ಸ್ವಾಮಿ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ

292
Share

 

ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನೋತ್ಸವದ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಿವೇಕಾನಂದ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಿವೇಕಾನಂದ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ಅವರು ಮನುಷ್ಯನ ಮೌಲ್ಯವನ್ನು ತಿಳಿಸಿದ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡುತ್ತೇವೆ. ದೇಶದಾದ್ಯಂತ ಅಲ್ಲದೆ ಪ್ರಪಂಚದ ಬೇರೆ ಬೇರೆ ಕಡೆಯಲ್ಲಿ ಸಂಚಾರ ಮಾಡಿ ಭಾರತೀಯತೆಯ ವಿಚಾರವನ್ನು ಜನ ಮಾನಸಕ್ಕೆ ಕೊಟ್ಟವರು ವಿವೇಕಾನಂದರು. ಇಂದು ಯುವ ದಿನವನ್ನಾಗಿ ಆಚರಿಸುತ್ತೇವೆ ಯಾಕೆಂದರೆ ವಿವೇಕಾನಂದರು ಕೇವಲ 32 ನೆಯ ವಯಸ್ಸಿನಲ್ಲಿ ವಿಶ್ವಕ್ಕೆ ಭಾರತದ ತಾಕತ್ತನ್ನು ತಿಳಿಸಿಕೊಟ್ಟವರು, ವಿವೇಕಾನಂದರ ಜೀವನ ನಮ್ಮ ಯುವ ಜನತೆಗೆ ಸ್ಫೂರ್ತಿ. ಸ್ವಾಮಿ ವಿವೇಕಾನಂದರ ಮತ್ತು ಮೈಸೂರಿನ ನಂಟು ಕೂಡಾ ಹಾಗೇ ಇದೆ. ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದ ರಾಜಮಹಾರಾಜರುಗಳಲ್ಲಿ ನಮ್ಮ ಮೈಸೂರು ಒಡೆಯರು ಕೂಡ ಒಬ್ಬರು. ಅವರೂ ಕೂಡ ಸ್ವಾಮೀಜಿಗಳ ಬುದ್ದಿಮತ್ತೆಯನ್ನು ಕಂಡು ಪ್ರಭಾವಿತರಾಗಿ ಅವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಬಲವಂತ ಪಡಿಸಿ ಅದರ ಖರ್ಚುವೆಚ್ಚಗಳನ್ನು ಭರಿಸು ಮುಂದಾಗುತ್ತಾರೆ.
ಸಿನಿಮಾ ನಟ,ನಟಿಯರು ನಮಗೆ ಆದರ್ಶವಾಗಬಾರದು ವಿವೇಕಾನಂದರಂತವರು ನಮಗೆ ನಮ್ಮ ಯುವ ಜನತೆಗೆ ಸ್ಪೂರ್ತಿಯಾಗಬೇಕು. ತಮ್ಮ ಹೆಸರು, ಪ್ರಚಾರಕ್ಕೋಸ್ಕರವಾಗಿ ಕೆಲವರು ಸುದ್ದಿಯಾಗುತ್ತಾರೆ. ವಿವೇಕಾನಂದರು ಮೈಸೂರಿಗೆ ಬಂದಾಗ ತಂಗಿದ್ದ ಸ್ಥಳವನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ನಮ್ಮೆಲ್ಲರ ಬಯಕೆ, ಕೆಲವರು ಅದಕ್ಕೆ ರಾಜಕೀಯ ತೇಪೆ ಹಚ್ಚಿರುವುದು ದುರದೃಷ್ಟಕರ.

ರಾಮಕೃಷ್ಣಾಶ್ರಮದ ಸ್ವಾಮೀಜಿ ಮಾತನಾಡಿ ಗಾಂಧೀಜಿಯಂತವರು ಕೂಡಾ ಸ್ವಾಮಿ ವಿವೇಕಾನಂದರ ಜೀವನ ಕೃತಿಯನ್ನು ಓದಿದ ಮೇಲೆ ನನಗೆ ದೇಶಭಕ್ತಿ ಸಹಸ್ರಮಡಿ ಹೆಚ್ಚಾಯಿತು ಎಂದು ಹೇಳಿದ್ದರು. ಸ್ವಾಮಿ ವಿವೇಕಾನಂದರು ಹಿಮಾಲಯದಲ್ಲಿ ಹೋಗಿ ತಪಸ್ಸಿಗೆ ಕೂರುತ್ತೇನೆ ಎಂದು ಪರಮಹಂಸರ ಬಳಿಯಲ್ಲಿ ಸ್ವಾಮಿ ವಿವೇಕಾನಂದರು ಹೇಳಿದಾಗ ಪರಮಹಂಸರು ನಿನ್ನ ಆನಂದದಲ್ಲಿ ಕುಳಿತುಕೊಳ್ಳುವುದು ಸ್ವಾರ್ಥ, ಸುತ್ತ ಮುತ್ತಲಿನ ಜನರನ್ನು ನೋಡು ಎಲ್ಲರಲ್ಲೂ ಸಹ ದೈವಾಂಶವಿದೆ ಅದನ್ನು ಎಚ್ಚರಿಸುವ ಕೆಲಸ ಮಾಡು ಎಂದು ಹೇಳಿದರು. ಸ್ವಾಮಿ ವಿವೇಕಾನಂದರು ಕೊಟ್ಟ ಮೌಲ್ಯ ಗಳು ನಮ್ಮಲ್ಲಿವೆ ಅದರಲ್ಲಿ ನಡೆಯುವಂತಹ ಕೆಲಸವಾಗಬೇಕು ಎಂದು ಮಾತನಾಡಿದರು

ಸದರಿ ಕಾರ್ಯಕ್ರಮದಲ್ಲಿ ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೆಲು, ಪ್ರಧಾನಕಾರ್ಯದರ್ಶಿಯಾದ ಓಂ.ಶ್ರೀನಿವಾಸ್, ಕೇಬಲ್ ನಾಗೇಂದ್ರ, ಸ್ಥಳೀಯ ನಗರಪಾಲಿಕಾ ಸದಸ್ಯರುಗಳಾದ ಸುನಂದಾ ಪಾಲನೇತ್ರ, ಚಂಪಕಾ,ರೂಪ. ವಿವಿಧ ಪದಾಧಿಕಾರಿಗಳು ,ಕಾರ್ಯಕರ್ತರು, ಸ್ಥಳೀಯ ನಾಗರೀಕರು ಹಾಜರಿದ್ದರು


Share