ಸಾಗರೆ ಶ್ರೀ ಮಾರಮ್ಮನವರ ಬಸವ ಇನ್ನಿಲ್ಲ

389
Share

ಸರಗೂರು: ತಾಲೂಕಿನ ಸಮೀಪದ ಸಾಗರೆ ಶ್ರೀ ಮಾರಮ್ಮನವರ ಬಸವ ಇನ್ನಿಲ್ಲ
ಈ ಬಸವ ಕಳೆದ 20 ವರ್ಷಗಳಿಂದ ಸಾಗರೆ ಜನರ ಹಾಗೂ ಹೊರಗಡೆಯಿಂದ ಬಂದಂತಹ ಸಾವಿರಾರು ಭಕ್ತರಿಗೆ ಪ್ರೀತಿ ಪಾತ್ರವಾಗಿತ್ತು, ಬಸವ ತೀರ ಮಡುವಂತಿಕೆಯನ್ನು ಪಾಲಿಸುತ್ತಿತ್ತು, ಈ ಬಸವ ಮನೆ ಮನೆಗೆ ಹೋಗುವಾಗ ಯಾರಾದರು ಬೈದರೆ ಬಸವ ಅವರ ಮನೆಗೆ ವಾರಗಟ್ಟಲೆ ಹೋಗುತ್ತಿರಲಿಲ್ಲ ವಂತೆ ಮೃತ ಬಸವನಿಗೆ ಊರ ಹೆಂಗಸರು ತಮ್ಮ ಸಾಂಪ್ರದಾಯಿಕ ಹಾಡುಗಳನ್ನಾಡಿ ಸಂತಾಪ ಸೂಚಿಸಿದರು, ಬಸವನಿಗೆ ಭಾರಿ ಗಾತ್ರದ ಹಾಸಿಗೆಯಿಂದ ಮಲಗಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಂತ್ಯಕ್ರಿಯೆಗೆ ಬರ ಮಾಡಿಕೊಂಡು ಬೀಚನಹಳ್ಳಿ ಪುರದ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸನ್ನಿಧಿಯಲ್ಲಿ ಸ್ವಾಮೀಜಿಗಳ ಮುಖಾಂತರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.
ರಾತ್ರಿ ಹರಿಕಥೆಯನ್ನು ಆಯೋಜಿಸಿದಿದ್ದು ವಿಶೇಷವಾಗಿತ್ತು. ಹಾಗೂ ಸಾಗರೆ ಗ್ರಾಮದಲ್ಲಿ ಹಬ್ಬದ ವಾತಾವರಣ ಎದ್ದು ಕಾಣುತ್ತಿತ್ತು.
ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದ ಬಸವ ಅಗಲಿದ ಕಾರಣ ಜನರ ದೃಶ್ಯವಿದು ಮತ್ತು ನಮ್ಮ ಗ್ರಾಮೀಣ ಜನರು ಎಷ್ಟು ಹೃದಯವಂತರು ಹಾಗೂ ಆರಾದಕರು ಎಂಬುವುದನ್ನು ತೊರಿಸುವ ದೃಶ್ಯವಿದು.

ಹಲವು ವಷ೯ಗಳಿಂದ ಗ್ರಾಮದ ಮಗನಾಗಿ, ದೈವವಾಗಿ ಇದ್ದ ಬಸವ ನೆನ್ನೆಯಷ್ಟೆ ಗ್ರಾಮದ ಜ ನರನ್ನ ಅಗಲಿತು. ಈ ಅಗಲಿಕೆಯನ್ನ ಜನರು ಜೀಣಿ೯ಸಿಕೊಳ್ಳಲಾಗುತ್ತಿಲ್ಲ ಅನ್ನುತ್ತಾರೆ ಗ್ರಾಮದ ಜನರು.

ತಮ್ಮ ಕುಟುಂಬದ ಸದಸ್ಯನಂತೆ ಅದರ ಅಂತ್ಯಕ್ರಿಯೆಯನ್ನು ಬಹಳ ಗೌರವ ಪೂವ೯ಕವಾಗಿ ಗ್ರಾಮದ ಜನರು ನಡೆಸಿದರು.

ಈ ದೃಶ್ಯವನ್ನು ನೋಡುವಾಗ ಮನುಷ್ಯ ಎಷ್ಟೆ ಕೆಟ್ಟವನೆಂದರೂ, , ಮಾನವಿಯತೆ ಇನ್ನೂ ಕೂಡ ಬಹಳ ಆಳವಾಗಿ ಇದೆ, ಕಳೆದುಕೊಂಡಿಲ್ಲ ಎಂಬುದನ್ನು ಸಾರುವ ಸಂದೇಶವಾಗಿದೆ.
ಈ ಸಂದರ್ಭದಲ್ಲಿ ಸಾಗರೆ ಗ್ರಾಮದ ಎಲ್ಲ ಜನಾಂಗದ ಯಜಮಾನ್ರು ಗಳು ಮುಖಂಡರುಗಳು ಹೆಂಗಸರು ಯುವಕರು ಹೆಂಗಸರು ಯುವಕರು ಮಕ್ಕಳ ಒಳಗೂಡಿ ದಾಳಿಂಬೆ, ಸೇಬು, ಮೂಸಂಬಿ, ಕಿತ್ತಳೆ, ನೋಟುಗಳ ಮುಖಾಂತರ ಬಾರಿ ಹೂವಿನ ಸುರಿಮಳೆಯೊಂದಿಗೆ ನೆರವೇರಿತು.


Share