

ಮನುಷ್ಯನ ಹುಟ್ಟು ಮತ್ತು ಸಾವು ಸಹಜ. ಆದರೆ, ಇವರೆಡರ ಮಧ್ಯೆ ಹೇಗೆ ಬದುಕಬೇಕೆಂಬುದೇ ಜೀವನವಾಗಿದ್ದು, ಸ್ವಾರ್ಥಕ್ಕಾಗಿ ಬದುಕದೇ ಸಮಾಜ ಸೇವೆಗೆ ಮೀಸಲಾಗಿಡಬೇಕು. ಇದರಿಂದ ಬದುಕು ಸಾರ್ಥಕತೆಯ ಜತೆಗೆ ಸಮಾಧಾನವು ಇರುತ್ತದೆ. ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಮುಂತಾದವು ಉಪಕಾರದ ಕಾರ್ಯಕ್ರಮಗಳಾಗಿವೆ. ಇವು ಚಿಕ್ಕ ಕಾರ್ಯಕ್ರಮ ಎಂದುಕೊಳ್ಳದೇ ನಿರಂತರವಾಗಿ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುತ್ತಾ ಬರಬೇಕೆಂದರು

ಇದೇ ಸಂದರ್ಭದಲ್ಲಿ 35 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು, ಹಾಗೆಯೇ ಸುಮಾರು 100ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಡಿ, ಪ್ರಧಾನ ಕಾರ್ಯದರ್ಶಿ ಆರ್ ಮಹೇಶ್ ಕುಮಾರ್, ಉಪಾಧ್ಯಕ್ಷರಾದ ವೀರೇಶ್ ರೆಡ್ಡಿ, ಸಹ ಕಾರ್ಯದರ್ಶಿ ಪ್ರದೀಪ್ ಕುಮಾರ್, ಖಜಾಂಚಿ ಪ್ರವೀಣ್ ಕುಮಾರ್, ಮಾಜಿನಗರ ಪಾಲಿಕಾ ಸದಸ್ಯ ಎಂ ಬಿ ಜಗದೀಶ್, ಬಿಜೆಪಿ ಮುಖಂಡ ಎಂ ಆರ್ ಬಾಲಕೃಷ್ಣ, ಹಾಗೂ ಇನ್ನಿತರರು ಹಾಜರಿದ್ದರು


Share