ಹಿಮಾಲಯದಲ್ಲಿ ಮಾಂಸಹಾರಿ ಜಾತಿಯ ಗಿಡ ಪತ್ತೆ

306
Share

ಬಹಳ ಅಪರೂಪದ ಮಾಂಸಾಹಾರಿ ಸಸ್ಯ ಪ್ರಭೇದ. ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಇದು ಯುಟ್ರಿಕ್ಯುಲೇರಿಯಾ ಫರ್ಸೆಲ್ಲಾಟಾ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಉತ್ತರಾಖಂಡದ ಅರಣ್ಯ ಇಲಾಖೆಯ ಸಂಶೋಧನಾ ತಂಡವು ಚಮೋಲಿ ಜಿಲ್ಲೆಯಲ್ಲಿರುವ ಸುಂದರವಾದ ಮಂಡಲ ಕಣಿವೆಯಲ್ಲಿ ಅಪರೂಪದ ಪ್ರಭೇದಗಳನ್ನು ಪತ್ತೆ ಮಾಡಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್ ಚತುರ್ವೇದಿ ತಿಳಿಸಿದ್ದಾರೆ.


Share