ಸುಟ್ಟು ಉರಿಯುತ್ತಿದ್ದ ಯುವತಿ ದೇಹ ಪತ್ತೆ

1114
Share

https://www.facebook.com/493761640834587/posts/1563647317179342/?sfnsn=wiwspmo
ಸುಟ್ಟು ಉರಿಯುತ್ತಿದ್ದ ಯುವತಿಯ ದೇಹ ಒಂದು ಪತ್ತೆಯಾಗಿರುವ ಘಟನೆ ವರದಿಯಾಗಿದೆ .
ಹಾಡ ಹಗಲೇ ಬೆಂಕಿ ಹಚ್ಚಿ ಯುವತಿಯ ಕೊಲೆ?
ಮೈಸೂರು ; ಇಲ್ಲಿಗೆ ಸಮೀಪದ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಬೆಂಕಿ ಹಚ್ಚಿ ಯುವತಿಯೊಬ್ಬಳನ್ನು ಕೊಲೆ ಮಾಡಲಾಗಿದೆ. ಪಿರಿಯಾಪಟ್ಟಣದಿಂದ ೨೦ ಕಿಮಿ ದೂರದ ರಾವಂದೂರಿನ ಬಳಿಯ ಕಲ್ಲೂರು ಎಂಬಲ್ಲಿ ಇಂದು ಬೆಳಿಗ್ಗೆ ೭ ಘಂಟೆಯ ಸುಮಾರಿಗೆ ರಸ್ತೆ ಬದಿಯಲ್ಲೆ ಅಪರಿಚಿತ ಯುವತಿಯೊಬ್ಬಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಮೃತ ಯುವತಿಗೆ ೧೬ ರಿಂದ ೧೮ ವರ್ಷ ಪ್ರಾಯ ಇರಬಹುದೆಂದು ಪೋಲೀಸರು ಅಂದಾಜಿಸಿದ್ದು ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಸಿ ಬಿ ರಿಷ್ಯಂತ್‌ ಭೇಟಿ ನೀಡಿ ಪರಿಶೀಲಿಸಿದರು. ಮೈಸೂರಿನಿಂದ ಪೋಲೀಸ್‌ ಶ್ವಾನ ದಳವನ್ನು ಸ್ಥಳಕ್ಕೆ ಕರೆಸಿದ್ದರೂ ಹೆಚ್ಚಿನ ಪ್ರಯೋಜನ ಆಗಿಲ್ಲ. ಪಿರಿಯಾಪಟ್ಟಣ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Share