ಹೊಸ ವರ್ಷಾಚರಣೆ: ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

194
Share

 

ಹೊಸ ವರ್ಷಾಚರಣೆ: ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

ಮೈಸೂರು,ಡಿ.3 ಮೈಸೂರು ನಗರದ ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ಬೆಟ್ಟವು ಮೈಸೂರಿನ ಕೇಂದ್ರ ಸ್ಥಾನವಾಗಿರುವುದರಿಂದ ದೇವರ ದರ್ಶನ ಪಡೆಯಲ್ಲೂ ಪ್ರತಿದಿನ ಸಾವಿರಾರು ಭಕ್ತಾದಿಗಳು ದಿನನಿತ್ಯ ಬಂದು ದರ್ಶನವನ್ನು ಪಡೆಯುತ್ತಿರುತ್ತಾರೆ. ಪುರಾಣ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿರುವ ಚಾಮುಂಡಿ ಬೆಟ್ಟವು ಮೀಸಲು ಅರಣ್ಯ ಪ್ರದೇಶವಾಗಿರುವ ಕಾರಣ ಹೊಸ ವರ್ಷ ಸಂಭ್ರಮ ಆಚರಣೆಗೆ ರಾತ್ರಿ ಸಮಯದಲ್ಲಿ ಬಂದು ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ 2022 ಡಿಸೆಂಬರ್ 31 ರಂದು ರಾತ್ರಿ 9 ಗಂಟೆಯಿAದ 2023ರ ಜನವರಿ 1 ರ  ಬೆಳಿಗ್ಗೆ 5 ಗಂಟೆಯ ವರೆಗೆ ಚಾಮುಂಡಿ ಬೆಟ್ಟದ ನಿವಾಸಿಗಳನ್ನು ಹೊರತು ಪಡಿಸಿ ಸೆಕ್ಷನ್ 144 ಪ್ರಕಾರ ಸಾರ್ವಜನಿಕರು ಹಾಗೂ ವಾಹನಗಳ ಪ್ರವೇಶವನ್ನು ಚಾಮುಂಡಿಬೆಟ್ಟಕ್ಕೆ ನಿರ್ಬಂಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ ಅವರು ನಿಷೇಧಾಜ್ಞೆಯನ್ನು ಜಾರಿಗೊಳಿಸಿರುತ್ತಾರೆ


Share