ಹೆಚ್ಡಿಕೆ v/s ಸುಮಲತಾ ಕೀಳುಮಟ್ಟದ ಸಂಸ್ಕೃತಿಯ ವಾಕ್ಸಮರ

349
Share

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತು ಅವರ ಸಂಸ್ಕಾರವನ್ನು ತೋರಿಸುತ್ತೆ . ಮಹಿಳೆಯರನ್ನು ಕುರಿತ ಹೇಳಿಕೆಗಳು ಅವರ ಸಂಸ್ಕೃತಿಯೇನೆಂದು ತಿಳಿಸುತ್ತದೆ ಎಂದು ಸಂಸದೆ ಸುಮಲತಾ ಕೆಂಡಾಮಂಡಲ ವಾಗಿದ್ದಾರೆ.
ಇಂದು ಬೆಳಿಗ್ಗೆಯಷ್ಟೇ ಕೆಲವರ ಚಿತಾವಣೆಯಿಂದ ಮೈ ಶುಗರ್ ಫ್ಯಾಕ್ಟರಿ ಖಾಸಗಿ ಪಾಲಾಗುತ್ತಿದೆ ಎಂದು ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಮನವಿ ಸಲ್ಲಿಸಿ ಪತ್ರ ಕರ್ತರೊಂದಿಗೆ ಮಾತನಾಡುತ್ತಾ ಸುಮಲತಾ ವಿರುದ್ಧ ವಾಕ್ ಸಮರ ಸಾರಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಹೇಳಿಕೆಗಳನ್ನು ನೀಡಿರುವ ಸುಮಲತಾ ತಾವು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದಾಗಲೆಲ್ಲಾ ಈ ರೀತಿಯ ಆರೋಪಗಳು ಬರುತ್ತಿವೆ. ಕೆಆರ್ ಎಸ್ ಸುತ್ತ ಮುತ್ತಲ ಗಣಿಕಾರಿಕೆಯಿಂದ ಡ್ಯಾಮ್ ಗೆ ಹಾನಿ ಆಗುವ ಸಾಧ್ಯತೆ ಇದೆ ಇದರ ಬಗ್ಗೆ ತೀವ್ರ ತನಿಖೆಯಾಗಬೇಕೆಂದು ಆಗ್ರಹಿಸಿದೆ.ಡ್ಯಾಮ್ ಬಿರುಕು ಬಿಟ್ಟಿಲ್ಲ ಎನ್ನುವುದಾದರೆ 65ಕೋಟಿ ರೂ ಗಳ ಖರ್ಚು ವೆಚ್ಚ ರಿಪೇರಿಗೆ ಹೇಗಾಯಿತು? ಮಂಡ್ಯದ ಜನತೆಯ ಹಿತದೃಷ್ಟಿಯಿಂದ ಯಾವುದೇ ರೂಪದಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡಬೇಕು ಎಂಬುದೇ,ತಮ್ಮ ಮುತುವರ್ಜಿ ಆಗಿದ್ದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇನೆ ಅಷ್ಟೆ . ತಾವು ಯಾರ ಹೇಳಿಕೆಗಳಿಗೂ ಹೆದರುವುದಿಲ್ಲ ಭ್ರಷ್ಟಾಚಾರ ಅಕ್ರಮಗಳು ಕಂಡಾಗಲೆಲ್ಲ ಧ್ವನಿ ಎತ್ತುತ್ತೇನೆ ಎಂದರು. ಚಿತ್ರಕೃಪೆ ವಿಜಯ ಕರ್ನಾಟಕ ಮತ್ತು ಇಂಡಿಯನ್ ಎಕ್ಸ್ಪ್ರೆಸ್

 


Share